Karnataka: ನೂತನ ಜವಳಿ ನೀತಿಯಲ್ಲಿ ಕೈಮಗ್ಗ ನೇಕಾರಿಕೆಗೆ ಆದ್ಯತೆ: ಶಿವಾನಂದ ಪಾಟೀಲ
Team Udayavani, Dec 15, 2023, 9:08 PM IST
ಸುವರ್ಣ ವಿಧಾನಸೌಧ: ನೂತನ ಜವಳಿ ನೀತಿ -2024ರಲ್ಲಿ ರಾಜ್ಯದಲ್ಲಿನ ಕೈ ಮಗ್ಗ ನೇಕಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಸಿ.ಬಿ.ಸುರೇಶ ಬಾಬು ಪ್ರಶ್ನೆಗೆ ಉತ್ತರಿಸಿ, ಗುಜರಾತ್, ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೈಮಗ್ಗ ನೇಕಾರರಿಗೆ ಹೆಚ್ಚಿನ ಸೌಲಭ್ಯ ಇಲ್ಲ. ಆ ರಾಜ್ಯಗಳಲ್ಲಿನ ಕೈ ಮಗ್ಗ ನೇಕಾರರ ಉತ್ಪನ್ನಗಳಿಗೆ ರಾಜ್ಯದ ಕೈಮಗ್ಗ ನೇಕಾರರು ಪೈಪೋಟಿ ನೀಡದ ಸ್ಥಿತಿಯಲ್ಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ 2024ರಲ್ಲಿ ರಚನೆಯಾಗುವ ನೂತನ ಜವಳಿ ನೀತಿಯಲ್ಲಿ ಕೈಮಗ್ಗ ಉತ್ತೇಜನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಮೊದಲ ರಾಜ್ಯ ನಮ್ಮದು: ವಿದ್ಯುತ್ ಮಗ್ಗಗಳಿಗೆ 0 ದಿಂದ 10 ಅಶ್ವಶಕ್ತಿ ಸಾಮರ್ಥ್ಯದ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಇಂತಹ ಸೌಲಭ್ಯ ನೀಡಿದ ಮೊದಲ ರಾಜ್ಯ ನಮ್ಮದಾಗಿದೆ. 10ಎಚ್‌ಪಿಗಿಂತ ಹೆಚ್ಚು 20ಎಚ್‌ಪಿವರೆಗೆ ವಿದ್ಯುತ್ ಮಗ್ಗಗಳಿಗೆ ಮಾಸಿಕ ಗರಿಷ್ಠ 500 ಯುನಿಟ್‌ವರೆಗೆ ಪ್ರತಿ ಯುನಿಟ್‌ಗೆ 1.25 ರೂ.ರಿಯಾಯಿತಿ ದರದಲ್ಲಿ ವಿದ್ಯುತ್ ನೀಡಲಾಗುತ್ತದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.