ತಿಂಗಳ ಮೊದಲೇ ಮಳೆಗಾಲಕ್ಕೆ ಸಿದ್ಧತೆ
ಗ್ರಾಮೀಣರಿಗೆ ಲಾಕ್‌ಡೌನ್ ಪ್ರಯೋಜನ!
Team Udayavani, Apr 23, 2020, 5:49 AM IST
ಮಳೆಗಾಲದ ಪೂರ್ವ ತಯಾರಿಗಾಗಿ ಕಟ್ಟಿಗೆ ಒಡೆಯುವ ಕೆಲಸ.
ವಿಶೇಷ ವರದಿ-ಪುತ್ತೂರು: ಕೋವಿಡ್-19 ಪರಿಣಾಮದಿಂದ ಜಗತ್ತು ಸ್ತಬ್ಧವಾಗಿದೆ. ಆದರೂ ಗ್ರಾಮೀಣ ಜನತೆ ತಮ್ಮ ಕಾಯಕಕ್ಕೆ ಬಿಡುವು ನೀಡಿಲ್ಲ. ಮಳೆಗಾಲಕ್ಕೆ ಬೇಕಾದ ಕಟ್ಟಿಗೆ, ತರಗೆಲೆ ಸಂಗ್ರಹ ಪೂರ್ವತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದಾರೆ. ಸಾಮಾನ್ಯವಾಗಿ ಪ್ರತಿವರ್ಷ ಮೇ ತಿಂಗಳಲ್ಲಿ ನಡೆಯುತ್ತಿದ್ದ ಕೆಲಸಗಳು ಈ ಬಾರಿ ಒಂದು ತಿಂಗಳ ಮೊದಲೇ ಮುಗಿದಿದೆ.
ಹಳ್ಳಿಗಳಿಗೆ ಅಡುಗೆ ಅನಿಲ ಕಾಲಿಟ್ಟು ವರ್ಷಗಳೇ ಕಳೆದರೂ ಹಳ್ಳಿ ಮಂದಿ ಇಂದಿಗೂ ಸಾಂಪ್ರದಾಯಿಕ ಕಟ್ಟಿಗೆ ಒಲೆಗಳನ್ನು ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಹಳ್ಳಿ ಮನೆಗಳಲ್ಲಿ ಕನಿಷ್ಠ 8ರಿಂದ 15ರ ಜನ ವಾಸವಾಗಿರುತ್ತಾರೆ. ಅಂತಹ ಕಡೆ ಅಡುಗೆ ಅನಿಲಕ್ಕಿಂತ ಕಟ್ಟಿಗೆಯೇ ಸೂಕ್ತವಾಗಿರುವ ಕಾರಣ ಮಳೆಗಾಲದಲ್ಲಿ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಕಟ್ಟಿಗೆ ಸಂಗ್ರಹಿಸಿ ಇಡುತ್ತಾರೆ.
ಲಾಭದಾಯಕವೂ ಆಗಿದೆ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಳ್ಳಿಯ ಮನೆ ಮಂದಿ ಒಟ್ಟಿಗೆ ಸೇರಿದ್ದಾರೆ. ಖಾಸಗಿ ಕಂಪೆನಿಗಳು, ಸರಕಾರಿ ಉದ್ಯೋಗಿಗಳು, ಲಾರಿ ಚಾಲಕರು, ಹೊಟೇಲ್‌ಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು, ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಯುವಕ-ಯುವತಿಯರು ಈಗ ಮನೆಗಳಲ್ಲೇ ಇದ್ದಾರೆ. ಈ ನಿಯಮ ಆರ್ಥಿಕತೆಗೆ ಪೆಟ್ಟು ನೀಡಿದ್ದರೂ ಹಳ್ಳಿಯ ಕಾಯಕಗಳಿಗೆ ಪೂರಕವಾಗಿ ಪರಿಣಮಿಸಿದೆ. ಮನೆ ಮಂದಿಯೇ ಸೇರಿ ಕಟ್ಟಿಗೆ, ತರೆಗೆಲೆ ಮತ್ತಿತರ ಸಾಮಗ್ರಿಗಳನ್ನು ಕೂಡಿಡುತ್ತಿದ್ದಾರೆ. ಇದಕ್ಕಾಗಿ ಕೂಲಿ ಕಾರ್ಮಿಕರ ಮೊರೆಹೊಗುವುದು ಈ ಬಾರಿ ತಪ್ಪಿದೆ. ಕಟ್ಟಿಗೆ ಒಡೆಯಲು ಮಾತ್ರ ಕೆಲವು ಕಡೆಗಳಲ್ಲಿ ಕೂಲಿ ಕಾರ್ಮಿಕರನ್ನು ಅವಲಂಬಿಸಿದ್ದಾರೆ.
ಹಳ್ಳಿ ಮಹತ್ವ ಅರಿವಾಗುತ್ತಿದೆ
ಮನೆಯಿಂದ ದೂರ ಇರುತ್ತಿದ್ದ ಎಲ್ಲ ಮಂದಿಯನ್ನು ಒಟ್ಟಿಗೆ ಸೇರಿಸುವಲ್ಲಿ ಕಾರಣ ವಾದ ಕೋವಿಡ್-19 ದಿಂದ ಹಳ್ಳಿ ಬದುಕಿನ ಮಹತ್ವವೂ ಜನತೆಗೆ ಅರಿ ವಾಗಿದೆ. ಕೋವಿಡ್-19 ಭಯವಿದ್ದರೂ ಹಳ್ಳಿ ಮನೆಗಳಲ್ಲಿನ ಖುಷಿಯನ್ನು ಅನುಭವಿಸುವ ಸಂದರ್ಭ ಬಹಳ ವರ್ಷಗಳ ಅನಂತರ ಸಿಕ್ಕಿದೆ ಎನ್ನುವುದು ಬಹಳ ವರ್ಷಗಳಿಂದ ಲಾರಿ ಕಂಪೆನಿ ಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡು ತ್ತಿರುವ ಆನಂದ ಗೌಡ ಅವರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.