ಬೆಂಗಾಲ್ ಕದನ ಗೆದ್ದ ದಿಲ್ಲಿ; ಮತ್ತೆ ನವೀನ್ ಕುಮಾರ್ ಆರ್ಭಟ
Team Udayavani, Dec 29, 2021, 10:57 PM IST
ಬೆಂಗಳೂರು: ಬುಧವಾರದ ಬೆಂಗಾಲ್ ಕದನವನ್ನು ದೊಡ್ಡ ಅಂತರದಲ್ಲಿ ಗೆದ್ದ ದಬಾಂಗ್ ದಿಲ್ಲಿ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಟ್ಟಿಗೊಳಿಸಿದೆ. ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ ವಿರುದ್ಧ ದಿಲ್ಲಿ ಪಡೆ 52-35 ಅಂತರದ ಅಮೋಘ ಜಯ ಸಾಧಿಸಿತು.
ಇದು 4 ಪಂದ್ಯಗಳಲ್ಲಿ ದಿಲ್ಲಿಗೆ ಒಲಿದ 3ನೇ ಜಯ. ಒಂದು ಪಂದ್ಯ ಟೈ ಮಾಡಿಕೊಂಡಿತ್ತು. ದಿಲ್ಲಿ 18 ಅಂಕ ಗಳಿಸಿದೆ. ಇನ್ನೊಂದೆಡೆ ಬೆಂಗಾಲ್ ಸತತ 2 ಪಂದ್ಯಗಳಲ್ಲಿ ಎಡವಿತು.
ದಿಲ್ಲಿ-ಬೆಂಗಾಲ್ ನಡುವಿನ ಮೊದಲ ಪಂದ್ಯ ಕಳೆದ ಸಲದ ಫೈನಲ್ ಮುಖಾಮುಖಿಯ ಪುನರಾವರ್ತನೆ ಯಾಗಿತ್ತು. ಅಂದು ಬೆಂಗಾಲ್ ಗೆದ್ದು ಚಾಂಪಿಯನ್ ಆದರೆ, ಇಂದು ದಿಲ್ಲಿ ಭಾರೀ ಅಂತರದಿಂದ ಬೆಂಗಾಲ್ ಕದನ ಗೆದ್ದಿತು. ದಿಲ್ಲಿಯ ರೈಡರ್ ನವೀನ್ ಕುಮಾರ್ ಮತ್ತೊಮ್ಮೆ ಆರ್ಭಟಿಸಿ 24 ಅಂಕ ಗಳಿಸಿ ಕೊಟ್ಟರು. ಆಲ್‌ರೌಂಡರ್ ವಿಜಯ್ ದಿಲ್ಲಿಯ ಮತ್ತೋರ್ವ ಹೀರೋ ಎನಿಸಿದರು. ವಿಜಯ್ ತಂದಿತ್ತ ಅಂಕ 10.
ಪಂದ್ಯದ ಆರಂಭದಿಂದಲೇ ರೈಡಿಂಗ್ ಮತ್ತು ರಕ್ಷಣಾ ವಿಭಾಗಗಳೆರಡರಲ್ಲೂ ದಿಲ್ಲಿ ಅಮೋಘ ಹಿಡಿತ ಸಾಧಿಸಿತು. ವಿರಾಮದ ವೇಳೆ 33-15 ಅಂಕಗಳ ಬೃಹತ್ ಮುನ್ನಡೆ ದಿಲ್ಲಿಯ ಪಾರಮ್ಯಕ್ಕೆ ಸಾಕ್ಷಿಯಾಗಿತ್ತು.
ಇದನ್ನೂ ಓದಿ:ಪೃಥ್ವಿ ಶಾ ಮುಂಬಯಿ ರಣಜಿ ನಾಯಕ : ಅರ್ಜುನ್ ತೆಂಡೂಲ್ಕರ್ ತಂಡದಲ್ಲಿ
ಬೆಂಗಾಲ್ ತಂಡದ ತಾರಾ ರೈಡರ್ ಮಣಿಂದರ್ ಸಿಂಗ್ 16 ಅಂಕ ಗಳಿಸಿದರೂ ಮೊದಲಾರ್ಧದ ಆಟದಲ್ಲಿ ಯಶಸ್ಸು ಕಾಣಲಿಲ್ಲ. ಅವರ ರೈಡ್‌ಗಳು ವಿಫಲಗೊಂಡದ್ದೇ ಹೆಚ್ಚು. ದ್ವಿತೀಯಾರ್ಧದಲ್ಲಿ ಮಣಿಂದರ್ ಅಬ್ಬರಿಸಿದರೂ ಆಗಲೇ ದಿಲ್ಲಿ ಬಹಳ ಮುಂದೆ ಸಾಗಿತ್ತು. ಬಂಗಾಲದ ಮತ್ತೋರ್ವ ರೈಡರ್ ಸುಕೇಶ್ ಹೆಗ್ಡೆ 9 ಅಂಕ ಕೊಡಿಸಿದರು. ಕರ್ನಾಟಕದ ಮತ್ತಿಬ್ಬರು ಆಟಗಾರರಾದ ದರ್ಶನ್ ಜೆ. (1 ಅಂಕ) ಮತ್ತು ಸಚಿನ್ ವಿಠuಲ (0) ವಿಫಲರಾದರು. ಡಿಫೆಂಡರ್ ಅಬೋಜರ್ ಮಿಘಾನಿ (4) ಸಾಧಾರಣ ಯಶಸ್ಸು ಕಂಡರು.
ಯುಪಿ ಯೋಧಾ ಮತ್ತು ಗುಜರಾತ್ ನಡುವಿನ ದಿನದ ಮತ್ತೂಂದು ಪಂದ್ಯ32-32 ಅಂತರದಿಂದ ಸಮಬಲಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.