PSI ಹಗರಣ: ಕುಮಾರಸ್ವಾಮಿ, ಅಶ್ವತ್ಥನಾರಾಯಣ ಪರ ವಕೀಲರು ಹಾಜರು
Team Udayavani, Dec 27, 2023, 10:50 PM IST
ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಮಾಹಿತಿ ಅಥವಾ ಸಾಕ್ಷ್ಯಗಳಿದ್ದರೆ ಸಲ್ಲಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಜಿ ಡಿಸಿಎಂ ಡಾ| ಅಶ್ವತ್ಥನಾರಾಯಣ ಅವರ ಪರ ವಕೀಲರು ನ್ಯಾ| ಬಿ. ವೀರಪ್ಪ ನೇತೃತ್ವದ ವಿಚಾರಣ ಆಯೋಗದ ಮುಂದೆ ಬುಧವಾರ ಹಾಜರಾಗಿ ವಕಾಲತ್ತು ಹಾಕಿದರು.
ತಮ್ಮ ಕಕ್ಷಿದಾರರಿಗೆ ನೀಡಲಾಗಿರುವ ಸಮನ್ಸ್‌ಗೆ ಉತ್ತರಿಸಲು ಕಾಲವಕಾಶ ಬೇಕು ಎಂದು ಕೋರಿದರು. ಅದಕ್ಕೊಪ್ಪಿ, ನಿಮ್ಮ ಬಳಿ ಸಾಕ್ಷಿ-ದಾಖಲೆ ಗಳೇನಾದರೂ ಇದ್ದರೆ ಅದನ್ನು ಮುಂದಿನ ವಿಚಾರಣೆಯಲ್ಲಿ ಆಯೋ ಗಕ್ಕೆ ಸಲ್ಲಿಸಬಹುದು ಎಂದು ಸೂಚಿಸಿದ ನ್ಯಾ| ಬಿ. ವೀರಪ್ಪ ವಿಚಾರಣೆಯನ್ನು ಜ. 3ಕ್ಕೆ ಮುಂದೂಡಿದರು.
ಯಾರನ್ನೂ ವಿಚಾರಿಸಬಹುದು: ಪರಮೇಶ್ವರ್
ಪಿಎಸ್‌ಐ ನೇಮಕಾತಿ ಅಕ್ರಮದ ತನಿಖೆ ಹೊಣೆಯನ್ನು ನ್ಯಾ| ಬಿ. ವೀರಪ್ಪ ನೇತೃತ್ವದ ವಿಚಾರಣ ಆಯೋಗಕ್ಕೆ ಒಪ್ಪಿಸಲಾಗಿದೆ. ಅವರು ಯಾರನ್ನು ಬೇಕಾದರೂ ಕರೆಸಿ ವಿಚಾರಣೆ ಮಾಡಬಹುದು. ಅವರು ಎಲ್ಲ ಆಯಾಮ ಗಳಿಂದಲೂ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುತ್ತಾರೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಅವರಿಗೆ ಅನ್ಯಾಯ ಆಗಬಾರದು ಎಂಬುದು ನಮ್ಮ ಉದ್ದೇಶ. ಕೆಸೆಟ್ ಪರೀಕ್ಷೆ ಮೂಲ ಪರೀಕ್ಷಾ ಕೇಂದ್ರಗಳ ಬದಲಿಗೆ ಸುಪ್ರೀಂಕೋರ್ಟ್ ಆದೇಶದ ಮೇರೆಗೆ 54 ಸಾವಿರ ಅಭ್ಯರ್ಥಿಗಳು ಇರುವುದರಿಂದ ಪಾರದರ್ಶಕವಾಗಿರಲು ಬೆಂಗಳೂರಿನಲ್ಲಿಯೇ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಕಲಬುರಗಿ, ವಿಜಯಪುರ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ನಡೆಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.