ಗಾಲಿ ಮೇಲೆ ಸಂಕಷ್ಟ: ಉತ್ಪಾದನೆ ಝೀರೋಗೆ ಬಂದು ಬಿಟ್ಟಿದೆ


Team Udayavani, Apr 20, 2020, 5:04 PM IST

ಗಾಲಿ ಮೇಲೆ ಸಂಕಷ್ಟ: ಉತ್ಪಾದನೆ ಝೀರೋಗೆ ಬಂದು ಬಿಟ್ಟಿದೆ

ಸಾಂದರ್ಭಿಕ ಚಿತ್ರ

? 120 ಬಿಲಿಯನ್‌ ಡಾಲರ್‌- ಭಾರತದ ಆಟೋ ಉದ್ಯಮ
? 1,00000 – ಲಾಕ್‌ ಡೌನ್‌ನಿಂದಾಗಿ ಉದ್ಯೋಗಗಳಿಗೆ ಆಗುವ ನಷ್ಟ
? 4.6 ಬಿಲಿಯನ್‌ ಡಾಲರ್‌- ಭಾರತ ಚೀನಾದಿಂದ ಆಮದು ಮಾಡಿಕೊಳ್ಳುವ ಕಾರು ಉಪಕರಣಗಳು

ಲಾಕ್‌ಡೌನ್‌ ತಂದಿರುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಕಳೆದೊಂದು ವರ್ಷದಿಂದ ಒಂದಿಲ್ಲೊಂದು ಕಾರಣದಿಂದ ಕಷ್ಟಗಳ ಸರಪಳಿಗೆ ಸಿಲುಕಿಕೊಂಡಿದ್ದ ದೇಶದ ಆಟೋ ಉದ್ಯಮಕ್ಕೆ, ಈಗ ಕೋವಿಡ್ ವೈರಸ್‌ ಮಾರಕವಾಗಿ ಪರಿಣಮಿಸಿದೆ. ಫೆಬ್ರವರಿ ಆರಂಭದಿಂದಲೇ ಆಟೋ ಉದ್ಯಮದ ಮೇಲೆ ಈ ಕೊರೊನಾ ಕರಿನೆರಳು ಬಿದ್ದಿದೆ. ಚೀನಾದಲ್ಲಿ ಈ ಮಾರಕ ರೋಗ ಹರಡಲು ಶುರುವಾಗಿದ್ದು, ಜನವರಿ ಮಧ್ಯಭಾಗದಲ್ಲಿ. ಇದಾದ ಕೆಲವೇ ದಿನಗಳಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿತು.
ಹಾಗೆಯೇ, ಚೀನಾದ ವುಹಾನ್‌ ಪ್ರಾಂತ್ಯವನ್ನೇ ಸಂಪೂರ್ಣವಾಗಿ ಕ್ವಾರಂಟೈನ್‌ ಮಾಡಲಾಯಿತು. ಇದಾದ ಬಳಿಕ, ಜಗತ್ತಿನಾದ್ಯಂತ ಒಂದು ರೀತಿಯ ಆತಂಕ ಶುರುವಾಗಿಬಿಟ್ಟಿತು. ಫೆಬ್ರವರಿ ಆರಂಭದಲ್ಲಿ ದೆಹಲಿಯಲ್ಲಿ ಆಟೋ ಎಕ್ಸ್ ಪೋ ನಡೆಯಿತಲ್ಲ; ಇಡೀ ಜಗತ್ತೇ, ಎಲೆಕ್ಟ್ರಿಕ್‌ ವಾಹನಗಳ ಕಡೆ ಹೊರಳಲು ಸಜ್ಜಾಗಿದ್ದ ಸಂದರ್ಭ ಅದಾಗಿತ್ತು. ಲಿಥಿಯಂ ಬ್ಯಾಟರಿ ಉದ್ಯಮದಲ್ಲಿ ಹೊಂದಿರುವ ಏಕಸ್ವಾಮ್ಯ, ಆಟೋಮೊಬೈಲ್‌ ಉಪಕರಣಗಳ ಮೇಲೆ ಸಾಧಿಸಿರುವ ಹಿಡಿತ ಹಾಗೂ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಯಲ್ಲಿ ಹೊಂದಿರುವ ಪಾರಮ್ಯದ ಕಾರಣಕ್ಕೆ,
ಆ ಎಕ್ಸ್ ಪೋದಲ್ಲಿ ಚೀನಾದ ಉಪಸ್ಥಿತಿ ಕಡ್ಡಾಯ ಎಂಬಂತೆ ಇರಬೇಕಾಗಿತ್ತು. ಆ ಸಮಯದಲ್ಲಿ ಭಾರತದಲ್ಲಿ ಯಾವುದೇ ಕೇಸ್‌ ಇರದಿದ್ದರೂ, ಕೊರೊನಾ ಕಾರಣದಿಂದ ಚೀನಾದ
ಕಂಪನಿಗಳು ಹೆಚ್ಚಾಗಿ ಬರಲೇ ಇಲ್ಲ. ಇದರಿಂದಾಗಿ ಭಾರತಲ್ಲಿನ ಆಟೋಮೊಬೈಲ್‌ ಉದ್ಯಮಕ್ಕೆ ಸಾಕಷ್ಟು ಹೊಡೆತ ಬಿತ್ತು ಎಂದು ಆ ಕ್ಷೇತ್ರದ ತಜ್ಞರು ಹೇಳುತ್ತಾರೆ.
ಲಾಕ್‌ಡೌನ್‌ ಸಂಕಷ್ಟ ಇದಾದ ಮೇಲೆ ಶುರುವಾದದ್ದು ಲಾಕ್‌ ಡೌನ್‌. ಮಾ.25ರಂದು ಇಡೀ ದೇಶ ಲಾಕ್‌ಡೌನ್‌ನೊಳಗೆ ಬಂಧಿಯಾಯಿತು. ಇದರಿಂದಾಗಿ ಎಲ್ಲಾ ಆಟೋ
ಕಾರ್ಖಾನೆಗಳು, ಡೀಲರ್‌ ಶಿಪ್‌ಗಳು ಮುಚ್ಚಿದವು.

ಆಟೋಮೊಬೈಲ್‌ ಕ್ಷೇತ್ರದ ಬಹುದೊಡ್ಡ ಬದಲಾವಣೆಗೆ ಕಾಲಿಡುವ ಹೊತ್ತಾಗಿದ್ದ ಏ.1 ಲಾಕ್‌ ಡೌನ್‌ನ ಸುಳಿಗೆ ಸಿಲುಕಿತು. ಅಂದರೆ, ಏ.1ರಿಂದ ಇಡೀ ದೇಶ ಬಿಎಸ್‌4ನಿಂದ ಬಿಎಸ್‌6ಗೆ ನೆಗೆಯಬೇಕಾಗಿತ್ತು. ಆದರೆ, ಎಲ್ಲಾ ಡೀಲರ್‌ಶಿಪ್‌ಗ್ಳು ಮುಚ್ಚಿದ್ದರಿಂದ, ಮಾರ್ಚ್‌ ಕಡೇ ವಾರದಲ್ಲಿ ಮಾರಾಟವಾಗಬೇಕಾಗಿದ್ದ ಬಿಎಸ್‌4 ಕಾರು, ಬೈಕುಗಳು ಹಾಗೆಯೇ ಉಳಿದವು. ಇದು ಆಟೋ ಮೊಬೈಲ್‌ ಕ್ಷೇತ್ರಕ್ಕೆ ದೊಡ್ಡ ಹೊಡೆತ. ಲಾಕ್‌ಡೌನ್‌ ಮುಗಿದ ಮೇಲೆ ಸದ್ಯದ ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ಏನೂ ಮಾಡುವಂತಿಲ್ಲ. ಈಗಾಗಲೇ ಆಟೋಮೊಬೈಲ್‌ ಕಾರ್ಖಾನೆಗಳು
ಮನೆಯಿಂದಲೇ ಕೆಲಸ ಮಾಡುವಂತೆ ಅಥವಾ ಮನೆಯಲ್ಲೇ ಇರುವಂತೆ ಸೂಚಿಸಿವೆ. ಎಷ್ಟೋ ಉದ್ಯಮಗಳು ಕಾರ್ಮಿಕರಿಗೆ ವೇತನವನ್ನೂ ನೀಡಲಾಗುತ್ತಿಲ್ಲ. ಇದಕ್ಕೆ ಕಾರಣ, ಉತ್ಪಾದನೆ ಝೀರೋಗೆ ಬಂದು ಬಿಟ್ಟಿದೆ. ಒಂದು ಲೆಕ್ಕಾಚಾರದ ಪ್ರಕಾರ, ಎಲ್ಲಾ ಕಾರ್ಖಾನೆಗಳು ಮುಚ್ಚಿರುವುದರಿಂದ, ದಿನಕ್ಕೆ 2,300 ಕೋಟಿ ರೂ. ನಷ್ಟವಾಗುತ್ತಿದೆ. ಈ ಅಪಾರ ನಷ್ಟದ ಕಾರಣಕ್ಕೇ ಸುಮಾರು 1 ಲಕ್ಷ ಉದ್ಯೋಗಗಳಿಗೆ ಕುತ್ತು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸರ್ಕಾರ ಏನಾದರೂ ಪ್ಯಾಕೇಜ್‌ ಘೋಷಣೆ ಮಾಡಲಿದೆಯೇ ಎಂದು ಇಡೀ ಇಂಡಸ್ಟ್ರಿ ಎದುರು ನೋಡುತ್ತಿದೆ.

ವಾಹನ ಖರೀದಿ
ಫೆಡರೇಶನ್‌ ಆಫ್ ಆಟೋಮೊಬೈಲ್‌ ಡೀಲರ್ಸ್‌ ಅಸೋಸಿಯೇಶನ್‌ ಪ್ರಕಾರ, ದೇಶದಲ್ಲಿ 26 ಸಾವಿರ ಡೀಲರ್‌ ಶಿಪ್‌ಗಳಿವೆ. ಇವರ ಬಳಿ 6,340 ಕೋಟಿ ರೂ. ಮೌಲ್ಯದ ಬಿಎಸ್‌4 ಮಾದರಿಯ ವಾಹನಗಳಿವೆ. ಇದರಲ್ಲಿ 3,850 ಕೋಟಿ ಮೌಲ್ಯದ ಏಳು ಲಕ್ಷ ದ್ವಿಚಕ್ರ ವಾಹನಗಳು, 1,050 ಕೋಟಿ ಮೌಲ್ಯದ 15 ಸಾವಿರ ಪ್ರಯಾಣಿಕರ ವಾಹನಗಳು, 1,440 ಕೋಟಿ ಮೌಲ್ಯದ 12 ಸಾವಿರ ನಿಧಾನಗತಿಯ ಟ್ರಕ್‌ಗಳು ಬಾಕಿ ಉಳಿದಿವೆ. ಸುಪ್ರೀಂ ಕೋರ್ಟ್‌ ಲಾಕ್‌ ಡೌನ್‌ ಮುಗಿದ ಮೇಲೆ ದೆಹಲಿ ಎನ್‌ಸಿಆರ್‌ ಹೊರತುಪಡಿಸಿ 10 ದಿನಗಳ ಕಾಲ ಈ ವಾಹನಗಳ ಮಾರಾಟಕ್ಕೆ ಆಸ್ಪದ ನೀಡಿದ್ದರೂ ಲಾಕ್‌ಡೌನ್‌ ಮುಗಿದ ತಕ್ಷಣ ಜನ ವಾಹನ ಖರೀದಿಗೆ ಬರುತ್ತಾರಾ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ಆಟೋಮೊಬೈಲ್‌ ಕ್ಷೇತ್ರದ ಎಲ್ಲಾ ಕಾರ್ಖಾನೆಗಳು ಮುಚ್ಚಿರುವುದರಿಂದ, ದಿನಕ್ಕೆ 2,300 ಕೋಟಿ ರೂ. ನಷ್ಟವಾಗುತ್ತಿದೆ. ಈ ಕಾರಣದಿಂದಲೇ ಮುಂದೆ ಸುಮಾರು 1 ಲಕ್ಷ ಉದ್ಯೋಗಗಳಿಗೆ ಕುತ್ತು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ…

ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.