“ಮಕ್ಕಳಿಗಾಗಿ ಕಾರ್ಯಕ್ರಮ ರೂಪಿಸಿ ಕಳುಹಿಸಿ’
Team Udayavani, Apr 8, 2020, 6:30 AM IST
ಬೆಂಗಳೂರು: ಕೋವಿಡ್ 19 ವೈರಸ್ ಭೀತಿ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುವುದಕ್ಕಾಗಿ ಶಿಕ್ಷಣ ಇಲಾಖೆಯು ಯುಟ್ಯೂಬ್ ಚಾನೆಲ್ ಆರಂಭಿ ಸುತ್ತಿದೆ. ಶಿಕ್ಷಕರು, ಸಾಫ್ಟ್‌ವೇರ್ ತಂತ್ರಜ್ಞರು, ನವೋದ್ಯಮಿಗಳು ಸಹಿತ ಸಾರ್ವಜನಿಕರು ಈ ಅಭಿಯಾನಕ್ಕೆ ಕೈಜೋಡಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮನವಿ ಮಾಡಿದ್ದಾರೆ.
ಯುಟ್ಯೂಬ್ ಚಾನೆಲ್ ಮೂಲಕ ಪ್ರತಿ ದಿನ ಬೆಳಗ್ಗೆ ಒಂದು ಗಂಟೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಬಿತ್ತರಿಸುವ ಉದ್ದೇಶ ಹೊಂದಲಾಗಿದೆ. ಈ ಕಾರ್ಯಕ್ರಮಗಳು ಅತ್ಯಂತ ವೈಶಿಷ್ಟ್ಯಪೂರ್ಣವಾಗಿರಬೇಕು ಮಕ್ಕಳು ಮಾತ್ರವಲ್ಲ ಪೋಷಕರನ್ನು ಪ್ರೇರೇಪಿಸಬೇಕು. ಅಂದಾಜು 10 ರಿಂದ 15 ನಿಮಿಷಗಳ 4ರಿಂದ 5 ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಚಿಂತನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವೀಡಿಯೋ ಮಾಡುವವರು ಏನು ಮಾಡಬೇಕು?
ಮಕ್ಕಳಿಗೆ ಸೂಕ್ತ ಮತ್ತು ಸಮಂಜಸವೆನಿಸುವ ಯಾವುದೇ ವೀಡಿಯೋವನ್ನು ಸಿದ್ಧಪಡಿಸಬಹುದು. ವೀಡಿಯೋ 10ರಿಂದ 15 ನಿಮಿಷಗಳ ಗರಿಷ್ಠ ಅವಧಿಯುಳ್ಳದ್ದಾಗಿರಬೇಕು. ವಿವರಿಸಲಾಗುವ ವಿಷಯಗಳು ಹೊಸದಾಗಿದ್ದು, ಮಕ್ಕಳಲ್ಲಿ ಆಸಕ್ತಿ, ಕುತೂಹಲ ಹುಟ್ಟಿಸುವಂತಿರಬೇಕು ಮತ್ತವರನ್ನು ತೊಡಗಿಸುವಂಥ ಕೆಲವು ಚಟುವಟಿಕೆಗಳನ್ನೂ ಸಹ ಒಳಗೊಂಡಿರಬೇಕು. ಕಥಾವಾಚನ, ಪುಸ್ತಕ ಪರಿಚಯ ಓದು, ಪ್ರಯೋಗಗಳು/ಚಟುವಟಿಕೆಗಳು/ಮ್ಯಾಜಿಕ್ ಇತ್ಯಾದಿಗಳ ವಿವರಣೆಯುಕ್ತ ಪ್ರದರ್ಶನ, ಗಾದೆಗಳು, ಒಗಟುಗಳನ್ನು ಬಿಡಿಸುವ ವೀಡಿಯೋ ಮಾಡಬಹುದು. ಕಾರ್ಯಕ್ರಮವನ್ನು ಮುಂದಿನ 50 ದಿನಗಳವರೆಗೆ ಪ್ರಸಾರ ಮಾಡಲಾಗುತ್ತದೆ. ವೀಡಿಯೋ ಸಾಮಗ್ರಿಯನ್ನು ಇ-ಮೇಲ್ [email protected] ಅಥವಾ ಗೂಗಲ್ ಡ್ರೆ„ವ್, ವಾಟ್ಸ್ ಆ್ಯಪ್, ಟೆಲಿಗ್ರಾಮ್ ಮೂಲಕ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ- 080-22483040 ಅಥವಾ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕ ಡಾ| ಎಂ.ಟಿ. ರೇಜು ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.