Rescue: ಅಪರಿಚಿತ ವಾಹನ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡ ಕೋಣದ ರಕ್ಷಣೆ
ಮಾನವೀಯತೆ ಮೆರೆದ ನವ ಚೇತನ್ಯ ಸಮಾಜ ವಿಕಾಸ ಸೇವಾ ಟ್ರಸ್ಟ್‌ನ ಸಮಾಜ ಸೇವಕರು
Team Udayavani, Oct 16, 2023, 6:11 PM IST
ಗಂಗಾವತಿ: ನಗರದ ರಾಣಾಪ್ರತಾಪಸಿಂಗ್ ವೃತ್ತದಲ್ಲಿ ಅಪರಿಚಿತ ವಾಹನದಿಂದ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡ ಕೋಣವನ್ನು ನವ ಚೇತನ್ಯ ಸಮಾಜ ವಿಕಾಸ ಸೇವಾ ಟ್ರಸ್ಟ್ ಸಮಾಜ ಸೇವಕರು ರಕ್ಷಣೆ ಮಾಡಿ ಕೊಪ್ಪಳದ ಗೋಶಾಲೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.
ನಗರದಲ್ಲಿ ಬಿಡಾಡಿ ದನಗಳು ಮತ್ತು ಎಮ್ಮೆ ಕೋಣಗಳ ಸಂಖ್ಯೆ ಹೆಚ್ಚಾಗಿದ್ದು ರಾಯಚೂರು ರಸ್ತೆಯಲ್ಲಿ ಅಪರಿಚಿತ ವಾಹನ ರಾತ್ರಿ ಸಂದರ್ಭದಲ್ಲಿ ಕೋಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೋಣದ ಹಿಂದಿನ ಎಡಗಾಲು ಮುರಿದು ತುಂಡಾಗಿತ್ತು. ದಾರಿಯಲ್ಲಿ ಹೋಗುವವರು ಗಮನಿಸಿ ಹೋಗುತ್ತಿದ್ದರೆ ನವ ಚೇತನ್ಯ ಸಮಾಜ ವಿಕಾಸ ಸೇವಾ ಟ್ರಸ್ಟ್ ಸಮಾಜ ಸೇವಕರು ರಕ್ಷಣೆ ಮಾಡಿ ಕೂಡಲೇ ಕೋಣವನ್ನು ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮುರಿದು ತುಂಡಾಗಿದ್ದ ಕಾಲನ್ನು ಪಶು ವೈದ್ಯರಿಂದ ಜೋಡಣೆ ಮಾಡಿಸಿ ಕೊಪ್ಪಳದ ಗೋಶಾಲೆಗೆ ಸೇರ್ಪಡೆ ಮಾಡಿದ್ದಾರೆ.
ಈ ಸಂಸ್ಥೆಯವರು ಪ್ರತಿ ವಾರ ಅನಾಥ ಆಶ್ರಮದಲ್ಲಿರುವ ವೃದ್ಧರಿಗೆ ಕ್ಷೌರ ಮಾಡುವುದು ಅಂಧ,ಅಂಗವಿಕಲ ಮಕ್ಕಳಿಗೆ ನೆರವಾಗುವುದು ಮತ್ತು ಬಿಡಾಡಿ ದನಗಳನ್ನು ರಾತ್ರಿ ವೇಳೆ ಅಪರಿಚಿತ ವಾಹನಗಳು ಅಪಘಾತ ಮಾಡದಂತೆ ರೇಡಿಯಂ ಬೆಲ್ಟ್ ಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.