ಗೆದ್ದ ಬಳಿಕವೂ ಕಾರ್ಯಕರ್ತರ ಜತೆ ನಿಲ್ಲುವ ನಾಯಕ ಪ್ರಸಾದ್‌ರಾಜ್ – ಪ್ರಖ್ಯಾತ್ ಶೆಟ್ಟಿ
ತನ್ನ ಮನೆ ಸುತ್ತಮುತ್ತಲಿನ ವ್ಯಕ್ತಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಹಾಗೆ ಮನ ಒಲಿಸಬೇಕು
Team Udayavani, Apr 27, 2023, 4:10 PM IST
ಮಲ್ಪೆ,: ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ಕಾಂಗ್ರೆಸ್ ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆ ತೆಂಕನಿಡಿಯೂರ್ ವಾರ್ಡ್ ಕಾಂಗ್ರೆಸ್ ಮುಖಂಡರಾದ ಸದಾಶಿವ ಕಟ್ಟೆಗುಡ್ಡೆ ನೇತೃತ್ವದಲ್ಲಿ ರಾದ್ಮಾ ರೆಸಿಡೆನ್ಸಿಯಲ್ಲಿ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಪ್ರತಿ ಬೂತ್ ಪ್ರತಿ ಒಬ್ಬ ಕಾರ್ಯಕರ್ತ ಕೂಡ ತಾನೇ ಪ್ರಸಾದ್ ರಾಜ್ ಕಾಂಚನ್ ಎಂಬ ರೀತಿಯಲ್ಲಿ ಕೆಲಸ ಮಾಡಬೇಕು. ಪ್ರತಿಯೊಬ್ಬರೂ ತನ್ನ ಮನೆ ಸುತ್ತಮುತ್ತಲಿನ ವ್ಯಕ್ತಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಹಾಗೆ ಮನ ಒಲಿಸಬೇಕು. ಅದಲ್ಲದೇ ಮತದಾನದ ದಿನ ತಾವೇ ಖುದ್ದಾಗಿ ಅವರೊಂದಿಗೆ ಇದ್ದು ಅವರ ಮತ ಕಾಂಗ್ರೆಸ್‌ಗೆ ಬರುವ ಹಾಗೆ ಮಾಡಿದರೆ ತಾನು ಶಾಸಕನಾಗಿ ಆಯ್ಕೆ ಆಗುವುದರಲ್ಲಿ ಅನುಮಾನ ಇಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮಾತನಾಡಿ, ಪ್ರಸಾದ್ ಖಂಡಿತವಾಗಿಯೂ ಗೆದ್ದ ನಂತರವೂ ಕಾರ್ಯಕರ್ತರ ಜತೆ ಇದ್ದು ಕಾರ್ಯಕರ್ತರನ್ನೂ ನಾಯಕರಾಗಿ ಬೆಳೆಸುತ್ತಾರೆ ಎಂಬ ಭರವಸೆ ನೀಡಿದರು.
ಸಭೆಯಲ್ಲಿ ಉಡುಪಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್,ಅಮƒತ ಶೆಣೈ, ಮಮತಾ ಶೆಟ್ಟಿ, ರವಿರಾಜ್, ಧನಂಜಯ್ ಕುಂದರ್, ಕೀರ್ತಿ ಶೆಟ್ಟಿ , ಗೋಪಾಲಕೃಷ್ಣ ಶೆಟ್ಟಿ, ನಾಗೇಶ್ ದೇವಾಡಿಗ, ಮೀನಾ ಪಿಂಟೊ, ಯತೀಶ್ ಕರ್ಕೇರ, ಗಣೇಶ್ ನೇರ್ಗಿ, ಸುಕೇಶ್ ಕುಂದರ್, ಸುರೇಶ್ ಶೆಟ್ಟಿ ಬನ್ನಂಜೆ, ಮಹಾಬಲ ಕುಂದರ್, ಹಮ್ಮದ್, ನಾಸೀರ್, ಮತ್ತಿತರ ಹಿರಿಯರು ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.