ಪಲ್ಸ್ ಪೋಲಿಯೋಗೆ ಆರೋಗ್ಯ ಇಲಾಖೆ ಸಿಬಂದಿ
Team Udayavani, Jan 11, 2020, 7:08 AM IST
ಬೆಂಗಳೂರು: ಆಶಾ ಕಾರ್ಯಕರ್ತೆಯರ ಮುಷ್ಕರದ ಹಿನ್ನೆಲೆಯಲ್ಲಿ ಜ. 19ರಂದು ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ವೈದ್ಯಕೀಯ ಕಾಲೇಜು, ಆರೋಗ್ಯ ಇಲಾಖೆ ಸಿಬಂದಿ, ಶುಶ್ರೂಷಕರು ಮತ್ತು ಅರೆವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಸಿಬಂದಿ ಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಮೊದಲು ಮುಷ್ಕರ ನಿರತ ಆಶಾ ಕಾರ್ಯಕರ್ತೆಯರ ಮನವೊಲಿಸಲು ತಿಳಿಸಲಾಗಿದ್ದು, ನಿರಾಕರಿಸಿದಲ್ಲಿ ಸರಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮದಲ್ಲಿ ಕಾರ್ಯನಿರತರಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ಮತ್ತು ಬಿಸಿಯೂಟ ಯೋಜನೆಯ ಸಿಬಂದಿ, ಸಾಕ್ಷರತಾ ಪ್ರೇರಕರು, ಎಂ.ಆರ್. ಡಬ್ಲ್ಯು/ವಿ.ಆರ್.ಡಬ್ಲ್ಯು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಮಾಸ್ಟರ್ ಬುಕ್ ಕೀಪರ್, ಸಾಮಾಜಿಕ ಕಳಕಳಿಯುಳ್ಳ ನಾಗರಿಕರನ್ನು ಗುರುತಿಸಿ ಬಳಸಿಕೊಳ್ಳಲು ಇಲಾಖೆ ಮುಂದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.