ಸಮಸ್ಯೆಗಳನ್ನು ಸಾಕುತ್ತಾ ಬದುಕಬಾರದು


Team Udayavani, Feb 7, 2021, 7:40 AM IST

ಸಮಸ್ಯೆಗಳನ್ನು ಸಾಕುತ್ತಾ ಬದುಕಬಾರದು

ಪ್ರಪಂಚದಲ್ಲಿ ಸಾಮಾನ್ಯವಾಗಿ ಸಕಲರೂ ಸುಖಾಕಾಂಕ್ಷಿಗಳು. ಸಮಸ್ಯೆಗಳೆಂದರೆ ಬಹುತೇಕ ಮಂದಿಗೆ ಒಗ್ಗದ, ಅಹಿತಕರ ವಿಷಯ. ಇದೇ ಕಾರಣದಿಂದಲೋ ಏನೋ “ಸಮಸ್ಯೆ’ ಎಂಬ ಪದಕ್ಕೆ ಸೂಕ್ತ ವಿವರಣೆ ನೀಡುವುದೇ ಒಂದು ದೊಡ್ಡ ಸಮಸ್ಯೆ. ಆಕಸ್ಮಿಕವೋ ಎಂಬಂತೆ “ಸಮಸ್ಯೆ’, “ಜೀವನ’, “ಮಾನವ’, “ಬದುಕು’ ಮುಂತಾದ ಶಬ್ದಗಳು ಮೂರು ಅಕ್ಷರಗಳೊಂದಿಗೆ ತಳಕು ಹಾಕಿಕೊಂಡಿವೆ.

ಸಮಸ್ಯೆಗಳೆಂಬುದು ಸದ್ದು ಮಾಡದೆ ಬಂದು ನಮ್ಮ ಮಾನಸಿಕ ಸಮತೋಲನವನ್ನು ಹದಗೆಡಿಸುತ್ತವೆ. ನಾವಿರುವ ಜಗತ್ತಿನಲ್ಲಿ ಎಷ್ಟು ವಿಧ ವಿಧವಾದ ಮುಖಗಳಿವೆಯೋ ಅಷ್ಟು ವಿಧವಾದ ಸಮಸ್ಯೆಗಳಿವೆ.

ಬದುಕಿನ ಹಾದಿಯಲ್ಲಿ ಕಷ್ಟಕರ ಸಮಸ್ಯೆಗಳು ಬಳಿ ಬಂದಾಗ ಅವನ್ನು ಭಯಭೀತರಾಗದೆ ಎದುರಿಸುವವರು ಅತೀ ವಿರಳ. ಸಮಸ್ಯೆಗಳ ಮೂಲ ಕಾರಣವನ್ನು ಕೂಲಂಕಷವಾಗಿ ವಿಚಾರ ಮಾಡಿ, ವಿಮರ್ಶೆ ಮಾಡಿ ತ್ವರಿತವಾಗಿ ಅವುಗಳಿಗೆ ಪರಿಹಾರವನ್ನು ಶೋಧಿಸಿಕೊಳ್ಳುವುದು ಬುದ್ಧಿವಂತರ ಗುರುತು. ಪರಿಪೂರ್ಣ ಪರಿಹಾರವಿರದ ಕೊರತೆಗಳನ್ನು ಒಪ್ಪಿಕೊಂಡು ಅವುಗಳನ್ನು ಸಹನೀಯವನ್ನಾಗಿಸುವ ಶತಪ್ರಯತ್ನ ಮಾಡಬೇಕು. ಸಮಾ ಧಾನದಿಂದ ಎಲ್ಲ ಮುಂಡಿಗೆಗಳಿಗೆ ಪರಿಹಾರ ಸೂತ್ರವನ್ನು ಕಂಡು ಹಿಡಿಯಬಹುದು. ಆದ್ದರಿಂದ ಸಮಸ್ಯೆಗಳನ್ನು ಸಾಕುವ ಹವ್ಯಾಸ ನಮ್ಮದಾಗಬಾರದು. ಬುದ್ಧಿ ಬಲದಿಂದ ಬಾಳಿನ ಕಗ್ಗಂಟು ಗಳನ್ನು ನಿವಾರಿಸಿಕೊಂಡರೆ ಮನಃಶಾಂತಿ ನಿರಾಂತಕವಾಗಿ ದೊರಕುತ್ತದೆ.

ಮನಸ್ಸಿನಲ್ಲಿದೆ ದಂಡದ್ರವ್ಯ
ಬಹುತೇಕ ತೊಡಕುಗಳಿಂದ ಪಾರಾಗಲು ನಮ್ಮ ಅಂತರಂಗ ದಲ್ಲಿಯೇ ಮಾರ್ಗಗಳಿವೆ. ಜೀವನದ ಸಮಸ್ಯೆಗಳು ಮಾರಕವಲ್ಲ. ಅವುಗಳಿಗೆ ನಾವು ನೀಡುವ ಪ್ರಾಧಾನ್ಯ ಅವನ್ನು ವಿಷಕಾರಿ ಯನ್ನಾಗಿಸುತ್ತವೆ. ಬಹುವಾಗಿ ತೊಂದರೆಗಳು ನಮ್ಮ ಮೂಢ ವಿಚಾರಗಳಿಂದ ಹುಟ್ಟುತ್ತವೆ. ಒಂದು ಸಮಸ್ಯೆಗೆ ನಾವೆಷ್ಟು ಕಾರಣೀಭೂತರು ಎಂಬುದನ್ನರಿತಾಗ ಆ ಸಮಸ್ಯೆಯ
ತೀವ್ರತೆ ಕ್ಷೀಣಿಸುತ್ತದೆ. ಉತ್ತಮ ಮಟ್ಟದ ಆಲೋಚನೆಗಳನ್ನು, ವಿಚಾರಗಳನ್ನು ಪ್ರಜ್ಞಾವಂತರಾಗಿ ಬಾಳಿನಲ್ಲಿ ಅಳವಡಿಸಿ ಕೊಂಡಾಗ ಸಮಸ್ಯೆಗಳ ನಿಜರೂಪವನ್ನು ತಿಳಿದುಕೊಳ್ಳುವುದು ಕಠಿನವಲ್ಲ. ಆದ್ದರಿಂದ ಬದುಕಿನ ಪಂಥಾಹ್ವಾನಗಳನ್ನು ನೋವಿನ ಮನೆ ಯೆಂದು ಪರಿಗಣಿಸಿದರೆ ಶಾಂತಮನಸ್ಕರಾಗಿ ಸಮಸ್ಯೆ ಗಳನ್ನು ಬಗೆಹರಿಸುವ ಸಂಕಲ್ಪವನ್ನು ಮಾಡಿ ಉತ್ಸಾಹದಿಂದ ನಡೆಯಬೇಕು.

ಕುರುಕ್ಷೇತ್ರ ರಣಕ್ಷೇತ್ರದಲ್ಲಿ ನಿರಾಸೆಗೊಂಡ ಸವ್ಯ ಸಾಚಿಗೆ ಗೀತಾಚಾರ್ಯನು “ಎಲ್ಲ ಸಮಸ್ಯೆಗಳನ್ನು ಸರಿಸಮಾನವಾಗಿ ಪರಿಗಣಿಸಿ ಸಮರಕ್ಕೆ ಅಣಿಯಾಗು’ ಎಂದು ಹೇಳುತ್ತಾನೆ. ಈ ಹಿತೋಪದೇಶದ ಮರ್ಮವನ್ನು ತಿಳಿದುಕೊಂಡು ಬಂದ, ಬರುವ ಕಷ್ಟ-ಕಾರ್ಪಣ್ಯಗಳನ್ನು, ವಿಪತ್ತುಗಳನ್ನು ನಿರ್ಭೀತರಾಗಿ ಎದುರಿಸಬೇಕು. ಮಗು ಹುಟ್ಟಿ ಕಣ್ತೆರೆದು ಪ್ರಪಂಚವನ್ನು ನೋಡುವ ದಿನದಿಂದ ಮರಳಿ ಮಣ್ಣಿಗೆ ಹೋಗುವವರೆಗೂ ಸಮಸ್ಯೆಗಳ ಜತೆ ಯುದ್ಧ ಸಾಗುತ್ತದೆ. ಸಮಸ್ಯೆಗಳು ಎಲ್ಲರ ಬದುಕಿನಲ್ಲಿ ಅನಿವಾರ್ಯ. ಆದರೆ ಅವುಗಳಿಂದ ಖನ್ನರಾ ಗುವುದು, ದುಃಖೀತರಾಗುವುದು ನಮ್ಮ ಆಯ್ಕೆಗೆ ಬಿಟ್ಟ ವಿಷಯವಾಗಿದೆ.
ಜಟಿಲ ಸಮಸ್ಯೆಗಳ ಗಂಡಾಂತರಗಳನ್ನು ಪ್ರತಿಭಟಿಸಿ ವಿಜಯ ಶಾಲಿಗಳಾದ ಜೀವಿಗಳಿಂದಲೇ ಲೋಕ ಪ್ರಗತಿಯನ್ನು ಕಂಡಿದೆ. ಅನಿವಾರ್ಯ ಸಮಸ್ಯೆಗಳನ್ನು ಬಗೆಹರಿಸುವ ಬುದ್ಧಿಮತ್ತೆೆ ಪ್ರತಿಯೊಬ್ಬರ ಸ್ವತ್ತು ಆಗಬೇಕು. ಬದುಕಿನ ಸವಾಲುಗಳನ್ನು ಎದುರಿಸುವ ಛಲಗಾರಿಕೆ, ಆತ್ಮಸ್ಥೈರ್ಯ ಯಾರಿಗೆ ಇರುತ್ತದೋ ಅಂಥವರಿಗೆ ಸೋಲೆಂಬುದಿಲ್ಲ. ಇಂತಹ ವ್ಯಕ್ತಿಗಳ ಸಮೀಪಕ್ಕೆ ಬರಲು ಸಮಸ್ಯೆಗಳೂ ಅಂಜುತ್ತವೆ. ಆದಕಾರಣ ಬಾಳೆಂಬ ನಿರಂತರ ಸಂಗ್ರಾಮದಲ್ಲಿ ತೊಡಕುಗಳಿಂದ ಉದ್ಭವಿಸುವ ನಿರಾಶೆಗಳ ಜತೆಗೆ ಬದುಕುವುದು ಸಮಂಜಸವಲ್ಲ. ಈ ರೀತಿಯ ನಿಕೃಷ್ಟವಾದ ನಿರ್ವಿಣ್ಣತೆ ಮನುಷ್ಯನ ಅನೇಕ ಸುಮಧುರ ಕನಸುಗಳನ್ನು ಅವುಗಳ ಶೈಶವದಲ್ಲಿಯೇ ಕತ್ತು ಹಿಸುಕಿ ಹಾಕುತ್ತದೆ.

ಸ್ವಾಭಿಮಾನವೊಂದು ದೈವಿಕ ರೆಕ್ಕೆ
ಲೋಕದಲ್ಲಿ ಲೋಕಮಾನ್ಯರೆನಿಸಲು ಅನೇಕ ಸತ್ಯ-ತಣ್ತೀಗಳನ್ನು ಶ್ರದ್ಧೆಯಿಂದ ಪಾಲಿಸುವುದು ಅನಿವಾರ್ಯ. ಇಂತಹ ಉತ್ತುಂಗ ಗುಣಗಳಲ್ಲಿ ಸ್ವಾಭಿಮಾನವೂ ಒಂದು. ತಪ್ಪು ಮಾಡದಿದ್ದರೆ ಕ್ಷಮೆ ಕೇಳದಿರುವುದು, ನುಡಿದಂತೆ ನಡೆಯುವುದು, ಅನ್ಯರ ಹಂಗಿನಲ್ಲಿ ಬದುಕದಿರುವುದು, ವಿನಾಕಾರಣ ಇನ್ನೊಬ್ಬರ ಸಹಾಯವನ್ನು ಯಾಚಿಸದಿರುವುದು, ಅವಮಾನವನ್ನು ಸಹಿಸದಿರುವುದು ಇವೆಲ್ಲ ಸ್ವಾಭಿಮಾನದ ಸಂಕೇತಗಳು. ಸ್ವಾಭಿಮಾನಿಗೆ ಸಹಜವಾಗಿಯೇ ಪ್ರಪಂಚದಲ್ಲಿ ಗೌರವ ಸಿಗುತ್ತದೆ. ಉಳಿದವರ ಘನತೆಯನ್ನು ಲೆಕ್ಕಿಸದ ಅಹಂಭಾವ, ತಾತ್ಸಾರ ಸ್ವಾಭಿಮಾನಿಯಲ್ಲಿ ಕಾಣುವುದಿಲ್ಲ.

ನಮ್ಮಲ್ಲಿ ಸ್ವಾಭಿಮಾನವಿರಬೇಕು, ದುರಭಿಮಾನವಲ್ಲ. ದುರಭಿಮಾನ ಎಂಬುದು ಸ್ವಾಭಿಮಾನಕ್ಕೆ ಧಕ್ಕೆ ತರುವ ದುರ್ಗುಣ. ದುರಭಿಮಾನವನ್ನು ಬಿಡದ ಕಾರಣ ದುರಂತ ಮಯ ಅಂತ್ಯವನ್ನು ಕಂಡ ದುರ್ಯೋಧನನ ಜೀವನದ ಚಿತ್ರಣ ಇದಕ್ಕೆ ಅತ್ಯುತ್ತಮ ಉದಾಹರಣೆ.

ಸ್ವಾಭಿಮಾನವೆಂಬುದು ಒಂದು ಪ್ರಬಲವಾದ ಪ್ರೇರಣ ಶಕ್ತಿ. ಹೇಡಿಗಳಾಗದೆ, ದುರ್ಬಲರಾಗದೆ, ಗುಲಾಮರಾಗದೆ, ಕರ್ತವ್ಯ ಶೂನ್ಯರಾಗದೆ ಬದುಕುವುದೇ ಸ್ವಾಭಿಮಾನ. ಸ್ವಾಭಿಮಾನಿಗಳು ಜೀವನದ ಆಪತ್ತು-ವಿಪತ್ತುಗಳಿಗೆ ತತ್ತರಿಸಿ ಅಧೀನರಾಗುವುದಿಲ್ಲ. ಅಂಥವರು ಸೋಲೆಂಬ ಹಾಲಾಹಾಲವನ್ನು ನುಂಗುವ ಪರಿಸ್ಥಿತಿ ಬಂದರೂ ಹೆದರದೆ ಪ್ರಗತಿ ಪಥದಲ್ಲಿ ಸಾಗುತ್ತಾರೆ. ಸ್ವಾಭಿಮಾನಿ ಗಳು ಇಹಲೋಕದಲ್ಲೂ ಸಲ್ಲುವರು, ಪರಲೋಕದಲ್ಲೂ ಸಲ್ಲುವರು. ಇಂತಹ ಜನರು ಬಹುಮುಖೀ ಸಾಧ್ಯತೆಗಳಿಗೆ ತೆರೆದುಕೊಳ್ಳಬಲ್ಲರು.

ಸ್ವಾಭಿಮಾನಿಗಳು ಸರಳ ವ್ಯಕ್ತಿಗಳಾಗಿರುತ್ತಾರೆ, ಸಾತ್ವಿಕರಾ ಗಿರುತ್ತಾರೆ, ಸಹೃದಯಿಗಳಾಗಿರುತ್ತಾರೆ. ಆದರ್ಶ ವ್ಯಕ್ತಿಯ ಲ್ಲಿರಬೇಕಾದ ಸಮದೃಷ್ಟಿ, ಪ್ರೇಮದೃಷ್ಟಿ, ವಿಶಾಲದೃಷ್ಟಿ ಎಂಬ ಗುಣ ವಿಶೇಷಗಳು ಇಂಥವರಲ್ಲಿ ಸದಾ ಕಾಣುತ್ತವೆ. ಮುಖಕ್ಕೆ ಮಂದಹಾಸ, ಮಾತಿಗೆ ಮಮತೆ, ಹಣಕ್ಕೆ ಗುಣ, ಸಂಪತ್ತಿಗೆ ಸರಳತೆ, ಅಧಿಕಾರಕ್ಕೆ ಅನುಕಂಪ, ಶಿಕ್ಷಣಕ್ಕೆ ಸಂಸ್ಕಾರ, ವಿದ್ಯೆಗೆ ವಿನಯ, ಬಾಹ್ಯ ಸೌಂದರ್ಯಕ್ಕೆ ಆಂತರಿಕ ಸೌಂದರ್ಯಗಳನ್ನು ಬೆರೆಸಿಕೊಂಡು ಜೀವಿ ಸುವುದು ಇವರ ಸ್ವಭಾವ. ಇನ್ನೊಬ್ಬರ ಬೆಳ್ಳಿ ತಟ್ಟೆಯಲ್ಲಿ ಪಂಚಭಕ್ಷಗಳನ್ನು ಸೇವಿಸುವುದಕ್ಕಿಂತ ಸ್ವಂತದ ಮುತ್ತುಗದೆಲೆಯಲ್ಲಿ ಅನ್ನವನ್ನು ತಿನ್ನುವುದು ರುಚಿಕರ ಎಂಬುದು ಅಂಥವರ ಜೀವನ ಸಿದ್ಧಾಂತ.

“ಸ್ವಾತಂತ್ರ್ಯವು ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ’ ಎಂಬ ಸಿಂಹ ಗರ್ಜನೆಯಷ್ಟೇ ಭಯಂಕರವಾದ ತಿಲಕರ ಸ್ವಾಭಿಮಾನದ ಮಾತುಗಳು ಹೊಸ ಕ್ರಾಂತಿಯನ್ನೇ ಬೆಳಕಿಗೆ ತಂದಿತು. ಮಹಾತ್ಮಾ ಗಾಂಧಿಯವರು “ಭಾರತ ಬಿಟ್ಟು ತೊಲಗಿ’ ಎಂದು ಸ್ವಾಭಿಮಾನದಿಂದ ಗಟ್ಟಿಯಾಗಿ ನುಡಿದಾಗ ಬ್ರಿಟಿಷರ ನಿರ್ಗಮನವಾಯಿತು. “ನನ್ನ ಝಾನ್ಸಿಯನ್ನು ಬಿಟ್ಟುಕೊಡಲಾರೆ’ ಎಂಬ ರಾಣಿ ಲಕ್ಷ್ಮೀಬಾಯಿಯ ಸ್ವರದಿಂದ ಸ್ವಾಭಿಮಾನದ ಪ್ರವಾಹ ಹರಿದು ಬಂತು. ರಾಮಕೃಷ್ಣ ಪರಮ ಹಂಸ, ಸ್ವಾಮಿ ವಿವೇಕಾನಂದ, ಮಹರ್ಷಿ ದಯಾನಂದ, ಸ್ವಾಮೀ ರಾಮತೀರ್ಥರಂತಹವರ ಜೀವನ ಚರಿತ್ರೆ ಸ್ವಾಭಿ ಮಾನದ ಶ್ರೇಷ್ಠತೆಯನ್ನು ಸಾರುತ್ತದೆ.

ಸ್ವಾಭಿಮಾನದ ಪ್ರಬಲತೆಯನ್ನು ನಂಬಿ ಮನುಷ್ಯ ಕಾರ್ಯ ತತ್ಪರನಾದರೆ ಸುಖ ಪ್ರಾಪ್ತಿ ಸುಲಭವೂ, ಸುಖಕರವೂ ಆಗುವುದರಲ್ಲಿ ಸಂಶಯವಿಲ್ಲ. ಯಾರಲ್ಲಿ ಸ್ವಾಭಿಮಾನವು ಇರುವುದಿಲ್ಲವೋ ಅಂಥವರಲ್ಲಿ ಮಾನವತೆಯೂ ಇರುವುದಿಲ್ಲ. ಸ್ವಾಭಿಮಾನವೆಂ ಬುದು ಒಂದು ಮನೋವೃತ್ತಿ. ಇದನ್ನು ನಮ್ಮ ಬಾಳಿನಲ್ಲಿ ಸೇರಿಸಬಹುದಾದ ವಿಶಿಷ್ಟ ಚೈತನ್ಯ ಎಂದು ಪರಿಭಾವಿಸಿದರೆ ಜೀವನಶೈಲಿ ಸುಂದರವಾಗಿ, ಚೆಲುವಾಗಿ ಕಂಗೊಳಿಸುತ್ತದೆ. ಸ್ವಾಭಿಮಾನವು ಎಲ್ಲರಿಗೆ ಮೈಬಾಗಿಸದೆ, ದೀನತೆಯಿಂದ ಇನ್ನೊಬ್ಬರನ್ನು ಬೇಡದೆ, ಭುಜವನ್ನು ನೇರವಾಗಿ ಇಟ್ಟುಕೊಂಡು ಆತ್ಮವಿಶ್ವಾಸದಿಂದ ಬದುಕಲು ಸಕಲ ರೀತಿಯ ಪ್ರೋತ್ಸಾಹವನ್ನು, ಉತ್ಸಾಹವನ್ನು ಕರುಣಿಸುತ್ತದೆ. ಆದ್ದರಿಂದಲೇ ಜಗದ ಜ್ಞಾನಿಗಳು ಸ್ವಾಭಿಮಾನವನ್ನು ಅಮೃತ ಬಳ್ಳಿಗೆ ಹೋಲಿಸಿ¨ªಾರೆ. ಅತೀ ಸಾಧಾರಣವಾದ ಜೀವನದ ಆದಿಯನ್ನು ಶ್ಲಾಘನೀಯ ಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಸ್ವಾಭಿಮಾನದ ಕೊಡುಗೆ ಅಪಾರ, ಅಗಾಧ.

– ಶಿವಾನಂದ ಪಂಡಿತ, ಗೋವಾ

ಟಾಪ್ ನ್ಯೂಸ್

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.