ಕಳಪೆ ಕಾಮಗಾರಿ :ಮುಖ್ಯ ಅಭಿಯಂತರರಿಂದ ಗುತ್ತಿಗೆದಾರನ ತರಾಟೆ
Team Udayavani, Jul 28, 2021, 2:34 PM IST
ಗಂಗಾವತಿ : ಗಂಗಾವತಿ ನಗರದ ಮಧ್ಯಭಾಗದಲ್ಲಿರುವ ಗಾಂಧಿ ವೃತ್ತದ ಬಳಿ ಚರಂಡಿ ಸೇತುವೆ ನಿರ್ಮಾಣ ಕಾಮಗಾರಿಯ ಆರ್ ಟಿಸಿಯನ್ನು ಕಳಪೆಯಾಗಿ ಹಾಕಲಾಗುತ್ತಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಭಿಯಂತರ ಗಂಗಾಧರ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆ ನೀಡದ ಘಟನೆ ಬುಧವಾರ ಬೆಳಿಗ್ಗೆ ಜರುಗಿದೆ.
ಗಾಂಧಿ ಚೌಕ್ ನಲ್ಲಿ ಚರಂಡಿ ಮತ್ತು ಸೇತುವೆಯ ದುರಸ್ತಿ ಕಾರ್ಯ ಮೂವತ್ತು ಲಕ್ಷ₹ವೆಚ್ಚದಲ್ಲಿ ನಡೆಯುತ್ತಿದ್ದು ಕಳೆದ 45 ದಿನ ಗಳಿಂದ ವಿಳಂಬವಾಗಿ ಕಾಮಗಾರಿ ನಡೆಯುತ್ತಿದೆ ಈ ಕುರಿತು ಸ್ಥಳೀಯ ಜನರು ಮತ್ತು ಸುತ್ತಮುತ್ತಲಿನ ಅಂಗಡಿಗಳ ವ್ಯಾಪಾರಿಗಳು ಜಿಲ್ಲಾಡಳಿತಕ್ಕೆ ಮತ್ತು ನಗರ ಆಡಳಿತಕ್ಕೆ ದೂರು ನೀಡಿದ್ದು ಬುಧವಾರ ಚರಂಡಿಯ ಸೇತುವೆ ಆರ್ ಸಿಸಿ ಹಾಕುವ ಸಂದರ್ಭದಲ್ಲಿ ಸ್ಥಳಕ್ಕೆ ಅಭಿಯಂತರ ಗಂಗಾಧರ ಭೇಟಿ ನೀಡಿ ಪರಿಶೀಲನೆ ಮಾಡಿದರು.ಕಡಿಮೆ ಮರಳು ಮತ್ತು ಹೆಚ್ಚು ನೀರು ಬಳಕೆ ಮಾಡಿ ಕಾಮಗಾರಿ ನಿರ್ವಹಣೆ ಮಾಡುತ್ತಿದ್ದರಿಂದ ಆರ್ ಸಿಸಿ ಕಳಪೆಯಾಗಿರುವುದನ್ನು ಕಂಡು ಅಧಿಕಾರಿ ಕೋಪಗೊಂಡು
ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದರು.ಈ ಮಧ್ಯೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಮತ್ತು ಗುಣಮಟ್ಟ ಪರಿಶೀಲನೆ ಮಾಡುತ್ತಿರುವ ಎನ್ ಜಿಒ ಅಭಿಯಂತರರನ್ನು ಗಂಗಾಧರ್ ತೀವ್ರ ತರಾಟೆಗೆ ತೆಗೆದುಕೊಂಡರು.ಎನ್ ಜಿಒ ಅಭಿಯಂತರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಗಂಗಾಧರ್ ಮತ್ತು ಎನ್ ಜಿಒ ಅಧಿಕಾರಿ ವಿರುದ್ಧ ವಾಗ್ವಾದ ಜರುಗಿತು.ಈ ಮಧ್ಯೆ ಸುತ್ತಲಿನ ವ್ಯಾಪರಿಗಳು ಜನರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಕಳಪೆಯಾಗಿದ್ದು ಪುನಃ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ : ಜಮ್ಮು ಕಾಶ್ಮೀರ ಮೇಘ ಸ್ಪೋಟ : ಸರ್ಕಾರ ಪರಿಸ್ಥಿತಿಯನ್ನು ಗಮನಿಸುತ್ತಿದೆ : ಪ್ರಧಾನಿ
ಸೇತುವೆ ಮೇಲೆ ಚರಂಡಿಯ ಆರ್ಸಿಸಿ ಕಳಪೆಯಾಗಿ ಮಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ತಂದ ಕಾರಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಮತ್ತು ಮೂರನೆಯ ತಂಡದ ಜೊತೆ ಮಾತನಾಡಲಾಗಿದೆ.ಗುಣಮಟ್ಟದ ಕಾಮಗಾರಿ ಮತ್ತು ಸರಿಯಾದ ಸಿಮೆಂಟು ಮರಳು ಬಳಕೆ ಮಾಡಿ ಪುನಃ ಕಾಮಗಾರಿ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಗಂಗಾಧರ್ ಉದಯವಾಣಿಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.