![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 5, 2020, 4:46 AM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜ ವೀರ ಮದಕರಿ ನಾಯಕ ಚಿತ್ರದ ಶೂಟಿಂಗ್ ಆಗಸ್ಟ್‌ನಲ್ಲಿ ಪುನರಾರಂಭಗೊಳ್ಳಲಿದೆ. ಶೂಟಿಂಗ್ ಪುನಾರಂಭದ ಬಗೆಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾತನಾಡಿದ್ದಾರೆ. ಈಗಾಗಲೇ ಶೂಟಿಂಗ್ ಸಿದ್ಧತೆಗಳು ಪ್ರಾರಂಭವಾಗಿದೆ ಎಂದಿದ್ದಾರೆ. ಸದ್ಯ ಅವರು ಮನರಂಜನಾ ಕ್ಷೇತ್ರದ ಮೇಲಿನ ಲಾಕ್‌ಡೌನ್ ನಿರ್ಬಂಧ ತೆಗೆದುಹಾಕುವುದನ್ನು ಎದುರು ನೋಡುತ್ತಿದ್ದಾರೆ. ಕೋವಿಡ್ 19 ಎಫೆಕ್ಟ್ನಿಂದಾಗಿ ಶೂಟಿಂಗ್ ಸ್ಥಳಗಳ ಆದ್ಯತೆಯಲ್ಲಿಯೂ ಬದಲಾವಣೆಗಳು ಆಗಿದ್ದು ಮೊದಲಿಗೆ ಕರ್ನಾಟಕದಲ್ಲಿ ಶೂಟಿಂಗ್ ನಡೆಸಿ ಬಳಿಕ ರಾಜಸ್ಥಾನ ಹಾಗೂ ಇತರೆ ರಾಜ್ಯಗಳ ಶೂಟಿಂಗ್ ನಡೆಸಲಿದ್ದೇವೆ ಎನ್ನುವುದು ರಾಕ್‌ಲೈನ್ ಮಾತು.
ತಂಡವು ಪ್ರಸ್ತುತ ಪ್ರೀಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದು, ಸೆಟ್‌ಗಳಲ್ಲಿ ಹೊಸ ಮಾರ್ಗಸೂಚಿಯ ಅನುಸಾರ ಕೆಲಸ ಮಾಡಲು ಚಿತ್ರತಂಡ ತಯಾರಾಗಿದೆ. ”ಮೊದಲು ನಮ್ಮಲ್ಲಿ ಸೋಂಕುರಹಿತವಾಗಿ ರುವ ಸುರಂಗವನ್ನು ನಿರ್ಮಿಸಲಾ ಗಿದ್ದು ಶೂಟಿಂಗ್ ತಂಡದ ಪ್ರತಿಯೊಬ್ಬರೂ ಈ ಸುರಂಗದ ಮೂಲಕವೇ ಪ್ರವೇಶ ಹಾಗೂ ನಿರ್ಗಮನ ಮಾಡಬೇಕಿದೆ. ನಾವು ಮಾಸ್ಕ್ ಗಳನ್ನು ಧರಿಸುವುದು, ಸ್ಯಾನಿಟೆ„ಸರ್ ಗಳನ್ನು ಬಳಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವು ದನ್ನು ಕಡ್ಡಾಯ ಮಾಡಲಿದ್ದೇವೆ. ಇದರೊಂದಿಗೆ ನಾವು ಆರೋಗ್ಯ ಇಲಾಖೆ ನೀಡಿದ ಮಾರ್ಗಸೂಚಿಗಳನ್ನು ಸಹ ಅನುಸರಿಸುತ್ತೇವೆ.
ಬೃಹತ್ ಬಜೆಟ್‌ನೊಂದಿಗೆ ನಿರ್ಮಿಸಲಾದ ಈ ಚಿತ್ರದಲ್ಲಿ ದೊಡ್ಡ ತಾರಾಂಗಣವಿರಲಿದೆ. ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕಾಗಿದೆ. ನಾವು ನಿರ್ದಿಷ್ಟ ಸಂಖ್ಯೆಯ ಸಿಬ್ಬಂದಿಗಳನ್ನು ಹೊಂದಿರಬೇಕು, ಅವರು ಕೆಲವು ಕೆಲಸ ನಿರ್ವಹಿಸಬೇಕಿದೆ. ಹಾಗಾಗಿ ಸಿಬ್ಬಂದಿ ಕಡಿತ ಸಾಧ್ಯವಿಲ್ಲ. ನಾವು ಸೆಟ್‌ಗಳಿಗೆ ಪ್ರವೇಶಿಸುವ ಜನರ ಸಂಖ್ಯೆಯನ್ನು ಕಡಿಮೆ ಮಾಡುತ್ತೇವೆ. ಅಗತ್ಯವಿರುವ ಕಿರಿಯ ಕಲಾವಿದರು ಅಥವಾ ಫೆ„ಟರ್ ಗಳ ಸಂಖ್ಯೆಯ ಬಗ್ಗೆ ತಂಡವು ವಿವರವಾದ ಚರ್ಚೆಯನ್ನು ನಡೆಸಲಿದೆ, ಮತ್ತು ಅವರಿಗೆ ತಮ್ಮ ಶೂಟಿಂಗ್ ಇರುವ ದಿನಗಳಲ್ಲಿ ಮಾತ್ರವೇ ಸೆಟ್ ಗೆ ಪ್ರವೇಶ ಕಲ್ಪಿಸಲಾಗುತ್ತದೆ” ಎನ್ನುವುದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮಾತು.
ನಾಯಕ ನಟ ದರ್ಶನ್, ಹಿರಿಯ ನಟಿ ಸುಮಲತಾ ಪ್ರಮುಖ ಪಾತ್ರ ಮಾಡುತ್ತಿದ್ದು, ಚಿತ್ರದ ಉಳಿದ ಪಾತ್ರವರ್ಗದ ಬಗ್ಗೆ ಇನ್ನೂ ಅಂತಿಮ ವಾಗಿಲ್ಲ. ನಾಯಕಿ ಸೇರಿದಂತೆ ಕೆಲವು ನಟರನ್ನು ನಂತರ ಅಂತಿಮ ಗೊಳಿಸಲಾಗುತ್ತದೆ. ರಾಕ್ ಲೈನ್ ಎಂಟರ್‌ಟೆ„ನರ್ಸ್‌ನಡಿಯಲ್ಲಿ ನಿರ್ಮಿಸಲಾದ ಈ ಚಿತ್ರವು ಬಿ.ಎಲ್. ವೇಣು ಬರೆದ ಕಾದಂಬರಿಯನ್ನು ಆಧರಿಸಿದೆ. ಹಂಸಲೇಖಾ ಸಂಗೀತ ಮತ್ತು ಅಶೋಕ್ ಕಶ್ಯಪ್ ಛಾಯಾ ಗ್ರಹಣ ಚಿತ್ರಕ್ಕಿದೆ. ಸದ್ಯದ ಸಮಸ್ಯೆಯ ಬಗ್ಗೆ ಮಾತನಾಡುವ ರಾಕ್‌ಲೈನ್ ವೆಂಕಟೇಶ್, ನಮ್ಮಲ್ಲಿ ಡಾ. ರಾಜ್‌ಕುಮಾರ್, ಅಂಬರೀಶ್ ಸೇರಿದಂತೆ ಹಿರಿಯ ನಟರಿರುತ್ತಿದ್ದರೆ ಅವರು ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗ ಸೂಚಿಸುತ್ತಿದ್ದರು.
ನಿರ್ಮಾಪಕರ ಪಾಲಿಗೆ ಪಾರ್ವತಮ್ಮ ರಾಜ್ ಕುಮಾರ್ ಕೂಡ ಇದ್ದರು. ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅವರೆಲ್ಲಾ ಸಾಕಷ್ಟು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಪ್ರಸ್ತುತ, ಆ ಜಾಗವನ್ನು ತುಂಬಲು ನಮ್ಮಲ್ಲಿ ಯಾರೂ ಇಲ್ಲ. ಚಿತ್ರರಂಗದ ಹಿಂದೆ ನಿಂತ ಈ ಜನರ ಮೌಲ್ಯವನ್ನು ನಾವು ಈಗ ಅರ್ಥಮಾಡಿಕೊಂಡಿದ್ದೇವೆ. ಅವರಿಲ್ಲದಿದ್ದರೆ, ಈ ಉದ್ಯಮವು ಇಷ್ಟು ದೂರ ಸಾಗುವುದು ಸಾಧ್ಯವಿರಲಿಲ್ಲ ಎನ್ನುವುದು ಅವರ ಮಾತು. ಈಗಾಗಲೇ ರಾಜವೀರ ಮದಕರಿ ನಾಯಕ ಚಿತ್ರದ ಚಿತ್ರೀಕರಣ 10 ದಿನಗಳ ಕಾಲ ಕೇರಳದಲ್ಲಿ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹೆ„ದರಾಬಾದ್‌ನಲ್ಲಿ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ ಕೋವಿಡ್ 19ದಿಂದಾಗಿ ಚಿತ್ರೀಕರಣ ಸ್ಥಗಿತವಾಗಿದೆ. ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.