ಮನೆ ಹಕ್ಕು ಪತ್ರ ವಿತರಿಸದಿದ್ದರೆ ಪುರಸಭೆ ಎದುರು ಪ್ರತಿಭಟನೆ
Team Udayavani, Dec 10, 2020, 3:55 PM IST
ಧಾರವಾಡ: ಅಣ್ಣಿಗೇರಿಯಲ್ಲಿ ಬಡವರಿಗೆ ಒಂದು ತಿಂಗಳೊಳಗೆ ಆಶ್ರಯ ಮನೆ ಹಕ್ಕುಪತ್ರ ವಿತರಿಸದಿದ್ದರೆ ಪುರಸಭೆ ಎದುರು
ಪ್ರತಿಭಟಿಸುವುದಾಗಿ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವ ಅವರು, ಅಣ್ಣಿಗೇರಿ
ನಗರದಲ್ಲಿ ವಾಸಿಸಲು ಮನೆ ಇಲ್ಲದ ಸಾಕಷ್ಟು ಬಡವರು ನಾನು ಶಾಸಕನಿದ್ದಾಗ ನಿವೇಶನ ನೀಡಲು ಅರ್ಜಿ ಸಲ್ಲಿಸಿದ್ದರು. ಆಗ ಆಶ್ರಯ ಸಮಿತಿಯಲ್ಲಿ ನಿರ್ಧರಿಸಿ ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರ್ವೇ ನಂ.198/1+2 ನೇದ್ದರ 18 ಎಕರೆ 26 ಗುಂಟೆ ಜಮೀನನ್ನು ಖರೀದಿಸಿ ನೂತನ ಪದ್ಧತಿಯಲ್ಲಿ ಲೇಜೌಟ್ ನಿರ್ಮಿಸಿ ಕೆಜಿಪಿ ಉತಾರ ಅನುಮೋದನೆ ತೆಗೆದುಕೊಂಡು ಎಲ್ಲ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸಿದ ನಂತರ ಉತಾರದಲ್ಲಿ ಫಲಾನುಭವಿಗಳ ಹೆಸರು ಬರುವಂತೆ ನಿರ್ಧರಿಸಿ ನನಗಿದ್ದ ಶಾಸನಬದ್ಧ ಅ ಧಿಕಾರ ಮೇಲೆ 650 ಫಲಾನುಭವಿಗಳನ್ನು ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಿದ್ದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಈಗ ತಾತ! ಆಕಾಶ್, ಶ್ಲೋಕಾ ದಂಪತಿಗೆ ಗಂಡು ಮಗು
ಆದರೀಗ ಅಣ್ಣಿಗೇರಿ ಪುರಸಭೆ ವತಿಯಿಂದ ತಿಳಿವಳಿಕೆ ನೋಟಿಸ್‌ನಲ್ಲಿ ಈಗಿನ ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಿದ
ಫಲಾನುಭವಿಗಳನ್ನು ಅನರ್ಹರೆಂದು ಗುರುತಿಸಲಾಗಿದ್ದು, ಫಲಾನುಭವಿಗಳನ್ನು ರದ್ದುಪಡಿಸಿ ಪುನಃ ಫಲಾನುಭವಿಗಳನ್ನು
ಆಯ್ಕೆ ಮಾಡಲು ಸಭೆ ನಿರ್ಧರಿಸಿದೆ ಎಂದು 650 ಫಲಾನುಭವಿಗಳಿಗೆ ನೋಟಿಸ್ ನೀಡಿ 7 ದಿನಗಳೊಳಗೆ ಸಂಬಂಧಿಸಿದ ಇಲಾಖೆಯಿಂದ ದೃಢೀಕರಣ ಪತ್ರ ಹಾಜರಪಡಿಸಲು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಒಮ್ಮೆ ಆಶ್ರಯ ಸಮಿತಿಯಲ್ಲಿ ಆಯ್ಕೆಯಾದ
ಫಲಾನುಭವಿಗಳನ್ನು ರದ್ದುಪಡಿಸಲು ಬರಲ್ಲ. ಆ ರೀತಿ ಕ್ರಮ ಕೈಗೊಂಡರೆ ಈಗಾಗಲೇ ಹಂಚಿಕೆಯಾದ ಬಡ ಜನತೆಗೆ
ಅನ್ಯಾಯವಾಗುತ್ತದೆ. ಕಾರಣ ನೋಟಿಸ್ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಅಣ್ಣಿಗೇರಿಯಲ್ಲಿ ಬಂಗಾರಪ್ಪ ನಗರ
ನಿರ್ಮಾಣವಾದ ನಂತರ ಅಣ್ಣಿಗೇರಿ ಪುರಸಭೆಗೆ ಆಶ್ರಯ ಜಾಗವೇ ಇರಲಿಲ್ಲ. ಇದಲ್ಲದೇ ಆದಿವಾಸಿ ಜನಾಂಗದವರ ಚಿಕ್ಕಲಗಾರ
ಹಾಗೂ ಗೊಂದಳೆ ಸಮಾಜದ ಬಹುದಿನದ ಸಮಸ್ಯೆ ಬಗೆಹರಿಸಲು ನವಲಗುಂದ ರಸ್ತೆಯ ರೇಲ್ವೆ ಗೇಟ್ ಹತ್ತಿರ ಜನಾಬ ಮಾಬೂಸಾಬ ಮಹ್ಮದಸಾಬ ಗಾಡಗೋಳಿ ಇವರ ಸರ್ವೇ ನಂ.: 1070/4 ಕ್ಷೇತ್ರ 4 ಎಕರೆ ಜಮೀನು ಖರೀದಿಸಲು ಆಶ್ರಯ ಸಮಿತಿಯಲ್ಲಿ ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಇನ್ನು ಬಾಕಿ ಉಳಿದ ಫಲಾನುಭವಿಗಳಿಗೆ ಹೆಚ್ಚಿನ ಜಮೀನು ಖರೀದಿಸಿ ನಿವೇಶ ಹಂಚಿಕೆ ಮಾಡಲು ಮಜ್ಜಿಗುಡ್ಡ ರಸ್ತೆಯಲ್ಲಿ
ನಾಗುಬಾಯಿ ವಿನಾಯಕ ಗಳಗಿ ಇವರ ಸರ್ವೇ ನಂ.: 286/1 ಕ್ಷೇತ್ರ 15 ಎಕರೆ 37 ಗುಂಟೆ ಜಮೀನು ಹಾಗೂ ಬಾಯಕ್ಕ ಚಂದ್ರಣ್ಣ
ಹುಬ್ಬಳ್ಳಿ ಅವರ ಕುಟುಂಬಕ್ಕೆ ಸಂಬಂಧಿಸಿದ 10 ಎಕರೆ ಜಮೀನು ಖರೀದಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ರೀತಿ ಮನೆ ಇಲ್ಲದ ಎಲ್ಲ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕಿದೆ. ನಾನೇ ಶಾಸಕನಿದ್ದ ಅವಧಿಯಲ್ಲಿ ಹಕ್ಕುಪತ್ರ ನೀಡಲು ನಿರ್ಧರಿಸಿದ್ದೆ.
ಆದರೆ 2018 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಹಕ್ಕುಪತ್ರ ನೀಡಲು
ಸಾಧ್ಯವಾಗಲಿಲ್ಲ. ಈಗಾಗಲೇ ಆಯ್ಕೆಯಾದ ಫಲಾನುಭವಿಗಳಿಗೆ ಒಂದು ತಿಂಗಳೊಳಗೆ ಹಕ್ಕುಪತ್ರ ವಿತರಿಸಬೇಕು. ಇಲ್ಲವಾದಲ್ಲಿ
ಒಂದು ತಿಂಗಳ ನಂತರ ಅಣ್ಣಿಗೇರಿ ಪುರಸಭೆ ಎದುರುಗಡೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.