ಪ್ರೊ ಕಬಡ್ಡಿ: ಗುಜರಾತ್ ಜೈಂಟ್ಸ್ , ಬೆಂಗಳೂರು ಬುಲ್ಸ್ ಗೆ ಜಯ
Team Udayavani, Feb 1, 2022, 10:52 PM IST
ಬೆಂಗಳೂರು: ಅಜಯ್ ಕುಮಾರ್ (9), ಪ್ರದೀಪ್ ಕುಮಾರ್ (7)ಅವರ ರೈಡಿಂಗ್ ಸಾಹಸದಿಂದ ಗುಜರಾತ್ ಜೈಂಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ ವಿರುದ್ಧ 34-25 ಅಂಕಗಳಿಂದ ಗೆಲುವು ದಾಖಲಿಸಿದೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಮೊದಲಾರ್ಧದಲ್ಲಿ ಬೆಂಗಾಲ್ 13-12 ಅಂತರದಿಂದ ಮುನ್ನಡೆ ಸಾಧಿಸಿತ್ತು. ಬಳಿಕ ದ್ವಿತಿಯಾರ್ಧದಲ್ಲಿ ತಿರುಗಿ ಬಿದ್ದ ಗುಜರಾತ್ ರೈಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಮಿಂಚಿತು. ಈ ಮೂಲಕ ಕೊನೆಯ 5 ನಿಮಿಷದಲ್ಲಿ ಬೆಂಗಾಲ್ ತಂಡವನ್ನು ಹಿಮ್ಮೆಟ್ಟಿಸಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಗುಜರಾತ್ ಗೆಲುವು ಒಲಿಸಿಕೊಂಡಿತು. ಗುಜರಾತ್‌ಗೆ 14ನೇ ಪಂದದಲ್ಲಿ ಒಲಿದ 5 ನೇ ಗೆಲುವು ಇದಾಗಿದೆ. ಗುಜರಾತ್ ಪರ ರಾಕೇಶ್ (4), ಓಸ್ತರಾಕ್ (4), ಅಂಕ ಗಳಿಸಿದರೆ ಬೆಂಗಾಲ್ ಪರ ನಾಯಕ ಮಣಿಂದರ್ ಸಿಂಗ್ (9), ರಾಣ್ ಸಿಂಗ್ (6), ನಬೀಭಕ್Ò (5) ಅಂಕ ಸಂಪಾದಿಸಿದರು.
ಗೆಲುವಿನ ಲಯಕ್ಕೆ ಮರಳಿದ ಬುಲ್ಸ್
ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ಬೆಂಗಳೂರು ಬುಲ್ಸ್ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಮಂಗಳವಾರದ ದ್ವಿತೀಯ ಪಂದ್ಯದಲ್ಲಿ ರೈಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಸರ್ವಾಂಗಿಣ ಪ್ರದರ್ಶನ ತೋರಿದ ಬುಲ್ಸ್ 31-26ಅಂತರದಿಂದ ಯುಪಿ ಯೋಧಾವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಬುಲ್ಸ್ ಪರ ನಾಯಕ ಪವನ್ ಸೆಹ್ರವಾತ್ (9), ಅಮನ್ (7), ಭರತ್ (6) ಅಂಕ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.