![Siddaramaiah](https://www.udayavani.com/wp-content/uploads/2025/02/Siddaramaiah-4-415x249.jpg)
![Siddaramaiah](https://www.udayavani.com/wp-content/uploads/2025/02/Siddaramaiah-4-415x249.jpg)
Team Udayavani, Jan 29, 2025, 10:52 PM IST
ಶೃಂಗೇರಿ: ಮಹಾಕುಂಭ ಮೇಳದಲ್ಲಿ ಭಾಗಿಯಾಗಿರುವ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ 37ನೇ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಮೌನಿ ಅಮಾವಾಸ್ಯೆ ದಿನದಂದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಜಗದ್ಗುರುಗಳೊಂದಿಗೆ ಪೂರ್ವಾಮ್ನಾಯ ದ್ವಾರಕ ಪೀಠಾ ಧೀಶರಾದ ಸದಾನಂದ ಸರಸ್ವತಿ ಸ್ವಾಮೀಜಿ ಹಾಗೂ ಉತ್ತರಾಮ್ನಾಯ ಬದರಿ ಶಂಕರಾಚಾರ್ಯ ಪೀಠದ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಕೂಡ ಪುಣ್ಯಸ್ನಾನ ಮಾಡಿದರು.
ರಾಜ್ಯದ ಮೂವರು ಮಠಾಧೀಶರು ಸುರಕ್ಷಿತ
ಚಿತ್ರದುರ್ಗ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿರುವ ರಾಜ್ಯದ ಮೂವರು ಮಠಾಧೀಶರು ಸುರಕ್ಷಿತವಾಗಿದ್ದು ಬುಧವಾರ ಪವಿತ್ರ ಶಾಹಿ ಸ್ನಾನ ಮಾಡಿದ್ದಾರೆ. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹಾಗೂ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ. ಜ. 28ರಂದು ಪ್ರಯಾಗರಾಜ್ ತಲುಪಿದ್ದು, ಜ. 29ರಂದು ಬುಧವಾರ ಬೆಳಗ್ಗೆ 7ಕ್ಕೆ ಮೌನಿ ಅಮಾವಾಸ್ಯೆಯ ಶಾಹಿ ಸ್ನಾನಕ್ಕೆ ತೆರಳಿದ್ದು, 9 ಗಂಟೆಗೆ ಸ್ನಾನ ಮುಗಿಸಿ ತಾವು ವಾಸ್ತವ್ಯ ಮಾಡಿರುವ ಮನೆ ತಲುಪಿದ್ದಾರೆ.
NR Pura: ಭದ್ರಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾದ ಯುವಕ… ಮುಂದುವರೆದ ಶೋಧ ಕಾರ್ಯ
Mudigere: ಸುತ್ತಿಗೆಯಿಂದ ತಲೆಗೆ ಹೊಡೆದು ಅತ್ತೆಯ ಹತ್ಯೆ… ಅಳಿಯ ಪರಾರಿ, ಪೊಲೀಸರಿಂದ ಶೋಧ
Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್ ಪಾವತಿ!
Kudremukh-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿ; ಗುಂಡಿಗಳ ರಸ್ತೆ
Chikkamagaluru: ಕಿರುಕುಳ, ಮಹಿಳೆ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಸರ್ವೇ ಸಿಬಂದಿ ಆತ್ಮಹತ್ಯೆ
You seem to have an Ad Blocker on.
To continue reading, please turn it off or whitelist Udayavani.