Pro Kabaddi: ಮುಂಬಾ-ಪುನೇರಿ ಪಂದ್ಯ ಟೈ
Team Udayavani, Jan 23, 2024, 11:48 PM IST
ಹೈದರಾಬಾದ್: ಒಂದೇ ರಾಜ್ಯದ ತಂಡಗಳಾದ ಯು ಮುಂಬಾ ಮತ್ತು ಪುನೇರಿ ಪಲ್ಟಾನ್ ನಡುವಿನ ಮಂಗಳವಾರದ ಪ್ರೊ ಕಬಡ್ಡಿ ಪಂದ್ಯ ಟೈ ಆಯಿತು. ಎರಡೂ ತಂಡಗಳು 32 ಅಂಕ ಗಳಿಸಿದವು. ಇದು ಇತ್ತಂಡಗಳ ನಡುವಿನ 3ನೇ ಟೈ ಫಲಿತಾಂಶ.
15 ಅಂಕ ಗಳಿಸಿದ ರೈಡರ್ ಗುಮಾನ್ ಸಿಂಗ್ ಮುಂಬಾ ತಂಡದ ಹೀರೋ ಎನಿಸಿದರು. ಕೊನೆಯಲ್ಲಿ ರೈಡರ್ ಪ್ರಣಯ್ ರಾಣೆ ಒಂದು ಬೋನಸ್ ಅಂಕದೊಂದಿಗೆ ಪಂದ್ಯವನ್ನು ಸಮಬಲಕ್ಕೆ ತಂದರು. ಪುನೇರಿ ಪರ ನಾಯಕ ಅಸ್ಲಾಮ್ ಮುಸ್ತಾಫಾ 8, ರೈಡರ್ ಮೋಹಿತ್ ಗೋಯತ್ 7, ರೇಝ 6 ಅಂಕ ಗಳಿಸಿ ಮಿಂಚಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.