ಸ್ವಲೀನತೆಯಿರುವ ಮಕ್ಕಳಲ್ಲಿ ಕಂಡು ಬರುವ ಮಾನಸಿಕ ಲಕ್ಷಣಗಳು


Team Udayavani, Mar 23, 2023, 11:00 AM IST

mental-health-of-children

ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳ ಬಗ್ಗೆ ಚರ್ಚೆ ಆಗುತ್ತಿದೆ. ಅದರಲ್ಲಿಯೂ ಕೋವಿಡ್‌ ಮಹಾಮಾರಿ ಪ್ರಪಂಚವನ್ನೇ ನಲುಗಿಸಿದ ಮೇಲೆ ಮತ್ತಷ್ಟು ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಕಾಳಜಿ, ಒಲವು ಹೆಚ್ಚಿದೆ ಎಂದರೆ ತಪ್ಪಲ್ಲ ಹೇಗೆ ಕೋವಿಡ್‌ – 19 ಮಹಾಮಾರಿ ಸಮಸ್ಯೆ ನಿಗೂಢವಾಗಿದೆಯೋ ಅಷ್ಟೇ ನಿಗೂಢ ಈ ಆಟಿಸಂ ಅಥವಾ ಸ್ವಲೀನತೆ ಎಂದರೆ ತಪ್ಪಲ್ಲ. ಯಾಕೆಂದರೆ ಈ ಸಮಸ್ಯೆಯು ಕೂಡ ಅಷ್ಟೇ ಜಟಿಲವಾದದ್ದು.

ಪ್ರತೀ ವರ್ಷ ಎಪ್ರಿಲ್‌ 2ರಂದು ನಾವು ವಿಶ್ವ ಆಟಿಸಂ ದಿನವಾಗಿ ಆಚರಿಸುತ್ತಾ ಬಂದಿದ್ದೇವೆ. ಈ ಸಮಸ್ಯೆಯಿಂದ ಬಳಲುವವರನ್ನು ಗುರುತಿಸಬೇಕಾದರೆ ಕೆಲವೊಂದು ಗುಣಲಕ್ಷಣಗಳನ್ನು ಗಮನಿಸಬಹುದು. ಈ ಸ್ವಲೀನತೆ ಇರುವವರಲ್ಲಿ ಸಾಮಾನ್ಯವಾಗಿ ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಆಗದೇ ಇರುವುದು, ಹಾಗೆ ಸಂವಹನ ವಿಚಾರವಾಗಿ ಸಮಸ್ಯೆಗಳು ಅಂದರೆ, ಅವರಿಗೆ ಭಾಷೆ ಬೆಳವಣಿಗೆ ವಯಸ್ಸಿಗೆ ತಕ್ಕಂತೆ ಆಗದೇ ಇರುವುದು, ನರಗಳ ಬೆಳವಣಿಗೆ ಅಥವಾ ನ್ಯೂನತೆ ಕಂಡುಬರುವುದು. ಇವುಗಳೊಟ್ಟಿಗೆ ಕೆಲವೊಮ್ಮೆ ವರ್ತನೆಯ ಸಮಸ್ಯೆಗಳು ಕೂಡ ಇರಬಹುದು. ಕೆಲವೊಮ್ಮೆ ಪದೇ, ಪದೇ ಹೇಳಿದ ಪದವನ್ನು ಪುನರಾವರ್ತಿತ ಮಾಡುವುದು. ಹಾಗೆಯೇ ಕೆಲವೊಂದು ವಿಚಾರಗಳಲ್ಲಿ ವಿಶೇಷ ಆಸಕ್ತಿಗಳು ಎಂದರೆ ಸಾಮಾನ್ಯವಾಗಿ ತಿರುಗುತ್ತಿರುವ ಗಾಡಿಗಳ ಚಕ್ರಗಳನ್ನೇ ದಿಟ್ಟಿಸಿ ನೋಡುವುದು ಅಥವಾ ಯಾವುದೇ ವಸ್ತುವನ್ನು ಅದರ ಪದರಗಳನ್ನು ಸ್ಪರ್ಷಿಸಿ ನೋಡುವುದು, ಆದಷ್ಟೇ ಅಲ್ಲದೇ ಅತಿಯಾದ ಶಬ್ಧಗಳಿಗೆ ಚೀರುವುದು ಅಥವಾ ಪರಿಸರದಲ್ಲಿ ಹೊಂದಿಕೊಳ್ಳಲು ತೊಂದರೆಯಾಗಬಹುದು.

ಸ್ವಲೀನತೆಯಿಂದ ಕೂಡಿರುವ ಮಕ್ಕಳು/ವ್ಯಕ್ತಿಗಳು ಸಾಮಾನ್ಯವಾಗಿ ಅವರ ಹೆಸರನ್ನು ಕರೆದಾಗ ಸ್ಪಂದಿಸಲು ಸಮಸ್ಯೆಗಳಾಗುತ್ತವೆ. ಮತ್ತೆ ಕೆಲವೊಮ್ಮೆ ತಮ್ಮ ಕುಟುಂಬದವರನ್ನೇ ಅಂದರೆ ಅವರ ಪೋಷಕರನ್ನೇ ಗುರುತಿಸಲು ಆಗದೇ ಇರಬಹುದು. ಬೇರೆಯವರೊಂದಿಗೆ ದಿಟ್ಟಿಸಿ ಅಂದರೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಅಥವಾ ಸಂವಹನದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಆಗದೇ ಇರುವುದು. ವಯಸ್ಸಿಗೆ ಅನುಗುಣವಾಗಿ ಸಾಮಾಜಿಕ ಬೆಳವಣಿಗೆ ಆಗದೇ ಇರಬಹುದು. ತಮ್ಮ ಅನಿಸಿಕೆ, ಭಾವನೆಗಳನ್ನು ವ್ಯಕ್ತಪಡಿಸಲು ಸಮಸ್ಯೆ ಹಾಗೂ ಒಬ್ಬಂಟಿಯಾಗಿ ಕಾಲಕಳೆಯಲು ಇಚ್ಛಿಸುವುದು.

ಈ ರೀತಿಯ ಸಮಸ್ಯೆಗಳು ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಲ್ಲೂ ನೋಡಬಹುದು. ಆದರೆ ಸಾಮಾನ್ಯವಾಗಿ ಗಮನಿಸಿದರೆ ನಮ್ಮ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ಶೇಕಡ ಗಂಡು ಮಕ್ಕಳಲ್ಲೇ ಈ ಸಮಸ್ಯೆ ಜಾಸ್ತಿಯಾಗಿ ಕಂಡುಬರುತ್ತದೆ. ಈ ಸ್ವಲೀನತೆ ಬರಲು ಹಲವಾರು ಕಾರಣಗಳಿವೆ. ಇದು ಕೆಲವೊಮ್ಮೆ ವಂಶಪಾರಂಪರ್ಯವಾಗಿ ಬಂದರೆ, ಕೆಲವೊಂದು ಮಾರಕ ಪರಿಸರದಿಂದಲೂ ಕಾರಣವಾಗಬಹುದು.

ಸ್ವಲೀನತೆಯನ್ನು ಗುರುತಿಸಲು ಏಕೈಕ ಪರೀಕ್ಷೆ ಎಂದಿಲ್ಲ. ಇದನ್ನು ಗುರುತಿಸಲು ಪೂರ್ತಿ ಪ್ರಮಾಣದ ವೈದ್ಯಕೀಯ ತಂಡದ ಅವಶ್ಯಕತೆ ಇದೆ. ಈ ತಂಡವು ನುರಿತ ತಜ್ಞರಾದ ನರಮಾನಸಿಕ ತಜ್ಞರು, ಮಾನಸಿಕ ತಜ್ಞರು , ಭಾಷಾ ತಜ್ಞರು, ಮಕ್ಕಳ ತಜ್ಞರು ಹೀಗೆ ಎಲ್ಲರೂ ಅವರದೇ ರೀತಿಯ ಪರೀಕ್ಷೆಗಳ ಮೂಲಕ ಇದನ್ನು ಖಚಿತಪಡಿಸಬಹುದಾಗಿದೆ. ಈ ರೀತಿಯ ಸಮಸ್ಯೆಯನ್ನು ಗುರುತಿಸಬೇಕಾದರೆ ಕೆಲವೊಂದು ಎಚ್ಚರವನ್ನು ವಹಿಸಬೇಕಾಗುತ್ತದೆ. ಯಾಕೆಂದರೆ ಗುರುತಿಸಿದ ಎಲ್ಲಾ ಮಕ್ಕಳಲ್ಲಿ ಅವರ ತಿಳುವಳಿಕೆ ಜ್ಞಾನ ಉದಾಹರಣೆಗೆ ಬುದ್ಧಿಶಕ್ತಿ ಒಂದೇ ಆಗಿರುವ ಅವಶ್ಯಕತೆ ಇಲ್ಲ. ಅವನು ಅಥವಾ ಅವಳು ಬುದ್ಧಿಮಾಂದ್ಯ ಮಗು/ವ್ಯಕ್ತಿಯಾಗಿರ ಬೇಕೆಂದೇನಿಲ್ಲ ಯಾಕೆಂದರೆ ಈ ರೀತಿಯ ಕೆಲವು ಮಕ್ಕಳನ್ನು ನಾವು Asperger Syndrome ಎಂದು ಕೂಡ ಗುರುತಿಸುತ್ತೇವೆ. ಈ ಮಕ್ಕಳು, ಬುದ್ಧಿಮಾಂದ್ಯತೆ ಹೊಂದಿರುವ ಅವಶ್ಯಕತೆ ಇಲ್ಲ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸ್ವಲೀನತೆ ಒಂದು ರೀತಿಯಾಗಿ ಕಂಡು ಬರುವುದಿಲ್ಲ. ಹಾಗೆಯೇ ಇದರ ತೀವ್ರತೆ ಅಥವಾ ಪ್ರಮಾಣವು ಕೂಡ ಏರುಪೇರಾಗುತ್ತದೆ.

ಇಂತಹ ಮಕ್ಕಳನ್ನು ಬೆಳೆಸುವಲ್ಲಿ ತಂದೆ, ತಾಯಿಯ ಜವಾಬ್ದಾರಿ ಬಹಳ. ಇದನ್ನು ಬಹಳವಾಗಿ 3 ವರ್ಷದ ಪ್ರಾಯದಲ್ಲಿ ಖಚಿತವಾಗಿ ಗುರುತಿಸಲಾಗುತ್ತದೆ. ಈ ರೀತಿ ಸೂಕ್ತ ಸಮಯದಲ್ಲಿ ಸ್ವಲೀನತೆ ದೃಢಪಡಿಸಿದಲ್ಲಿ ಮಕ್ಕಳಿಗೆ ಸರಿಯಾದ/ಸೂಕ್ತ ರೀತಿಯ ಚಿಕಿತ್ಸೆಗಳನ್ನು ನೀಡಬಹುದಾಗಿದೆ. ಈ ರೀತಿಯ ಮಕ್ಕಳಿಗೆ ಹಲವು ವಿಚಾರವಾಗಿ ಚಿಕಿತ್ಸೆಯ ಆವಶ್ಯಕತೆಯಿರುತ್ತದೆ. ಮಾತಿಗೆ ಸಂಬಂಧವಾಗಿ ಮಾತಿನ ಚಿಕಿತ್ಸೆ (Speech Therapy) ವರ್ತನೆ ಸಮಸ್ಯೆಯಿದ್ದಲ್ಲಿ ತಂದೆ, ತಾಯಿಗೆ ಆಪ್ತ ಸಮಾಲೋಚನೆ, ಕುಟುಂಬದವರೊಂದಿಗೆ (Family Therapy) ಔದ್ಯೋಗಿಕ ಚಿಕಿತ್ಸೆ (Occupasional Therapy) ಹಾಗೆಯೇ ಕೆಲವೊಮ್ಮೆ ಮಾತೇ ಮದ್ದು ಅವಶ್ಯಕತೆ ಇರಬಹುದು.

ಹೀಗೆ ತಂದೆ, ತಾಯಿ ಸೂಕ್ತ ಸಮಯದಲ್ಲಿ ಇಂತಹ ಮಗುವನ್ನು ಗುರುತಿಸಿ, ಚಿಕಿತ್ಸೆ ಕೊಡುತ್ತಾರೋ ಆಗ ಈ ಮಕ್ಕಳಲ್ಲಿರುವ ವಿಶೇಷವಾದ ಶಕ್ತಿಯನ್ನು ಕಂಡು ಹಿಡಿದು ತರಬೇತಿ ನೀಡಬಹುದಾಗಿದೆ. ಹೇಗೆ ಒಂದು ಮಗು ಆರೋಗ್ಯವಾಗಿದ್ದಾಗ ಶಾಲೆಯ ಅವಶ್ಯಕತೆ ಇರುತ್ತದೆಯೋ ಹಾಗೇ ಇಂತಹ ಮಕ್ಕಳಿಗೂ ಶಾಲೆಯ ಅವಶ್ಯಕತೆ ಹಾಗೂ ಪೋಷಕರ ಗಮನ ಅಗತ್ಯವಿದೆ. ಹೇಗೆ ದೈಹಿಕ ಕಾಯಿಲೆಗಳಿಗೆ ಒತ್ತು ಕೊಡುತ್ತೇವೆಯೋ ಹಾಗೆಯೇ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಮಗುವಿನ ಬೆಳವಣಿಗೆ ಉತ್ತಮವಾಗುತ್ತದೆ.

ಈ ರೀತಿಯ ಸಮಸ್ಯೆಗಳಿಂದ ಯಾರಾದರೂ ಬಳಲುತ್ತಿದ್ದರೆ ಅವರನ್ನು ಸೈಕಿಯಾಟ್ರಿ ಅಥವಾ ಕ್ಲಿನಿಕಲ್‌ ಸೈಕಾಲಜಿ ವಿಭಾಗದಲ್ಲಿ ತೋರಿಸಿ ಸೂಕ್ತ ಚಿಕಿತ್ಸೆ ನೀಡುವುದು ಒಳಿತು.

ಡಾ| ಶ್ವೇತಾ ಟಿ.ಎಸ್‌. ಸಹ ಪ್ರಾಧ್ಯಾಪಕರು ಕ್ಲಿನಿಕಲ್‌ ಸೈಕಾಲಜಿ ವಿಭಾಗ, ಕೆ.ಎಂ.ಸಿ., ಮಣಿಪಾಲ

ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕ್ಲಿನಿಕಲ್‌ ಸೈಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು

ಟಾಪ್ ನ್ಯೂಸ್

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

14-uv-fusion

UV Fusion: ಕೈ ಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.