Pro Kabaddi League: ತಮಿಳ್ ಉರುಳಿಸಿದ ಯು ಮುಂಬಾ
Team Udayavani, Nov 15, 2024, 1:09 AM IST
ಗ್ರೇಟರ್ ನೋಯ್ಡಾ: ಇಲ್ಲಿ ಗುರುವಾರ ನಡೆದ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ನ ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡವು ತಮಿಳ್ ತಲೈ ವಾಸ್ ತಂಡವನ್ನು 35-32 ಅಂಕಗಳಿಂದ ರೋಮಾಂಚಕವಾಗಿ ಸೋಲಿಸಿತು.
ಈ ಗೆಲುವಿನಿಂದ ಮುಂಬಾ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ದಿನದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಯುಪಿ ಯೋಧಾಸ್ 40-34 ಅಂತರದ ಜಯ ಗಳಿಸಿತ್ತು.
ಮುಂಬಾ ತಂಡ ರೈಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಅಮೋಘ ನಿರ್ವಹಣೆ ನೀಡಿತು. ತೀವ್ರ ಪೈಪೋಟಿಯಿಂದ ಸಾಗಿದ ಈ ಪಂದ್ಯದಲ್ಲಿ ತಮಿಳ್ ತಲೈವಾಸ್ ಆಟಗಾರರು ಕೂಡ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದರು. ಮುಂಬಾ ರೈಡಿಂಗ್‌ನಲ್ಲಿ 17 ಮತ್ತು ಟ್ಯಾಕಲ್‌ನಲ್ಲಿ 10 ಅಂಕ ಗಳಿಸಿದ್ದರೆ ತಮಿಳ್ ತಂಡ ರೈಡಿಂಗ್‌ನಲ್ಲಿ 18 ಮತ್ತು ಟ್ಯಾಕಲ್‌ನಲ್ಲಿ 11 ಅಂಕ ಪಡೆದಿತ್ತು.
ಮುಂಬಾ ತಂಡದ ಮನ್‌ಜಿàತ್ ಭರ್ಜರಿ ಆಟದ ಪ್ರದರ್ಶನ ನೀಡಿದರು. ರೈಡಿಂಗ್‌ನಲ್ಲಿ 7 ಸಹಿತ ಒಟ್ಟು 10 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಜಿತ್ ಚವಾಣ್ 8 ಅಂಕ ಗಳಇಸಿದರು. ತಮಿಳ್ ತಂಡದ ಮೊಯಿನ್ ಶಫಾಗಿ 10 ಅಂಕ ಪಡೆದರು.
ಈ ಗೆಲುವಿನಿಂದ ಮುಂಬಾ ತಂಡವು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲು ಸಹಕಾರಿಯಾಯಿತು. ಆಡಿದ 10 ಪಂದ್ಯಗಳಲ್ಲಿ ಇದು ಮುಂಬಾ ತಂಡದ ಆರನೇ ಗೆಲವು ಆಗಿದ್ದು ಒಟ್ಟಾರೆ 34 ಅಂಕ ಪಡೆದುಕೊಂಡಿದೆ.
ಯೋಧಾಸ್‌ಗೆ ಜಯ
ಈ ಮೊದಲು ನಡೆದ ಪಂದ್ಯದಲ್ಲಿ ಯುಪಿ ಯೋಧಾಸ್ ತಂಡವು ತೆಲುಗು ಟೈಟಾನ್ಸ್ ತಂಡವನ್ನು ಕೆಡಹಿತ್ತು. ಇದು ಯೋಧಾಸ್‌ಗೆ ಕೂಟದಲ್ಲಿ ಸಿಕ್ಕಿದ 4ನೇ ಗೆಲುವಾದರೆ, ಟೈಟಾನ್ಸ್‌ಗೆ ಎದುರಾದ 4ನೇ ಸೋಲು ಆಗಿದೆ.
ಯುಪಿ ಯೋಧಾಸ್ ಪರ ಭವಾನಿ ರಜಪೂತ್ ಮತ್ತು ಭರತ್ ಭರ್ಜರಿ ಪ್ರದರ್ಶನ ನೀಡಿದರು. ರಜಪೂತ್ 12, ಭರತ್ 11 ಅಂಕ ಗಳಿಸಿದರು. ಟೈಟಾನ್ಸ್‌ನಿಂದ ವಿಜಯ್ ಮಲಿಕ್ 15 ಅಂಕ ಗಳಿಸಿ ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SMAT 2024: ನೇರ ಪ್ರಸಾರದಲ್ಲೇ ಕ್ಷಮೆ ಕೇಳಿದ ಟಿವಿ ಅಂಪೈರ್! ಆಗಿದ್ದೇನು?
INDvsAUS: ಮಳೆಯಾಟದಲ್ಲಿ ಜಾರಿದ ಭಾರತದ ಬ್ಯಾಟಿಂಗ್; ಆಸೀಸ್ ಬಿಗಿ ಹಿಡಿತ
WPL Auction: ಮಹಿಳಾ ಐಪಿಎಲ್ ಮಿನಿ ಹರಾಜು: ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
England vs Newzeland Test: ನ್ಯೂಜಿಲ್ಯಾಂಡ್ ಹಿಡಿತದಲ್ಲಿ ಹ್ಯಾಮಿಲ್ಟನ್ ಟೆಸ್ಟ್
Womens T20 Cricket: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಗೆಲುವು
MUST WATCH
ಹೊಸ ಸೇರ್ಪಡೆ
PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್ ಗೆ ಕೇಂದ್ರದ ಪತ್ರ
Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ
Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ
ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.