ದೇಶದಲ್ಲಿ ಸರಕು ವಿಮಾನ ಉತ್ಪಾದನೆ; ಗುಜರಾತ್‌ನ ವಡೋದರಾದಲ್ಲಿ ಹೊಸ ಘಟಕ ಸ್ಥಾಪನೆ
ಐರೋಪ್ಯ ಒಕ್ಕೂಟದ ಹೊರಭಾಗದಲ್ಲಿ ಇದೇ ಮೊದಲ ಬಾರಿಗೆ ಸಿ-295 ವಿಮಾನಗಳನ್ನು ಉತ್ಪಾದಿಸಲಾಗುತ್ತಿದೆ.
Team Udayavani, Oct 28, 2022, 12:38 PM IST
ನವದೆಹಲಿ: ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ (ಟಿಎಎಸ್‌ಎಲ್) ಮತ್ತು ಏರ್‌ಬಸ್ ನಡುವೆ ಸಿ-295 ಮಾದರಿಯ ವಿಮಾನ ನಿರ್ಮಾಣ ಮಾಡುವ ಬಗ್ಗೆ ಒಪ್ಪಂದ ಉಂಟಾಗಿದೆ. ಒಟ್ಟು 21,935 ಕೋಟಿ ರೂ. ಮೊತ್ತದ ಡೀಲ್ ಇದಾಗಿದೆ.
ಗುಜರಾತ್‌ನ ವಡೋದರಾದಲ್ಲಿ ಅದನ್ನು ಉತ್ಪಾದಿಸಲಾಗುತ್ತದೆ. ಭಾನುವಾರ (ಅ.30) ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಭಾರತೀಯ ವಾಯುಪಡೆ (ಐಎಎಫ್)ಗಾಗಿ ಈ ವಿಮಾನಗಳು ಲಭ್ಯವಾಗಲಿವೆ.
ಈ ಬಗ್ಗೆ ನವದೆಹಲಿಯಲ್ಲಿ ಮಾಹಿತಿ ನೀಡಿದ ರಕ್ಷಣಾ ಖಾತೆ ಕಾರ್ಯದರ್ಶಿ ಡಾ.ಅಜಯ ಕುಮಾರ್ ಭಾರತೀಯ ವಾಯುಪಡೆಯನ್ನು ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಗುಜರಾತ್‌ನ ವಡೋದರಾದಲ್ಲಿ ಸ್ಥಾಪಿಸಲಾಗುವ ಘಟಕದಲ್ಲಿ ಸರಕು ಸಾಗಣೆ ವಿಮಾನವನ್ನು ಉತ್ಪಾದಿಸಲಾಗುತ್ತದೆ. ದೇಶೀಯ ವಿಮಾನ ಉತ್ಪಾದನಾ ಕ್ಷೇತ್ರದಲ್ಲಿ ಇದೊಂದು ಪ್ರಮುಖ ಯೋಜನೆಯಾಗಲಿದೆ. ಜತೆಗೆ ಈ ಘಟಕದಿಂದ ವಿದೇಶಗಳಿಗೆ ರಫ್ತು ಮಾಡುವ ನಿಟ್ಟಿನಲ್ಲಿಯೂ ವಿಮಾನಗಳ ಉತ್ಪಾದನೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಏರ್‌ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಜತೆಗೆ ಕೇಂದ್ರ ಸರ್ಕಾರ ಸಿ-295 ಮಾದರಿಯ ಸರಕು ಸಾಗಣೆ ವಿಮಾನ ಖರೀದಿ ಮಾಡುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಉದ್ದೇಶಿತ ವಿಮಾನಗಳು ಸದ್ಯ ಐಎಎಫ್ ಹೊಂದಿರುವ ಆ್ಯವ್ರೋ-748 ಸರಕು ಸಾಗಣೆ ವಿಮಾನಗಳ ಸ್ಥಾನದಲ್ಲಿ ಹೊಸತು ಬರಲಿವೆ.
ಇದು ಪ್ರಥಮ: ಮಿಲಿಟರಿ ಉದ್ದೇಶಕ್ಕಾಗಿ ದೇಶದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯಿಂದ ವಿಮಾನ ತಯಾರಿಸಲಾಗುತ್ತದೆ. ಭಾರತದಲ್ಲಿ ಟಾಟಾ ಸಮೂಹ ವಿಮಾನ ಉತ್ಪಾದನೆ ಮಾಡಲಿದೆ. ಒಪ್ಪಂದದ ಅನ್ವಯ ಏರ್‌ಬಸ್ ಸ್ಪೇನ್‌ನ ಸೆವೆಲ್ಲೆ ಘಟಕದಿಂದ 16 ಯುದ್ಧ ವಿಮಾನಗಳನ್ನು ನಾಲ್ಕು ವರ್ಷಗಳ ಅವಧಿಯಲ್ಲಿ ನೀಡಲಿದೆ. ಅಂದರೆ, 2023 ಸೆಪ್ಟೆಂಬರ್ ಮತ್ತು 2025ರ ಆಗಸ್ಟ್ ಒಳಗಾಗಿ ಈ ವಿಮಾನಗಳು ಲಭ್ಯವಾಗಲಿದೆ.ಉಳಿದ 40 ಯುದ್ಧ ವಿಮಾನಗಳನ್ನು ಗುಜರಾತ್‌ನ ವಡೋದರಾದಲ್ಲಿ ಸ್ಥಾಪಿಸಲಾಗುವ ಹೊಸ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಈ ವಿಮಾನವನ್ನು ನಾಗರಿಕ ಉದ್ದೇಶಗಳಿಗಾಗಿ ಕೂಡ ಬಳಕೆ ಮಾಡಲು ಅವಕಾಶ ಇದೆ. ಐರೋಪ್ಯ ಒಕ್ಕೂಟದ ಹೊರಭಾಗದಲ್ಲಿ ಇದೇ ಮೊದಲ ಬಾರಿಗೆ ಸಿ-295 ವಿಮಾನಗಳನ್ನು ಉತ್ಪಾದಿಸಲಾಗುತ್ತಿದೆ.
ವಡೋದರಾ ಘಟಕದಲ್ಲಿ ಉತ್ಪಾದನೆಯಾಗುವ ವಿಮಾನಗಳು ಸ್ಪೇನ್‌ನ ಸೆವೆಲ್ಲೆ ಘಟಕದಲ್ಲಿ ಉತ್ಪಾದನೆಯಾಗುವ ವಿಮಾನಗಳಷ್ಟೇ ಗುಣಮಟ್ಟವನ್ನು ಹೊಂದಿರಲಿದೆ ಎಂದು ರಕ್ಷಣಾ ಕಾರ್ಯದರ್ಶಿ ಅಜಯ ಕುಮಾರ್ ಹೇಳಿದ್ದಾರೆ.
ದೇಶೀಯ ಉತ್ಪನ್ನಗಳ ಬಳಕೆ
ವಡೋದರಾ ಘಟಕದಲ್ಲಿ ಉತ್ಪಾದಿಸಲಾಗುವ ಹೊಸ ಮಾದರಿಯ ವಿಮಾನಗಳಿಗೆ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಉತ್ಪಾದಿಸಿದ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನೇ ಬಳಕೆ ಮಾಡಲಾಗುತ್ತದೆ. ಒಟ್ಟು 56 ವಿಮಾನಗಳಿಗೆ ಅವುಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಐಎಎಫ್ ಉಪ ಮುಖ್ಯಸ್ಥ ಏರ್ ಮಾರ್ಷಲ್ ಸಂದೀಪ್ ಸಿಂಗ್ ಗೇಳಿದ್ದಾರೆ. ಐಎಎಫ್ ಗೆ ಬೇಕಾಗಿರುವ ವಿಮಾನಗಳ ಉತ್ಪಾದನೆ ಪೂರ್ತಿಗೊಂಡ ಬಳಿಕ ಕಂಪನಿಗೆ ಉಳಿದ ವಿಮಾನಗಳನ್ನು ರಫ್ತು ಮಾಡಲೂ ಅವಕಾಶ ನೀಡಲಾಗುತ್ತದೆ ಎಂದರು.
ವಿಶೇಷತೆಗಳೇನು?
* ಮೊದಲ ಬಾರಿಗೆ ದೇಶದಲ್ಲಿ ರಕ್ಷಣಾ ಉದ್ದೇಶಕ್ಕಾಗಿ ಖಾಸಗಿ ಕಂಪನಿಯಿಂದ ವಿಮಾನ ಉತ್ಪಾದನೆ
* ಐರೋಪ್ಯ ಒಕ್ಕೂಟದಿಂದ ಮೊದಲ ಬಾರಿಗೆ ಸಿ-295 ಉತ್ಪಾದನೆ ಮಾಡಲು ಸಿದ್ಧತೆ
* 16-ನಾಲ್ಕು ವರ್ಷಗಳಲ್ಲಿ ಸಿಗುವ ವಿಮಾನಗಳು
* 40-ವಡೋದರಾದಲ್ಲಿ ಉತ್ಪಾದನೆ ಯಾಗಲಿರುವ ವಿಮಾನಗಳು
* 21,935 ಕೋಟಿ ರೂ.- ಯೋಜನೆಯ ಒಟ್ಟು ಮೌಲ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.