Google: ಗೂಗಲ್‌ನಿಂದ ಮತ್ತೆ 30 ಸಾವಿರ ಮಂದಿ ತೆಗೆದುಹಾಕಲು ಸಿದ್ಧತೆ
ಹೆಚ್ಚುತ್ತಿರುವ ಎ.ಐ.ಬಳಕೆಯ ಪ್ರಭಾವದಿಂದ ಈ ಕ್ರಮ-ದಿನಗಳ ಹಿಂದೆ ಪೇಟಿಎಂನಿಂದ 10 ಸಾವಿರ ಮಂದಿಗೆ ಪಿಂಕ್‌ಸ್ಲಿಪ್
Team Udayavani, Dec 28, 2023, 8:25 PM IST
ನ್ಯೂಯಾರ್ಕ್: ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮತ್ತು ಅದರ ಸಹವರ್ತಿ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿ ಇರುವವರ ಭವಿಷ್ಯಕ್ಕೆ ಸವಾಲಾಗಿ ಪರಿಣಮಿಸಿದ ಕೃತಕ ಬುದ್ಧಿಮತ್ತೆ (ಎ.ಐ.)ಯಿಂದ ಮತ್ತಷ್ಟು ಸವಾಲಿನ ದಿನಗಳು ಉದ್ಭವಿಸಲಿವೆ. ಕೆಲ ದಿನಗಳ ಹಿಂದೆ ಪೇಟಿಎಂ ಎ.ಐ. ವ್ಯವಸ್ಥೆಯನ್ನು ಅಳವಡಿಸಿಕೊಂಡ ಕಾರಣ ಹತ್ತು ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕುವ ನಿರ್ಧಾರ ಕೈಗೊಂಡಿತ್ತು.
ಇದೀಗ ಇಂಟರ್‌ನೆಟ್ ಸರ್ಚ್ ಎಂಜಿನ್ ದೈತ್ಯ ಗೂಗಲ್ ಹೊಸ ಆವೃತ್ತಿಯ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಇನ್ನೂ 30 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕುವ ಸಾಧ್ಯತೆಗಳು ಇವೆ. ಸಂಸ್ಥೆಯಿಂದ ಈಗಾಗಲೇ 12 ಸಾವಿರ ಮಂದಿಯನ್ನು ತೆಗೆದು ಹಾಕಲಾಗಿದೆ.
ವಿಶೇಷವಾಗಿ ಗೂಗಲ್‌ನ ಜಾಹೀರಾತು ಮತ್ತು ಮಾರಾಟ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಮೊದಲ ಹಂತದಲ್ಲಿ ಕೃತಕ ಬುದ್ಧಿಮತ್ತೆ ವ್ಯವಸ್ಥೆ ಅಳವಡಿಸಿಕೊಳ್ಳುವುದರಿಂದ ಸವಾಲಿನ ದಿನಗಳನ್ನು ಎದುರಿಸುವುದು ನಿಶ್ಚಿತ ಎನ್ನಲಾಗುತ್ತಿದೆ. ಇದರ ಜತೆಗೆ ಜಾಹೀರಾತು ಮತ್ತು ಮಾರಾಟ ವಿಭಾಗದಿಂದ ಮುಂದುವರಿದು, ಇತರ ವಿಭಾಗ ಮತ್ತು ಸಹವರ್ತಿ ಸಂಸ್ಥೆಗಳಿಗೆ ಕೂಡ ಎ.ಐ. ಅನ್ನು ವಿಸ್ತರಿಸುವುದು ಖಚಿತವೆನ್ನಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೂಗಲ್ ಸಿಇಒ ಸುಂದರ ಪಿಚೈ ಬದಲಾಗುತ್ತಿರುವ ಔದ್ಯಮಿಕ ಆದ್ಯತೆಗಳಿಂದಾಗಿ ತಂತ್ರಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಬೇಕಾಗಿದೆ. ಇದರಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ಪುನರ್ ರಚನೆ ಆಗಬೇಕಾದ ಅನಿವಾರ್ಯವಿದೆ. ಜತೆಗೆ ಉದ್ಯೋಗ ಕಡಿತ ಕೂಡ ಅನಿವಾರ್ಯ ಎಂದಿದ್ದಾರೆ. ಗೂಗಲ್‌ನಿಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.