ಗಡ್ಕರಿ ಕಚೇರಿಗೆ ಬೆದರಿಕೆ ಕರೆ: ಕೈದಿ ವಿಚಾರಣೆ

Team Udayavani, Jan 20, 2023, 6:56 AM IST

tdy-34

ಬೆಂಗಳೂರು: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಚೇರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಬೆಳಗಾವಿ ಹಿಂಡಲಗಾ ಜೈಲಿನ ಕೈದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೊಲೀಸ್‌ ಕ್ರೀಡಾಕೂಟ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಬಳಿಕ ಮಾತನಾಡಿದ ಅವರು, ಬೆಳಗಾವಿ ಹಿಂಡಲಗಾ ಜೈಲಿನಿಂದ ನಾಗಪುರದಲ್ಲಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಚೇರಿಗೆ ಜ.14ರಂದು ಬೆದರಿಕೆ ಕರೆ ಹೋಗಿತ್ತು.ಆ ಪ್ರಕರಣದಲ್ಲಿ ಒಬ್ಬ ಕೈದಿಯನ್ನು ವಶಕ್ಕೆ ಪಡೆಯಲಾಗಿದೆ. ಕೈದಿಗೆ ಮೊಬೈಲ್‌ ಕೊಟ್ಟಿದ್ದು ಯಾರು? ನಂಬರ್‌ ಹೇಗೆ ಸಿಕ್ಕಿತ್ತು? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ರಾಜ್ಯದಲ್ಲೂ ಆತನ ವಿರುದ್ಧ   ಎಫ್ಐಆರ್‌ ದಾಖಲು ಮಾಡಿಕೊಂಡು ತನಿಖೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವಿಚಾರಣೆ ವೇಳೆ ತಾನು ಕರೆ ಮಾಡಿಲ್ಲ ಎಂದು ಕೈದಿ ಹೇಳುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ   ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್‌, ನಾಲ್ವರು ಜೈಲರ್‌ಗಳು, ಇಬ್ಬರು ವಾರ್ಡನ್‌ಗಳು ಸೇರಿ ಏಳು ಮಂದಿಗೆ ನೊಟೀಸ್‌ ಜಾರಿ ಮಾಡಲಾಗಿದೆ. ಏಳು ಜನ ಮೂರು ದಿನದೊಳಗೆ ಉತ್ತರಿಸದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ಸ್ಯಾಂಟ್ರೋ ವಿರುದ್ಧ ದೂರು ನೀಡಬಹುದು-ಆರಗ :

ಸ್ಯಾಂಟ್ರೋ ರವಿ ವಿರುದ್ಧದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿದ್ದು, ಈಗಷ್ಟೇ ವಿಚಾರಣೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಸ್ಯಾಂಟ್ರೋ ರವಿ ವಿರುದ್ದ ಏನೇ ಆರೋಪವಿದ್ದರೂ ಮಾಹಿತಿ ಕೊಡಿ. ಎಲ್ಲವನ್ನೂ ತನಿಖೆ ಮಾಡುವಂತೆ ಸೂಚಿಸಿದ್ದೇವೆ ಎಂದು ಸಚಿವರು ಹೇಳಿದರು.

ಡಿಪಿಎಆರ್‌ ಸಿಎಂ ಅಧೀನದಲ್ಲಿದೆ  :

ಕಮಿಷನರೆಟ್‌ ಹುದ್ದೆಗಳಿಗೆ ಎಸ್ಪಿ ದರ್ಜೆಯ ಅಧಿಕಾರಿಗಳ ನೇಮಕಕ್ಕೆ ಹಿರಿಯ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಡಿಪಿಎಆರ್‌ ಮುಖ್ಯಮಂತ್ರಿಗಳ ಅಧಿನದಲ್ಲಿದೆ. ಐಪಿಎಸ್‌ ಅಧಿಕಾರಿಗಳನ್ನು ಮುಖ್ಯಮಂತ್ರಿಗಳ ಅಣತಿಯಂತೆ ವರ್ಗಾಯಿಸಲಾಗುತ್ತದೆ. ನೇಮಕ ಮಾಡಿರುವುದಿರಂದ ಯಾವುದೇ ತೊಂದರೆ ಇಲ್ಲ. ಎಂದರು. ಕಲಬುರಗಿ ಕಮಿಷನರ್‌ ಆಗಿ ಎಸ್ಪಿ ದರ್ಜೆಯ ಆರ್‌.ಚೇತನ್‌ ವರ್ಗಾವಣೆ ಮಾಡಲಾಗಿದೆ.

ಟಾಪ್ ನ್ಯೂಸ್

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

13

ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ

12

Politics: ಖರ್ಗೆ ತಳ್ಳಿದ ಡಿಕೆಶಿ; ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಟೀಕಿಸಿದ ಬಿಜೆಪಿ

Karkala: ಗ್ರಾಹಕನ ಸೋಗಿನಲ್ಲಿ ಜ್ಯುವೆಲರಿ ಶಾಪ್‌ಗೆ ಬಂದು ಒಡವೆ ಕದ್ದು ಪರಾರಿಯಾದ ಕಳ್ಳ

Karkala: ಗ್ರಾಹಕನ ಸೋಗಿನಲ್ಲಿ ಜ್ಯುವೆಲರಿ ಶಾಪ್‌ಗೆ ಬಂದು ಒಡವೆ ಕದ್ದು ಪರಾರಿಯಾದ ಕಳ್ಳ

1-mn

Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ 

State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ 

H. D. Deve Gowda: ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ತಂದವರು ಸಿಂಗ್‌: ದೇವೇಗೌಡ

H. D. Deve Gowda: ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ತಂದವರು ಸಿಂಗ್‌: ದೇವೇಗೌಡ

MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ

MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ

12

Politics: ಖರ್ಗೆ ತಳ್ಳಿದ ಡಿಕೆಶಿ; ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಟೀಕಿಸಿದ ಬಿಜೆಪಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

South Africa vs Pakistan 2nd Test: ಬಾಶ್‌ ದಾಖಲೆ: ದ. ಆಫ್ರಿಕಾ ಮುನ್ನಡೆ

South Africa vs Pakistan 2nd Test: ಬಾಶ್‌ ದಾಖಲೆ: ದ. ಆಫ್ರಿಕಾ ಮುನ್ನಡೆ

Sachin Tendulkar: ಸಚಿನ್‌ ತೆಂಡುಲ್ಕರ್‌ಗೆಎಂಸಿಸಿ ಗೌರವ ಸದಸ್ಯತ್ವ

Sachin Tendulkar: ಸಚಿನ್‌ ತೆಂಡುಲ್ಕರ್‌ಗೆಎಂಸಿಸಿ ಗೌರವ ಸದಸ್ಯತ್ವ

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Uppinangady: ಬೆಂಕಿಗೆ ಸುಟ್ಟುಹೋದ ಬೇಕರಿ ಅಂಗಡಿ

Uppinangady: ಬೆಂಕಿಗೆ ಸುಟ್ಟುಹೋದ ಬೇಕರಿ ಅಂಗಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.