![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 29, 2020, 4:32 AM IST
ಕನ್ನಡದಲ್ಲಿ “ಲವ್ ಮಾಕ್ಟೇಲ್’ ಯಶಸ್ಸು ಎಲ್ಲರಿಗೂ ಗೊತ್ತೇ ಇದೆ. ಆ ಸಿನಿಮಾ ಗೆಲುವು ಕಾಣುತ್ತಿದ್ದಂತೆಯೇ, ಇದೀಗ ನಾಯಕ ಕಮ್ ನಿರ್ದೇಶಕ “ಲವ್ ಮಾಕ್ಟೇಲ್ 2′ ಮಾಡೋಕೆ ಹೊರಟಿದ್ದಾರೆ. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಪೂಜೆ ಕೂಡ ನಡೆದಿದೆ. ಸದ್ಯಕ್ಕೆ ಚಿತ್ರೀಕರಣಕ್ಕೆ ತಯಾರಾಗಿರುವ ನಾಯಕ್ ಕಮ್ ನಿರ್ದೇಶಕ ಕೃಷ್ಣ, ಕಲಾವಿದರ ಆಯ್ಕೆ ಮಾಡಲು ಮುಂದಾಗಿದ್ದಾರೆ.
ಅವರೀಗ ತಮ್ಮ “ಲವ್ ಮಾಕ್ಟೇಲ್ 2′ ಚಿತ್ರಕ್ಕೆ ಕಲಾವಿದರ ಹುಡುಕಾಟದಲ್ಲಿದ್ದಾರೆ. ಸದ್ಯಕ್ಕೆ ಕಲಾವಿದರು ಬೇಕು ಎಂದು ಅನೌನ್ಸ್ ಮಾಡಿದ್ದಾರೆ. ಅದರಲ್ಲೂ ಅವರೀಗ ನಟಿಗಾಗಿ ಹುಡುಕಾಟ ಶುರುಮಾಡಿದ್ದಾರೆ. ತಮ್ಮ ನಿರ್ದೇಶನದ ಎರಡನೇ ಚಿತ್ರಕ್ಕೆ ಸುಮಾರು 22ರಿಂದ 30 ವರ್ಷ ವಯಸ್ಸಿನವರು ಬೇಕಾಗಿದ್ದಾರೆ. ಫೋಟೋ ಹಾಗೂ ಪರಿಚಯದ ವಿಡಿಯೋವನ್ನು ಮೇಲ್ ಮಾಡಿ ಎಂದು ಕೃಷ್ಣ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ, “ಲವ್ ಮಾಕ್ಟೇಲ್ 2′ ಚಿತ್ರದಲ್ಲಿ ನಟಿಸಲು ಹಾಗೂ ಕೃಷ್ಣ ಜೊತೆ ಸ್ಟೆಪ್ ಹಾಕಬಯಸುವ ಹುಡುಗಿಯರು ಫೋಟೋ ಕಳುಹಿಸಿ, ಆ ನಂತರ ಆಡಿಷನ್‌ನಲ್ಲಿ ಭಾಗವಹಿಸಬಹುದು. ಅದೇನೆ ಇರಲಿ, “ಲವ್ ಮಾಕ್ಟೇಲ್’ ಚಿತ್ರ ದೊಡ್ಡ ಯಶಸ್ಸು ಪಡೆದಿದ್ದೇ ತಡ, “ಲವ್ ಮಾಕ್ಟೇಲ್ 2′ ಶುರು ಮಾಡುವ ನಿರ್ಧಾರ ಮಾಡಿದ ಕೃಷ್ಣ, ಈಗ ಆಡಿಷನ್ ಮಾಡಿ, ಚಿತ್ರೀಕರಣಕ್ಕೆ ಹೋಗುವ ಉತ್ಸಾಹದಲ್ಲಿದ್ದಾರೆ.
ಮೊದಲ ಸಿನಿಮಾದಲ್ಲಿ ಇದ್ದಂತಹ ಕೆಲವು ಕಲಾವಿದರು “ಲವ್ ಮಾಕ್ಟೇಲ್ 2’ನಲ್ಲೂ ಕೆಲಸ ಮಾಡಲಿದ್ದಾರೆ. ಆದರೆ, ಯಾರೆಲ್ಲಾ ಇರಲಿದ್ದಾರೆ ಎಂಬುದಕ್ಕೆ ಮಾತ್ರ ಇನ್ನೂ ಉತ್ತರವಿಲ್ಲ. ಇನ್ನು, ಕೃಷ್ಣ ಅವರು “ಶ್ರೀಕೃಷ್ಣ ಅಟ್ ಜಿ ಮೇಲ್ ಡಾಟ್ ಕಾಮ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇಷ್ಟರಲ್ಲೇ ತಂಡ ಚಿತ್ರೀಕರಣಕ್ಕೂ ಹೊರಡಲಿದೆ. ಇದರ ಜೊತೆ ಜೊತೆಯಲ್ಲೇ ಕೃಷ್ಣ ಅವರು ತಮ್ಮ ಬಹು ನಿರೀಕ್ಷೆ ಇಟ್ಟುಕೊಂಡೇ ಅವರು, “ಲವ್ ಮಾಕ್ಟೇಲ್ 2′ ಚಿತ್ರಕ್ಕೆ ಅಣಿಯಾಗಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.