ಎಳೆಯ ಮನಸುಗಳಲ್ಲಿ ಪರೀಕ್ಷಾ ಆತಂಕ; ಗೊಂದಲದ ಗೂಡಾಯ್ತು 5-8 ಪರೀಕ್ಷಾ ಪ್ರಶ್ನೆಗಳು!
Team Udayavani, Mar 31, 2023, 4:05 PM IST
ಶಿರಸಿ: ರಾಜ್ಯದಲ್ಲಿ ಒಂದೆಡೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆಗಳು ಆರಂಭವಾಗಿದ್ದರೆ, ಇನ್ನೊಂದಡೆ ಐದು ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ ಪಬ್ಲಿಕ್ ಪರೀಕ್ಷೆಗಳಲ್ಲಿನ ಪ್ರಶ್ನೆಗಳು ಮಕ್ಕಳಿಗೆ ಗೊಂದಲ ಸೃಷ್ಟಿಸುತ್ತಿವೆ.
ಈಗಾಗಲೇ ಮೂರು ಭಾಷಾ ಹಾಗೂ ಒಂದು ಪಠ್ಯ ವಿಷಯ ಪರೀಕ್ಷೆಗಳು ನಡೆದಿದ್ದು, ಶುಕ್ರವಾರ ಹಾಗೂ ಶನಿವಾರ ಇನ್ನೆರಡು ವಿಷಯಗಳ ಮೇಲೆ ಪರೀಕ್ಷೆ ನಡೆಯಲಿವೆ.
ಆದರೆ, ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಕೋವಿಡ್ ಕಾಲಘಟ್ಟದಲ್ಲಿ ಕೊರತೆ ಬಿದ್ದ ವಿಷಯಗಳ ಮೇಲಿನ ಕಲಿಕಾ ಚೇತರಿಕೆ ಪಾಠ ಪ್ರವಚನ ನೀಡಿದ್ದರೆ, ಖಾಸಗಿ ಶಾಲೆಗಳು ಪಠ್ಯ ಆಧರಿತ ಶಿಕ್ಷಣ ನೀಡಿದ್ದವು.
ರಾಜ್ಯ ಸರಕಾರ ವಾರ್ಷಿಕ ಶೈಕ್ಷಣಿಕ ವೇಳಾ ಪಟ್ಟಿ ಹೊರತುಪಡಿಸಿ ನಿಗದಿಗೊಳಿಸಿದ ಪಬ್ಲಿಕ್ ಪರೀಕ್ಷೆಯನ್ನು ಶೈಕ್ಷಣಿಕ ಗುಣಮಟ್ಟದ ಮಾಪನಕ್ಕೆ ನಿರ್ಧರಿಸಿತು. ಆದರೆ, ಪಠ್ಯ ಹಾಗೂ ಕಲಿಕಾಚೇತರಿಕೆಯ ಪಾಠದ ಗೊಂದಲದ ಆದೇಶಗಳ ಕಾರಣದಿಂದ ಪರೀಕ್ಷೆಗಳೂ ಮಕ್ಕಳಲ್ಲಿ ಗೊಂದಲವಾಗಿ ನಡೆಯುವಂತೆ ಆಗಿದೆ.
ಮೊನ್ನೆ ನಡೆದ 5-8 ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ಹಾಗೂ ಆಂಗ್ಲ ಭಾಷೆಗೆ ಸಂಬಂಧಿಸಿ ಕಲಿಕಾ ಚೇತರಿಕೆಯ ಪ್ರಶ್ನೆಗಳು ಬಂದಿದ್ದವು. ಸಂಸ್ಕೃತ ಹಾಗೂ ಗುರುವಾರ ನಡೆದ ಪರೀಕ್ಷೆಯಲ್ಲಿ ಪಠ್ಯಕ್ಕೆ ಸಂಬಂಧಿಸಿ ಪ್ರಶ್ನೆಗಳು ಬಂದಿದ್ದವು. ಇದರಿಂದ ಮೊದಲೆರಡು ದಿನ ಕಲಿಕಾ ಚೇತರಿಕೆ ಕಲಿತ ಶಾಲಾ ಮಕ್ಕಳಿಗೆ ಉಳಿದೆರಡು ದಿನ ಪಠ್ಯ ಕಲಿತ ಮಕ್ಕಳಿಗೆ ಪ್ರಶ್ನೆಗಳು ಸುಲಭವಾಗಿದ್ದವು.
ಈ ಮಧ್ಯೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಪಬ್ಲಿಕ್ ಪರೀಕ್ಷೆ ಘೋಷಣೆ ಆದ ಬಳಿಕ ನೀಡಲಾಗಿತ್ತಾದರೂ ಗುರುವಾರದ ಗಣಿತ ಪರೀಕ್ಷಾ ಮಾದರಿಗೂ ಸಂಬಂಧವಿಲ್ಲವಾಗಿದೆ ಎಂಬುದು ದೂರಾಗಿದೆ.
ಇಲಾಖೆಯ ಉನ್ನತ ಅಧಿಕಾರಿಗಳು ಕೂಡ ಕಲಿಕಾ ಚೇತರಿಕೆ ಹಾಗೂ ಪಠ್ಯದ ಪ್ರಶ್ನೆಗಳನ್ನು ಬದಲಿಯಾಗಿ ನೀಡಲಾಗುತ್ತದೆ ಎಂದು ಹೇಳಿದ್ದರೂ ಪಠ್ಯದಲ್ಲೇ ಬದಲಿ ಪ್ರಶ್ನೆ ನೀಡಿದ್ದೂ ಬೆಳಕಿಗೆ ಬಂದಿದೆ.
ಕಲಿಕಾ ಚೇತರಿಕೆ ಹಾಗೂ ಪಠ್ಯ ಪ್ರಶ್ನೆ ಸಂಬಂಧಿಸಿ ಕೋರ್ಟ್ ಗೆ ಹೋಗಿ ಮುಂದೂಡಲಾಗಿತ್ತು. ಎಲ್ಲರೂ ತೇರ್ಗಡೆ ಎಂದು ಸರಕಾರದ ನಿಯಮ ಹೇಳಿದ್ದರೂ ಪ್ರಶ್ನೆ ಪತ್ರಿಕೆಯಲ್ಲಿ ಕಲಿಯದ ಪಾಠಗಳೇ ಬಿದ್ದು ಮಕ್ಕಳ ಆತ್ಮ ಸ್ಥೈರ್ಯ ಕುಗ್ಗಿಸುವಂತೆ ಆಗಿದೆ ಎನ್ನುತ್ತಾರೆ ಅನೇಕ ಪಾಲಕರು.
ಕೋವಿಡ್ ನಂತರ ಪೂರ್ಣ ಪ್ರಮಾಣದಲ್ಲಿ ತರಗತಿಗೆ ತೆರಳಿದ ಈ ಮಕ್ಕಳಿಗೆ ಈ ವರ್ಷ ಪರೀಕ್ಷೆ ಇನ್ನಷ್ಟು ಉತ್ಸಾಹ ನೀಡಬೇಕಿತ್ತು. ಆದರೆ, ಐದು ಹಾಗೂ ಎಂಟನೇ ವರ್ಗದ ಮಕ್ಕಳನ್ನು ಪರೀಕ್ಷಾ ಗೊಂದಲ ಸೃಷ್ಟಿಸಿದೆ ಎಂಬುದು ಶಿಕ್ಷಣಾಭಿಮಾನಿಗಳ ಅಸಮಧಾನವಾಗಿದೆ.
ತರಗತಿಯ ಪರೀಕ್ಷೆಯಲ್ಲಿ ನೂರಕ್ಕೆ 99 ಅಂಕ ಪಡೆದ ಮಕ್ಕಳು ಇಲ್ಲಿ ಶೇ.50ರಷ್ಟೂ ಸಾಧನೆ ಮಾಡಲಾಗದ ಸ್ಥಿತಿಯೂ ಇದೆ ಎನ್ನುತ್ತಾರೆ ಅನೇಕ ಶಿಕ್ಷಕರು. ಇಲಾಖೆಯ ಗೊಂದಲದಿಂದ ಈ ಪರೀಕ್ಷೆಗಳು ವಿದ್ಯಾರ್ಥಿಗಳನ್ನೇ ಗೊಂದಲಕ್ಕೀಡು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.