Ayodhya: ಪ್ರಧಾನಿ ಮೋದಿ “ರಾಮ” ಪಯಣಕ್ಕೆ ತೆರೆ
- ಪ್ರಾಣ ಪ್ರತಿಷ್ಠೆಗೆ ಮುನ್ನಾದಿನ ಧನುಷ್ಕೋಡಿ, ಅರಿಚಲ್ ಮುನ್ನೈಗೆ ಭೇಟಿ- ಶ್ರೀ ಕೋದಂಡರಾಮಸ್ವಾಮಿ ದೇಗುಲದಲ್ಲಿ ಪೂಜೆ
Team Udayavani, Jan 21, 2024, 9:51 PM IST
ರಾಮೇಶ್ವರಂ: ತಮಿಳುನಾಡಿನ ಅರಿಚಲ್ ಮುನ್ನೈನಲ್ಲಿರುವ ಶ್ರೀ ರಾಮನ ದೇಗುಲ ಭೇಟಿಯ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ದಕ್ಷಿಣ ಭಾರತದ ಆಧ್ಯಾತ್ಮಿಕ ಪಯಣಕ್ಕೆ ತೆರೆಬಿದ್ದಿದೆ.
ರಾಮಾಯಣದೊಂದಿಗೆ ನಂಟು ಹೊಂದಿರುವ ವಿವಿಧ ದೇಗುಲಗಳಿಗೆ ಕಳೆದೊಂದು ವಾರದಲ್ಲಿ ಪ್ರಧಾನಿ ಮೋದಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅದರಂತೆ, ರಾಮಮಂದಿರದ ಪ್ರಾಣ ಪ್ರತಿಷ್ಠೆಗೆ ಮುನ್ನಾದಿನವಾದ ಭಾನುವಾರ ಅವರು ತಮಿಳುನಾಡಿನ ಧನುಷ್ಕೋಡಿ ಮತ್ತು ಅರಿಚಲ್ ಮುನ್ನೈಗೆ ಹೋಗುವ ದಾರಿಯಲ್ಲಿ ಶ್ರೀ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಕೋದಂಡರಾಮಸ್ವಾಮಿ ದೇಗುಲದಲ್ಲಿ ಬಿಲ್ಲು-ಬಾಣ ಹಿಡಿದು ನಿಂತಿರುವ ರಾಮನ ವಿಗ್ರಹವನ್ನು ಪೂಜಿಸಲಾಗುತ್ತದೆ.
ಅಲ್ಲಿಂದ ಅರಿಚಲ್ ಮುನ್ನೈಗೆ ತೆರಳಿದ ಮೋದಿ, ಅಲ್ಲಿನ ಸಮುದ್ರಕ್ಕೆ ಹೂವುಗಳನ್ನು ಅರ್ಪಿಸಿ, ರಾಷ್ಟ್ರ ಲಾಂಛನವಿರುವ ಸ್ತಂಭಕ್ಕೂ ಪುಷ್ಪನಮನ ಸಲ್ಲಿಸಿದರು. ಜತೆಗೆ, ಬೀಚ್‌ನಲ್ಲಿ ಪ್ರಾಣಾಯಾಮ ಮಾಡಿದ್ದೂ ಕಂಡುಬಂತು.
ದೆಹಲಿಗೆ ಕಳಶ ಹೊತ್ತೂಯ್ದ ಪ್ರಧಾನಿ:
ಕೋದಂಡರಾಮಸ್ವಾಮಿ ದೇಗುಲ ಮತ್ತು ಅರಿಚಲ್ ಮುನ್ನೈ ಭೇಟಿಯ ಬಳಿಕ ನೇರವಾಗಿ ಮಧುರೈಗೆ ಹೋದ ಪ್ರಧಾನಿ ಮೋದಿ, ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ತೆರಳಿದರು. ತಮಿಳುನಾಡಿನ ಪವಿತ್ರ ಜಲವುಳ್ಳ ಕಳಶವನ್ನೂ ಮೋದಿ ತಮ್ಮೊಂದಿಗೆ ಒಯ್ದರು ಎಂದು ದೇಗುಲದ ಅರ್ಚಕರು ತಿಳಿಸಿದ್ದಾರೆ.
ಶನಿವಾರ ಪ್ರಧಾನಿ ಮೋದಿಯವರು ತಮಿಳುನಾಡಿನ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥಸ್ವಾಮಿ ಮತ್ತು ರಾಮೇಶ್ವರದ ಅರುಳ್‌ಮಿಗು ರಾಮನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಮೊದಲು, ಅಂದರೆ ಕಳೆದ ವಾರ, ರಾಮಾಯಣದೊಂದಿಗೆ ನಂಟು ಹೊಂದಿರುವ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇಗುಲ ಮತ್ತು ಕೇರಳದ ತ್ರಿಪ್ರಯಾರ್ ರಾಮಸ್ವಾಮಿ ದೇಗುಲಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ರಾಮಸೇತುವಿರುವ ಸ್ಥಳವೇ ಅರಿಚಲ್ ಮುನ್ನೆ
ಅರಿಚಲ್ ಮುನ್ನೈ ಎನ್ನುವುದು ರಾಮಸೇತುವಿರುವ ಸ್ಥಳ. ಇದು ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದ ದಕ್ಷಿಣ ತುದಿಯಲ್ಲಿದೆ. ಸೀತೆಯನ್ನು ಅಪಹರಣ ಮಾಡಿದ ರಾವಣನ ಸಂಹಾರಕ್ಕಾಗಿ ಶ್ರೀರಾಮನು ವಾನರ ಸೇನೆಯ ಸಹಾಯದಿಂದ ರಾಮಸೇತುವನ್ನು ನಿರ್ಮಿಸಿದ್ದು ಇದೇ ಪ್ರದೇಶದಲ್ಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.