Shramadana: ಪ್ರಧಾನಿ ಮೋದಿ “ಶ್ರಮದಾನ”ದ ಕರೆಗೆ ದೇಶವಾಸಿಗಳ ಸ್ಪಂದನೆ

ದೇಶಾದ್ಯಂತ ಸ್ವತ್ಛತಾ ಅಭಿಯಾನ; ಸಾವಿರಾರು ಮಂದಿ ಭಾಗಿ

Team Udayavani, Oct 1, 2023, 11:05 PM IST

modi clean

ಹೊಸದಿಲ್ಲಿ: ಮಹಾತ್ಮ ಗಾಂಧಿಯವರ “ಸ್ವಚ್ಛತೆ’ಯ ಆಶಯಕ್ಕೆ ಅನುಗುಣವಾಗಿ ಗಾಂಧಿ ಜಯಂತಿಯ ಮುನ್ನಾ ದಿನವಾದ ಭಾನುವಾರ “ಶ್ರಮದಾನ’ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಕರೆಗೆ ದೇಶವಾಸಿ ಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ವಿದ್ಯಾರ್ಥಿಗಳಿಂದ ಹಿಡಿದು ರಾಜಕಾರಣಿಗ ಳವರೆಗೆ ಎಲ್ಲ ಕ್ಷೇತ್ರಗಳ ಜನರೂ “ಸ್ವತ್ಛತೆಯೇ ಸೇವೆ’ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು. ಪ್ರಧಾನಿ ಮೋದಿಯವರೇ ಸ್ವತಃ ಕಸಬರಿಕೆ ಹಿಡಿದು ಸ್ವತ್ಛತಾ ಕಾರ್ಯದಲ್ಲಿ ಭಾಗಿಯಾದರು. ಅವರ ನೇತೃತ್ವದಲ್ಲಿ ದೇಶವ್ಯಾಪಿ ಸಾವಿರಾರು ಮಂದಿ ಬೆಳಗ್ಗೆ 10ರಿಂದ ಒಂದು ಗಂಟೆ ಕಾಲ ನಡೆದ ಈ ಅಭಿಯಾನದಲ್ಲಿ ಕೈಜೋಡಿಸಿದರು.
ಮೋದಿಯವರು ದೆಹಲಿಯಲ್ಲಿ ಫಿಟೆ°ಸ್‌ ಇನ್‌ಫ್ಯೂಯೆನ್ಸರ್‌ ಅಂಕಿತ್‌ ಬೈಯಾನ್‌ಪುರಿಯಾ ಅವ ರೊಂದಿಗೆ ಶ್ರಮದಾನ ಮಾಡಿದ್ದು, ಅದರ 4 ನಿಮಿಷಗಳ ವಿಡಿಯೋವನ್ನು ಎಕ್ಸ್‌(ಟ್ವಿಟರ್‌)ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಜತೆಗೆ, “ಇಂದು ಭಾರತವು ಸ್ವತ್ಛತೆಯ ಕಡೆಗೆ ಗಮನ ಹರಿಸುತ್ತಿದ್ದರೆ, ನಾನು ಮತ್ತು ಅಂಕಿತ್‌ ಕೂಡ ಅದೇ ಕೆಲಸವನ್ನು ಮಾಡು ತ್ತಿದ್ದೇವೆ. ನೈರ್ಮಲ್ಯದ ಜೊತೆಗೆ ಫಿಟೆ°ಸ್‌ ಮತ್ತು ಕ್ಷೇಮವನ್ನೂ ಸಮ್ಮಿಳಿತಗೊಳಿಸಿದ್ದೇವೆ. ಒಟ್ಟಾರೆಯಾಗಿ ಇದು ಸ್ವತ್ಛ ಮತ್ತು ಸ್ವಸ್ಥ ಭಾರತದ ಸೂಚಕ’ ಎಂದು ಮೋದಿ ಬರೆದುಕೊಂಡಿದ್ದಾರೆ.

ಹಲವು ಸಚಿವರು, ಬಿಜೆಪಿ ನಾಯಕರು ಭಾಗಿ: ಪ್ರಧಾನಿ ಮೋದಿ ಮಾತ್ರವಲ್ಲದೇ ಕೇಂದ್ರದ ಹಲವು ಸಚಿವರು, ಬಿಜೆಪಿ ನಾಯಕರು ಕೂಡ ದೇಶದ ವಿವಿಧ ಭಾಗ ಗಳಲ್ಲಿ ಶ್ರಮದಾನ ಮಾಡುವ ಮೂಲಕ ಅಭಿಯಾನದೊಂದಿಗೆ ಕೈಜೋಡಿಸಿದ್ದಾರೆ. ಗೃಹ ಸಚಿವ ಅಮಿತ್‌ ಶಾ ಅವರು ಅಹಮದಾಬಾದ್‌ನಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ದೆಹಲಿಯಲ್ಲಿ, ಸಿಎಂಗಳಾದ ಯೋಗಿ ಆದಿತ್ಯನಾಥ್‌, ಹಿಮಾಂತ ಬಿಸ್ವಾ ಶರ್ಮಾ, ಭೂಪೇಂದ್ರ ಪಟೇಲ್‌, ಕೇಂದ್ರ ಸಚಿವರಾದ ಆರ್‌.ಕೆ.ಸಿಂಗ್‌, ಸ್ಮತಿ ಇರಾನಿ, ಹರ್‌ದೀಪ್‌ ಸಿಂಗ್‌ ಪುರಿ, ಅನುರಾಗ್‌ ಠಾಕೂರ್‌, ವಾಯುಪಡೆ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ವಿ.ಆರ್‌. ಚೌಧರಿ ಸೇರಿದಂತೆ ಅನೇಕ ಗಣ್ಯರು ಸ್ವತಃ ಪೊರಕೆ ಹಿಡಿದು ಸ್ವತ್ಛತಾ ಕಾರ್ಯ ಮಾಡಿದ್ದಾರೆ.

9.20 ಲಕ್ಷ ಕಡೆ ಅಭಿಯಾನ: 22 ಸಾವಿರ ಮಾರುಕಟ್ಟೆಗಳು, 10 ಸಾವಿರ ಜಲ ಮೂಲಗಳು, 7 ಸಾವಿರ ಬಸ್‌ ನಿಲ್ದಾಣಗಳು ಮತ್ತು ಟೋಲ್‌ ಪ್ಲಾಜಾಗಳು, 1 ಸಾವಿರ ಗೋಶಾಲೆಗಳು, 300 ಪ್ರಾಣಿ ಸಂಗ್ರಹಾಲಯಗಳು ಸೇರಿದಂತೆ ದೇಶದ ಮೂಲೆ ಮೂಲೆಗಳಲ್ಲೂ ವಿವಿಧ ಸ್ವಸಹಾಯ ಸಂಘಗಳು, ಎನ್‌ಜಿಒಗಳು, ವ್ಯಾಪಾರಿ ಒಕ್ಕೂಟಗಳು, ಖಾಸಗಿ ಸಂಸ್ಥೆಗಳು, ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದು, ದೇಶದ 9.20 ಲಕ್ಷಕ್ಕೂ ಅಧಿಕ ಸ್ಥಳಗಳಲ್ಲಿ ಈ ಮೆಗಾ ಅಭಿಯಾನ ನಡೆದಿದೆ ಎಂದು ಕೇಂದ್ರ ಗೃಹ ಮತ್ತು ನಗರಾಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ.

ನಿದ್ದೆ, ಆಹಾರದಲ್ಲಿ ನಾನು ಶಿಸ್ತು ಪಾಲಿಸಬೇಕಿದೆ: ಮೋದಿ
“ರಾಮ್‌ ರಾಮ್‌ ಸರೇಯಾ ನೆ’ ಖ್ಯಾತಿಯ ಫಿಟ್ನೆಸ್‌ ಇನ್‌ಫ್ಲೂಯೆನ್ಸರ್‌ ಅಂಕಿತ್‌ ಬೈಯಾನ್‌ಪುರಿಯಾ ಅವರೊಂದಿಗೆ ಶ್ರಮದಾನದಲ್ಲಿ ತೊಡಗುತ್ತಲೇ ಮೋದಿಯವರು ಅಂಕಿತ್‌ರನ್ನು ಮಾತಿಗೆಳೆದರು. “ನೀವು ದೈಹಿಕ ವ್ಯಾಯಾಮಕ್ಕೆ ಎಷ್ಟು ಸಮಯ ಮೀಸಲಿಡುತ್ತೀರಿ’ ಎಂದು ಮೋದಿ ಪ್ರಶ್ನಿಸಿದಾಗ, ಅಂಕಿತ್‌ ಅವರು “ದಿನದಲ್ಲಿ 4-5 ಗಂಟೆ’ ಎಂದು ಉತ್ತರಿಸುತ್ತಾರೆ. ಜತೆಗೆ, ಪ್ರಧಾನಿ ಮೋದಿಯವರ ಫಿಟೆ°ಸ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆಗ ಪ್ರತಿಕ್ರಿಯಿಸಿದ ಮೋದಿ, “ನಾನು ಹೆಚ್ಚೇನೂ ವ್ಯಾಯಾಮ ಮಾಡುವುದಿಲ್ಲ. ಆದರೆ, ಶಿಸ್ತು ಪಾಲಿಸುತ್ತೇನೆ’ ಎನ್ನುತ್ತಲೇ, “ಎರಡು ವಿಷಯಗಳಲ್ಲಿ ಮಾತ್ರ ನನಗೆ ಶಿಸ್ತು ಪಾಲಿಸಲು ಆಗುತ್ತಿಲ್ಲ. ಒಂದು ಆಹಾರ ಸೇವನೆಯ ಸಮಯ, ಎರಡನೆಯದ್ದು ನಿದ್ರಿಸುವ ಸಮಯ. ಸ್ವಲ್ಪ ಹೆಚ್ಚು ಸಮಯವನ್ನು ನಿದ್ರೆಗೆ ಮೀಸಲಿಡಬೇಕೆಂದು ಯೋಚಿಸುತ್ತೇನಾದರೂ, ಅದು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ.

 

ಟಾಪ್ ನ್ಯೂಸ್

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

20-

Burhan Wani; ಬುರ್ಹಾನ್‌ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.