ಪಾಕ್‌ನಿಂದ ನರಮೇಧ: ಪ್ರಧಾನಿ ವಿಷಾದ
Team Udayavani, Mar 27, 2021, 6:50 AM IST
ಢಾಕಾ: ಬಾಂಗ್ಲಾದೇಶವನ್ನು ಶತಾಯ ಗತಾಯ ವಶಕ್ಕೆ ಪಡೆಯಲು ಹವಣಿಸಿದ್ದ ಪಾಕಿಸ್ಥಾನ ಸೇನೆ, 1971ರಲ್ಲಿ ಬಾಂಗ್ಲಾದೇಶದಲ್ಲಿ ನರಮೇಧ, ಅತ್ಯಾಚಾರದಂಥ ಹೇಯ ಕೃತ್ಯಗಳನ್ನು ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಾಂಗ್ಲಾದೇಶಕ್ಕೆ ಎರಡು ದಿನಗಳ ಭೇಟಿಗಾಗಿ ತೆರಳಿರುವ ಅವರು, ಢಾಕಾದಲ್ಲಿ ಶುಕ್ರವಾರ ಬಾಂಗ್ಲಾ ರಾಷ್ಟ್ರಪಿತ ಶೇಖ್ ಮುಜಿಬುರ್ ರಹಮಾನ್ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಬಾಂಗ್ಲಾದೇಶದಲ್ಲಿ ಪಾಕಿಸ್ಥಾನ ಸೇನೆ ನಡೆಸಿದ ವಿಧ್ವಂಸಕ ಹಾಗೂ ಹೇಯ ಕೃತ್ಯಗಳು ಭಾರತೀಯ ಮನಸ್ಸನ್ನು ತಲ್ಲಣಗೊಳಿಸಿದ್ದವು. ಅಂದು ಪಾಕಿಸ್ಥಾನ ಸೇನೆಯ ದೌರ್ಜನ್ಯವನ್ನು ಖಂಡಿಸಿ ಸತ್ಯಾಗ್ರಹಕ್ಕೆ ಇಳಿದ ಲಕ್ಷಾಂತರ ಭಾರತೀಯರಲ್ಲಿ ನಾನೂ ಒಬ್ಬ. ಆಗ ನನ್ನ ವಯಸ್ಸು 20-22 ಆಗಿದ್ದು, ಅದೇ ನಾನು ಸೇರಿದ ಮೊದಲ ಹೋರಾಟ. ಆಗ ನಾನು ಜೈಲಿಗೂ ಹೋಗಿದ್ದೆ ಎಂದು ಮೋದಿ ನೆನಪಿಸಿಕೊಂಡರು. ಬಾಂಗ್ಲಾವನ್ನು ಸ್ವತಂತ್ರ ವಾಗಿ ಸಲು ಸಹಾಯ ಮಾಡಿದ ಸಮಸ್ತ ಭಾರತೀಯ ಸೇನೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.
ಮಾಜಿಗಳ ಸ್ಮರಣೆ: ಬಾಂಗ್ಲಾ ವಿಮೋಚನೆಯಲ್ಲಿ ಇಂದಿರಾಗಾಂಧಿ ನೀಡಿದ ಬೆಂಬಲವನ್ನು ಬಾಂಗ್ಲಾ ದೇಶೀಯರು ಎಂದಿಗೂ ಮರೆಯಲಾರರು. ಬಾಂಗ್ಲಾದ ಅಭಿವೃದ್ಧಿಯಲ್ಲೂ ಇಂದಿರಾಜೀ ಅವರ ಕಾಣಿಕೆ ಮಹತ್ವದ್ದು ಎಂದ ಮೋದಿ, ಬಾಂಗ್ಲಾ ವಿಮೋಚನೆಗೆ ಬೆಂಬಲ ಸೂಚಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, “ನಮ್ಮ ಹೋರಾಟ ಕೇವಲ ಬಾಂಗ್ಲಾವನ್ನು ಸ್ವತಂತ್ರವಾಗಿಸುವುದಷ್ಟೇ ಅಲ್ಲ, ಇತಿಹಾಸಕ್ಕೆ ಹೊಸ ದಿಕ್ಕನ್ನೂ ತೋರಿಸುವ ಉದ್ದೇಶವೂ ಇದರ ಹಿಂದಿದೆ’ ಎಂದಿದ್ದನ್ನು ಸ್ಮರಿಸಿದರು.
ಇಂದಿನ ಕಾರ್ಯಕ್ರಮ
– ಶನಿವಾರ ಬೆಳಗ್ಗೆ ಢಾಕಾದಿಂದ ಸತ್ಕಿರಾಂಡ್‌ಗೆ ಪ್ರಧಾನಿ ಮೋದಿ ಭೇಟಿ.
– ಶ್ಯಾಮನಗರ್‌ನಲ್ಲಿರುವ ಜೆಶೋರೇಶ್ವರಿ ದೇಗುಲದಲ್ಲಿ ಕಾಳಿ ಮಾತೆಯ ದರ್ಶನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.