ಮಳೆಗಾಲದ ಸಿದ್ಧತೆ: ಬೆರಳೆಣಿಕೆಯ ಕಾರ್ಮಿಕರಿಂದ ಕೆಲಸ
Team Udayavani, Apr 16, 2020, 5:08 AM IST
ಉಡುಪಿ: ಮಳೆಗಾಲದಲ್ಲಿ ರಾ. ಹೆದ್ದಾರಿಗಳಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಣಿಪಾಲ ರಾ.ಹೆ. 169ರಲ್ಲಿ ಇರುವ ಬೆರಳೆಣಿಕೆಯ ಕಾರ್ಮಿಕರನ್ನು ಬಳಸಿಕೊಂಡು ಮುಂಗಾರು ಪೂರ್ವ ಸಿದ್ಧತೆಗಳನ್ನು ನಡೆಸುವ ಕಾರ್ಯಕ್ಕೆ ಮುಂದಾಗಿದೆ.
ಬಿಸಿಲು ಹೆಚ್ಚುತ್ತಿದೆ. ಮತ್ತೂಂದೆಡೆ ಮಳೆಯ ಮುನ್ಸೂಚನೆ ದೊರಕಿದೆ. ಈಗಾ ಗಲೇ ಉಡುಪಿ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಒಂದೆರಡು ಬಾರಿ ಮಳೆ ಸುರಿದಿದೆ. ಇನ್ನೆರಡು ತಿಂಗಳೊಳಗೆ ಮಳೆಗಾಲ ಆರಂಭವಾಗಲಿದೆ. ಇದಕ್ಕೆ ಪೂರ್ವಸಿದ್ಧತೆಗಳನ್ನು ಹೆದ್ದಾರಿ ಇಲಾಖೆ ಮಾಡಿಕೊಳ್ಳಬೇಕು. ಅದನ್ನು ಮಾಡಲು ಇಲಾಖೆಗೆ ಈಗ ಕಾರ್ಮಿಕರ ಕೊರತೆ ಅಡ್ಡಿಯಾಗಿದೆ.
ರಾ.ಹೆದ್ದಾರಿಗೆ ಸಂಬಂಧಿಸಿದ ಕಾಮ ಗಾರಿಗಳನ್ನು ಮತ್ತು ಮಳೆಗಾಲ ಪೂರ್ವಸಿದ್ಧತೆಗಳು ಮಾಡಿಕೊಳ್ಳಲು ಈಗ ಕಾರ್ಮಿಕರು ಸಿಗುತ್ತಿಲ್ಲ. ಲಾಕ್‌ಡೌನ್‌ನಿಂದ ಕಾರ್ಮಿಕರು ಊರು ಸೇರಿಕೊಂಡಿದ್ದಾರೆ. ಉಳಿದವರು ಮನೆ ಬಿಟ್ಟು ಹೊರಬರುತ್ತಿಲ್ಲ. ಆದರೂ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಇರುವ ಬೆರಳೆಣಿಕೆಯ ಕಾರ್ಮಿಕರನ್ನು ಬಳಸಿ ಕೊಂಡು ರಸ್ತೆ ಬದಿಯ ಚರಂಡಿಗಳ ಹೂಳು ತೆಗೆದು, ಮಳೆ ನೀರು ಸರಾಗ ವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುತ್ತಿದೆ. ರಸ್ತೆ ಬದಿಯಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡುತ್ತಿದೆ.
ಪ್ರಗತಿಯಲ್ಲಿ
ಮಣಿಪಾಲ-ಪರ್ಕಳ ನಡುವೆ ಚತುಷ್ಪಥ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ. ಈಗ ಕಾರ್ಮಿಕರಿಲ್ಲದೆ ಕೆಲಸ ನಡೆಯುತ್ತಿಲ್ಲ. ಮಳೆಗಾಲದ ಪೂರ್ವಭಾವಿಯಾಗಿ ಕೆಲವು ತುರ್ತು ಕೆಲಸಗಳನ್ನು ಪರ್ಕಳ, ಮಣಿಪಾಲ, ಉಡುಪಿ ನಡುವಿನ ರಾ.ಹೆದ್ದಾರಿಯ ಅಲ್ಲಲ್ಲಿ ನಡೆಸುತ್ತಿದ್ದೇವೆ. ಇರುವ ನಾಲ್ಕೈದು ಮಂದಿ ಕಾರ್ಮಿಕರನ್ನು ಬಳಸಿಕೊಂಡು ಹೆದ್ದಾರಿಗಳ ಬದಿಯ ಚರಂಡಿಯ ಹೂಳೆತ್ತುವ ಹಾಗೂ ಸಣ್ಣಪುಟ್ಟ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ರಾ.ಹೆ. ಇಲಾಖೆ ಎಂಜಿನಿಯರ್ ಮಂಜುನಾಥ್ ನಾಯಕ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.