ಪ್ರೊ ಕಬಡ್ಡಿ: ಗುಜರಾತ್, ದಬಾಂಗ್ ದಿಲ್ಲಿ ಗೆಲುವಿನ ಆಟ
Team Udayavani, Jan 31, 2022, 10:45 PM IST
ಬೆಂಗಳೂರು: ಅಂಕಪಟ್ಟಿಯಲ್ಲಿ ತೀರಾ ಕೆಳಕ್ಕಿರುವ ಗುಜರಾಂತ್ ಜೈಂಟ್ಸ್ ತಂಡ ಸೋಮವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಪ್ರಬಲ ಹರ್ಯಾಣ ಸ್ಟೀಲರ್ಸ್ ತಂಡವನ್ನು 32-26 ಅಂಕಗಳಿಂದ ಉರುಳಿಸಿದೆ. ಆದರೆ ಈ ಗೆಲುವಿನಿಂದ ಗುಜರಾತ್ ಪರಿಸ್ಥಿತಿಯಲ್ಲೇನೂ ಭಾರೀ ಸುಧಾರಣೆಯಾಗಿಲ್ಲ.
ದಿನದ ದ್ವಿತೀಯ ಪಂದ್ಯದಲ್ಲಿ ದಬಾಂಗ್ ದಿಲ್ಲಿ 36-30 ಅಂಕಗಳಿಂದ ಯು ಮುಂಬಾವನ್ನು ಮಣಿಸಿತು. ಇದರೊಂದಿಗೆ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು. ದಿಲ್ಲಿ 9 ಗೆಲುವುಗಳಿಂದ 53 ಅಂಕ ಹೊಂದಿದೆ.
ಗುಜರಾತ್ ಪರಾಕ್ರಮ
ವಿರಾಮದ ವೇಳೆಯೇ ಗುಜರಾತ್ 19-12 ಮುನ್ನಡೆಯಲ್ಲಿತ್ತು. 2ನೇ ಅವಧಿಯಲ್ಲಿ ಹರ್ಯಾಣ ತಿರುಗಿಬಿತ್ತಾದರೂ ಹಿನ್ನಡೆಯಿಂದ ಹೊರಬರಲು ಸಾಧ್ಯವಾಗಲಿಲ್ಲ.
ಗುಜರಾತ್ ಪರ ದಾಳಿಗಾರರಾದ ಅಜಯ್ ಕುಮಾರ್, ಪ್ರದೀಪ್ ಕುಮಾರ್ ಉತ್ತಮ ಪ್ರದರ್ಶನ ನೀಡಿದರು. ಅಜಯ್ 19 ದಾಳಿಗಳಲ್ಲಿ 9 ಯಶಸ್ಸು ಸಾಧಿಸಿ, 11 ಅಂಕ ಗಳಿಸಿದರು. ಪ್ರದೀಪ್ ಕುಮಾರ್ 15 ದಾಳಿಗಳಲ್ಲಿ 10 ಅಂಕ ಪಡೆದರು. ಗಿರೀಶ್ ಮಾರುತಿ 9 ಯತ್ನಗಳಲ್ಲಿ 3 ಬಾರಿ ಯಶಸ್ವಿಯಾದರು.
ಹರ್ಯಾಣ ಪರ ಉತ್ತಮ ಎನ್ನುವ ಪ್ರದರ್ಶನ ನೀಡಿದ್ದು ವಿಕಾಶ್ ಕಂಡೋಲ. ಅವರು 12 ಬಾರಿ ಎದುರಾಳಿಗಳ ಅಂಕಣಕ್ಕೆ ನುಗ್ಗಿ 7 ಅಂಕ ಸಂಪಾದಿಸಿದರು. ಮೀತು 17 ದಾಳಿಗಳಲ್ಲಿ 8 ಅಂಕ ಗಳಿಸಿದರು. ಈ ಮಟ್ಟದ ಪ್ರದರ್ಶನ ಉಳಿದವರಿಂದ ಬರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia ಗೆಲುವಿಗೆ ಕಮಿನ್ಸ್ ನೆರವು: ಪಾಕಿಸ್ಥಾನ 203; ಆಸೀಸ್ 8 ವಿಕೆಟಿಗೆ 204
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Football ಮೈದಾನಕ್ಕೆ ಬಡಿದ ಸಿಡಿಲು; ಆಟಗಾರ ಮೃ*ತ್ಯು, ಹಲವರಿಗೆ ಗಾಯ
BGT Series: ಇಂಡಿಯಾ ಎ ಪಂದ್ಯಕ್ಕಾಗಿ ಆಸೀಸ್ ಗೆ ಹೊರಟ ಕೆಎಲ್ ರಾಹುಲ್, ಜುರೆಲ್
Team India: ಗಂಭೀರ್ ಅಧಿಕಾರಕ್ಕೆ ಕುತ್ತು ತಂದ ಸರಣಿ ಸೋಲು; ಬಿಸಿಸಿಐ ಮಹತ್ವದ ನಿರ್ಧಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.