ಟೋಕಿಯೊ ಒಲಿಂಪಿಕ್ಸ್ ಟ್ರಯಲ್ಸ್‌ಗೆ ಗರ್ಭಿಣಿ ಆ್ಯತ್ಲೀಟ್!
Team Udayavani, Jul 2, 2021, 7:00 AM IST
ನ್ಯೂಯಾರ್ಕ್: ಇದು ಅಮೆರಿಕದ ಹೆಪ್ಟತ್ಲೀಟ್ ಲಿಂಡ್ಸೆ ಫ್ಲಾಶ್ ಅವರ ಸಾಹಸಗಾಥೆ. 31 ವರ್ಷದ ಫ್ಲಾಶ್ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಂಕಣಕ್ಕಿಳಿಯಲಿದ್ದಾರೆ. ಇದರಲ್ಲೇನೂ ವಿಶೇಷವಿಲ್ಲ, ಆದರೆ ಫ್ಲಾಶ್ ನಾಲ್ಕೂವರೆ ತಿಂಗಳ ಗರ್ಭಿಣಿ! ಇದು ಎಲ್ಲರ ಹುಬ್ಬೇರುವಂತೆ ಮಾಡಿದೆ.
“ಗರ್ಭಿಣಿಯರ ಓಟದ ಕುರಿತು, ಅವರ ಆಭ್ಯಾಸದ ಕುರಿತು ಅದೆಷ್ಟೋ ಕತೆಗಳಿವೆ. ನನಗಿದು ಖುಷಿ ಕೊಡುವ ಸಂಗತಿ. ಮಹಿಳೆಯೊಬ್ಬಳಿಗೆ ಇದೂ ಸಾಧ್ಯ ಎಂಬುದನ್ನು ಸಾಧಿಸಿ ತೋರುವುದು ನನ್ನ ಪಾಲಿನ ಸಂತಸದ ವಿಷಯ. ಮಾನಸಿಕವಾಗಿ ನಾವು ಗಟ್ಟಿಗೊಳ್ಳಬೇಕು, ಅಷ್ಟೇ…’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಲಿಂಡ್ಸೆ ಫ್ಲಾಶ್.
2012 ಮತ್ತು 2016 ಒಲಿಂಪಿಕ್ಸ್ ಆಯ್ಕೆ ಟ್ರಯಲ್ಸ್‌ನಲ್ಲೂ ಲಿಂಡ್ಸೆ ಫ್ಲಾಶ್ ಪಾಲ್ಗೊಂಡಿದ್ದರು. ಆದರೆ ಅಲ್ಲಿ ಕ್ರಮವಾಗಿ 14ನೇ ಹಾಗೂ 9ನೇ ಸ್ಥಾನ ಪಡೆದು ಅವಕಾಶ ವಂಚಿತರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.