ಆಸ್ತಿ ತೆರಿಗೆ ವಂಚನೆ; ಪಾಲಿಕೆಯಿಂದ ಜರಡಿ
ನಮ್ಮ ನಗರ ಸ್ವಚ್ಛ ನಗರ ಅಭಿಯಾನದ ಎಫೆಕ್ಟ್ ; ಖಾಲಿ ಸೈಟ್‌ಗಳ ವಸ್ತುಸ್ಥಿತಿ ಅರಿಯಲು ಸಮೀಕ್ಷೆ
Team Udayavani, Jun 3, 2022, 12:40 PM IST
ಹುಬ್ಬಳ್ಳಿ: “ನಮ್ಮ ನಗರ ಸ್ವಚ್ಛ ನಗರ’ ಅಭಿಯಾನವು ಸ್ವಚ್ಛತೆ, ಜಾಗೃತಿ ಹಾಗೂ ಸಾರ್ವಜನಿಕರ ಸಹಭಾಗಿತ್ವಕ್ಕೆ ಪ್ರೇರಣೆಯಾದರೆ ಇನ್ನೊಂದೆಡೆ ಪಾಲಿಕೆ ಆಸ್ತಿ ತೆರಿಗೆ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪಾಲಿಕೆ ದಾಖಲೆಯಲ್ಲಿ ಖಾಲಿ ನಿವೇಶನವಿದ್ದರೆ ಆ ಸ್ಥಳದಲ್ಲಿ ಕಟ್ಟಡ ನಿರ್ಮಿಸಿರುವುದು ಪತ್ತೆಯಾಗುತ್ತಿದ್ದು, ಪಾಲಿಕೆ ಮತ್ತಷ್ಟು ಆಳಕ್ಕೆ ಇಳಿದು ಪ್ರತಿಯೊಂದು ಖಾಲಿ ನಿವೇಶನದ ವಸ್ತುಸ್ಥಿತಿ ಅರಿಯಲು ಸಮೀಕ್ಷೆಗೆ ಮುಂದಾಗಿದೆ.
ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕಲು ಮಾಡಿದ ಅಭಿಯಾನ ಬಹುತೇಕ ಯಶ ಕಂಡಿದೆ. ಹಲವು ಕ್ರಮಗಳ ಮೂಲಕ ಬ್ಲಾಕ್ ಸ್ಪಾಟ್ ಗಳು ಇಂದು ಉತ್ತಮ ಸ್ಥಳವಾಗಿ ಮಾರ್ಪಟ್ಟಿವೆ. ಆದರೆ ಇದೀಗ ಖಾಲಿ ನಿವೇಶನಗಳು ತಿಪ್ಪೆಗಳಾಗಿ ಮಾರ್ಪಡುತ್ತಿವೆ. ಖಾಲಿ ನಿವೇಶನಗಳು ಸ್ವಚ್ಛಗೊಂಡರೆ ಸ್ವಚ್ಛ ನಗರ ಪರಿಕಲ್ಪನೆ ಯಶಸ್ವಿಯಾಗಲು ಸಾಧ್ಯ ಎಂದು ಪಾಲಿಕೆ ದಿಟ್ಟ ಕ್ರಮಕ್ಕೆ ಮುಂದಾಗಿದೆ. ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡುತ್ತಿದ್ದು, ಅವರು ಸ್ವಚ್ಛಗೊಳಿಸದಿದ್ದರೆ ಪಾಲಿಕೆಯಿಂದ ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ. ಈ ಸ್ವಚ್ಛತಾ ಅಭಿಯಾನ ಆಸ್ತಿ ತೆರಿಗೆ ವಂಚಿತರ ಪತ್ತೆಗೆ ಸಹಕಾರಿಯಾಗಿದೆ.
ಬ್ಲಾಕ್ ಸ್ಪಾಟ್‌ಗಳ ನಿರ್ಮೂಲನೆ: ವರ್ಷದ ಹಿಂದೆ ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 825 ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿತ್ತು. ಇಂತಹ ಸ್ಥಳಗಳಲ್ಲೂ ಪಾಲಿಕೆಯಿಂದ ಸ್ವಚ್ಛಗೊಳಿಸಿ ರಂಗೋಲಿ ಹಾಕುವುದು, ಜಾಗೃತಿ ಮೂಡಿಸುವುದು, ಕೆಲವೆಡೆ ಪೌರ ಕಾರ್ಮಿಕರನ್ನು ನೇಮಿಸಿ ಕಾಯುವುದು, ದಂಡ ಪ್ರಯೋಗ, ಕಸ ಹಾಕಿದವರಿಂದಲೇ ಸ್ವಚ್ಛತೆ ಹೀಗೆ ಹಲವು ಕಾರ್ಯಗಳ ಮೂಲಕ ಇದೀಗ 78 ಬ್ಲಾಕ್ ಸ್ಪಾಟ್‌ಗಳು ಮಾತ್ರ ಉಳಿದುಕೊಂಡಿವೆ. ಇವುಗಳನ್ನೆಲ್ಲಾ ಸಂಪೂರ್ಣವಾಗಿ ತೆಗೆದು ಹಾಕಿ ಪ್ರತಿ ಮನೆಯಿಂದಲೂ ಆಟೋ ಟಿಪ್ಪರ್‌ಗಳಿಗೆ ಕಸ ನೀಡುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.
ಮಾಲೀಕರಿಗೆ ನೋಟಿಸ್: ಬ್ಲಾಕ್ ಸ್ಪಾಟ್‌ಗಳ ನಿರ್ಮೂಲನೆಯ ನಂತರ ಖಾಲಿ ನಿವೇಶನಗಳು ಕಸದ ತೊಟ್ಟಿಯಾಗುತ್ತಿವೆ. ದಾಖಲೆಗಳ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ 90 ಸಾವಿರ ಖಾಲಿ ನಿವೇಶಗಳಿವೆ. ಆಯಾ ವಲಯ ಕಚೇರಿಗಳ ಮೂಲಕ ನಿವೇಶನಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಸ್ವಚ್ಛತೆಗೆ ಗಡುವು ನೀಡಲಾಗುತ್ತಿದೆ. ನೋಟಿಸ್ ಪಡೆದವರ ಪೈಕಿ ಶೇ.30 ಮಾಲೀಕರು ತಾವೇ ಸ್ವತಃ ಸ್ವಚ್ಛಗೊಳಿಸಿಕೊಂಡಿದ್ದಾರೆ. ಸದ್ಯಕ್ಕೆ ಶೇ.25 ನಿವೇಶನಗಳನ್ನು ಪಾಲಿಕೆಯಿಂದ ಸ್ವಚ್ಛಗೊಳಿಸಲಾಗಿದೆ. ಇದಕ್ಕೆ ತಗುಲಿದ ವೆಚ್ಚದ ಎರಡು ಪಟ್ಟು ಹಣವನ್ನು ನಿವೇಶನದ ಪಿಐಡಿ ಸಂಖ್ಯೆಗೆ ಜೋಡಿಸಲಾಗುತ್ತಿದೆ. ಮುಂದಿನ ವರ್ಷದ ಆಸ್ತಿ ಕರ ಪಾವತಿ ಸಂದರ್ಭದಲ್ಲಿ ಈ ದಂಡವನ್ನು ಕೂಡ ಪಾವತಿ ಮಾಡಬೇಕು. 5000ರೂ.ದಿಂದ 50,000 ರೂ. ವರೆಗೂ ದಂಡ ಹಾಕಲಾಗುತ್ತಿದೆ. ಸ್ವಚ್ಛತೆ ಜೊತೆಗೆ ಪಾಲಿಕೆಗೂ ಇದೊಂದು ಆದಾಯವಾಗುತ್ತಿದೆ. ಕಟ್ಟಡ ನಿರ್ಮಿಸದೆ ಹಾಗೆ ಉಳಿಸಿಕೊಂಡಿರುವ ಸರಕಾರಿ ಇಲಾಖೆ, ಸಂಘ-ಸಂಸ್ಥೆಗಳಿಗೂ ನೋಟಿಸ್ ನೀಡಲಾಗುತ್ತಿದೆ.
ಮಹಾನಗರ ಸ್ವಚ್ಛತೆಗೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ. ಬ್ಲಾಕ್‌ಸ್ಪಾಟ್‌ಗಳ ನಿರ್ಮೂಲನೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇದೀಗ ಖಾಲಿ ನಿವೇಶನ ಸ್ವಚ್ಛತೆಗೆ ನೋಟಿಸ್ ನೀಡಲಾಗುತ್ತಿದ್ದು, ಪ್ರತಿ ವಾರ್ಡ್‌ಗೆ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಪಾಲಿಕೆ ದಾಖಲೆಯಲ್ಲಿ ಖಾಲಿ ನಿವೇಶನವಿದ್ದು, ಕಟ್ಟಡ ಕಟ್ಟಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇವುಗಳನ್ನು ಬಗ್ಗೆಯೂ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಇವುಗಳನ್ನು ಪತ್ತೆ ಹಚ್ಚಿ ತೆರಿಗೆ ವ್ಯಾಪ್ತಿಗೆ ತರಲಾಗುವುದು. -ಡಾ| ಬಿ.ಗೋಪಾಲಕೃಷ್ಣ, ಆಯುಕ್ತ, ಮಹಾನಗರ ಪಾಲಿಕ
ವಾರ್ಡ್‌ಗೊಬ್ಬ ನೋಡಲ್ ಅಧಿಕಾರಿ:
ಹಿಂದೆಯೂ ಖಾಲಿ ನಿವೇಶನ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಆದರೆ ಈ ಬಾರಿಯಷ್ಟು ಕಟ್ಟುನಿಟ್ಟಾಗಿ ಆಗುತ್ತಿರಲಿಲ್ಲ. ಇದೀಗ ಪ್ರತಿ ವಾರ್ಡ್‌ಗೂ ಎ ಹಾಗೂ ಬಿ ದರ್ಜೆ ಪಾಲಿಕೆ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಪ್ರತಿನಿತ್ಯ ನೋಟಿಸ್ ಜಾರಿ, ನಿವೇಶನ ಸ್ವಚ್ಛತೆ ಅಥವಾ ಪಾಲಿಕೆಯಿಂದ ಸ್ವಚ್ಛತೆ ಕಾರ್ಯ ನಿರ್ವಹಿಸಬೇಕು. ಇದರೊಂದಿಗೆ ಆಸ್ತಿ ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚುವ ಕೆಲಸ ಆಗುತ್ತಿದೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ತೆರಿಗೆ ವ್ಯಾಪ್ತಿಗೆ ತಂದರೆ ಪಾಲಿಕೆ ತೆರಿಗೆ ಆದಾಯವೂ ವೃದ್ಧಿಸಲಿದೆ.
ನಿವೇಶನಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಸೂಚನೆ: ಪಾಲಿಕೆ ದಾಖಲೆಯಲ್ಲಿ ಮಾತ್ರ ಖಾಲಿ ನಿವೇಶನ. ಆದರೆ ಕಟ್ಟಡ, ವಾಣಿಜ್ಯ ಕಟ್ಟಡ, ಶೆಡ್ ಸೇರಿದಂತೆ ಇತರೆ ಕಾರ್ಯಗಳಿಗೆ ಬಳಕೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಪಾಲಿಕೆ ಆಯುಕ್ತ ಡಾ| ಬಿ. ಗೋಪಾಲಕೃಷ್ಣ ಅವರು ಎಲ್ಲಾ ವಾರ್ಡ್‌ಗಳ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿ, ಪಾಲಿಕೆ ದಾಖಲೆ ಪ್ರಕಾರ ಎಲ್ಲಾ ನಿವೇಶನಗಳಿಗೆ ಭೇಟಿ ಕೊಡುವುದು, ಅಲ್ಲಿನ ಚಿತ್ರಣದ ಕುರಿತು ಪರಿಶೀಲನೆ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ಆ ಪ್ರಕಾರ ಅಧಿಕಾರಿಗಳು ಆಸ್ತಿ ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ತೆರಿಗೆ ವಂಚಿಸಿದರನ್ನು ಪತ್ತೆ ಹಚ್ಚಿದ ನಂತರ ಅವರು ಯಾವಾಗಿನಿಂದ ಕಟ್ಟಡ ನಿರ್ಮಿಸಿದ್ದಾರೆ ಎನ್ನುವ ದಾಖಲೆ ಪತ್ತೆ ನಡೆಸಿದ್ದಾರೆ. ಕಟ್ಟಡಕ್ಕೆ ಪಡೆದ ವಿದ್ಯುತ್, ನೀರಿನ ಸಂಪರ್ಕ ಎಲ್ಲಾ ದಾಖಲೆಗಳನ್ನು ಪಡೆದು ಅಷ್ಟು ವರ್ಷಗಳ ತೆರಿಗೆ ವಸೂಲಿಗೆ ಮುಂದಾಗಲಿದ್ದಾರೆ. ಆಯಾ ಪ್ರದೇಶದ ಬಿಲ್ ಕಲೆಕ್ಟರ್, ಸಿಬ್ಬಂದಿಯಿಂದ ವರದಿ ಪಡೆದು ಎರಡು ತಿಂಗಳಲ್ಲಿ ಪ್ರಕರಣವನ್ನು ಪತ್ತೆ ಹಚ್ಚಿ ತೆರಿಗೆ ವಿಧಿಸುವ ಕಾರ್ಯ ಪೂರ್ಣಗೊಳಿಸುವ ಗುರಿ ಪಾಲಿಕೆ ಹಾಕಿಕೊಂಡಿದೆ. ಪಾಲಿಕೆ ದಾಖಲೆ ಪ್ರಕಾರ ಇರುವ 90 ಸಾವಿರ ನಿವೇಶನಗಳ ವಸ್ತುಸ್ಥಿತಿ ಅರಿಯಲು ಸಮೀಕ್ಷೆ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ.
-ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.