Punjalkatte ಸೋರುತಿಹುದು ಪಾಂಡವರಕಲ್ಲು ಅಂಗನವಾಡಿ ಕೇಂದ್ರ
ಬಿರುಕು ಬಿಟ್ಟ ಮೇಲ್ಛಾವಣಿ; ಶೌಚಾಲಯವೂ ದುರಸ್ತಿಯಾಗಿಲ್ಲ, ಮಕ್ಕಳ ಆರೋಗ್ಯದ ಬಗ್ಗೆ ಆತಂಕ
Team Udayavani, Jul 1, 2024, 6:25 AM IST
ಪುಂಜಾಲಕಟ್ಟೆ : ಪುಟ್ಟ ಮಕ್ಕಳಿಗೆ ಶಿಕ್ಷಣ ನೀಡುವ ಅಂಗನವಾಡಿ ಕೇಂದ್ರಗಳ ಬಗ್ಗೆ ಸರಕಾರದ ನಿರ್ಲಕ್ಷ್ಯ ವಹಿಸುತ್ತಿದೆಯೋ ಎಂಬ ಪ್ರಶ್ನೆ ಮೂಡಲು ಪಾಂಡವರ ಕಲ್ಲು ಅಂಗನವಾಡಿ ಕೇಂದ್ರದ ದುಃಸ್ಥಿತಿ ಕಾರಣವಾಗಿದೆ. ಈ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಬಿರುಕು ಬಿಟ್ಟಿದ್ದು, ಮಳೆ ಬಂದಾಗ ನೀರು ಒಳಬರುತ್ತಿದೆ. ಸದ್ಯ ಮಕ್ಕಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಬಂಟ್ವಾಳ ತಾಲೂಕಿನ ಬಡಗಕಜೆ ಕಾರು ಗ್ರಾಮ ಪಂಚಾಯತ್‌ನ ಕೇಂದ್ರಸ್ಥಾನ ಪಾಂಡವರಕಲ್ಲು ಅಂಗನವಾಡಿ ಕೇಂದ್ರದ ಆರ್‌ಸಿಸಿ ಮೇಲ್ಛಾವಣಿ ಸೋರುತ್ತಿರುವ ಕಾರಣ ಇಲ್ಲಿನ 30 ಮಕ್ಕಳು ನೀರಲ್ಲೇ ಕುಳಿತುಕೊಳ್ಳು ವಂತಾಗಿದೆ. ಅಂಗನವಾಡಿಯ ಆಹಾರ, ಧಾನ್ಯಗಳು ಕೂಡ ನೀರಿನ ತೇವಕ್ಕೆ ಹಾಳಾಗುವ ಸಂಭವವಿದೆ.
ಎರಡು ದಿನಗಳಿಂದ ಅಂಗನವಾಡಿ ಕೇಂದ್ರಕ್ಕೆ ರಜೆ ಇದ್ದ ಕಾರಣ ಮಕ್ಕಳು ಆಗಮಿಸಿರಲಿಲ್ಲ. ಶನಿವಾರ ಸಮೀಪದ ಸಮುದಾಯ ಭವನದಲ್ಲಿ ತರಗತಿ ನಡೆಸಲಾಗಿದೆ.
ಸುಮಾರು 15 ವರ್ಷಗಳಷ್ಟು ಹಳೆಯದಾದ ಈ ಅಂಗನವಾಡಿಯ ಕಟ್ಟಡ ಗ್ರಾ.ಪಂ. ಕಚೇರಿ ಸಮೀಪವೇ ಇದೆ. ಈ ಹಿಂದೆಯೂ ಸ್ವಲ್ಪ ಸೋರುತ್ತಿದ್ದು, ಯಾರೂ ಹೆಚ್ಚಿನ ಗಮನ ಹರಿಸಿರಲಿಲ್ಲ. ಆದರೆ ಈ ಬಾರಿ ನೀರು ಒಳಗೆಯೇ ಬೀಳುತ್ತಿದ್ದು, ತರಗತಿ ನಡೆಸಲು ಅಸಾಧ್ಯವಾಗಿದೆ.
ಶೌಚಾಲಯ ಅವ್ಯವಸ್ಥೆ
ಇದರ ಶೌಚಾಲಯವೂ ಕೆಟ್ಟಿದ್ದು, ದುರಸ್ತಿಗೊಂಡಿಲ್ಲ. ಮಕ್ಕಳು ಸಮೀಪದ ಸಾರ್ವಜನಿಕ ಶೌಚಾಲಯಕ್ಕೆ ತೆರಳಬೇಕಾಗಿದೆ. ಆದರೆ ಅದರ ಪರಿಸ್ಥಿತಿ ಶೋಚನೀಯವಾಗಿದೆ. ಇದನ್ನು ಸ್ವತ್ಛಗೊಳಿಸದೇ ದುರ್ನಾತ ಬೀರುತ್ತಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಆತಂಕ ಮೂಡುತ್ತಿದೆ. ಈಗ ತರಗತಿ ನಡೆಸುತ್ತಿರುವ ಸಮುದಾಯ ಭವನದಲ್ಲೂ ಶೌಚಾಲಯವಿಲ್ಲದೆ ಸಮಸ್ಯೆಯಾಗಿದೆ. ಈ ಅಂಗನವಾಡಿ ಕೇಂದ್ರದ ಬಗ್ಗೆ ತುರ್ತು ಗಮನ ಹರಿಸಿ ದುರಸ್ತಿ ಮಾಡಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.