Misssing Case ಪುತ್ತೂರು: ಹೊಟೇಲ್ ಸಪ್ಲಾಯರ್ ನಾಪತ್ತೆ
Team Udayavani, Jun 22, 2024, 12:04 AM IST
ಪುತ್ತೂರು: ನಗರದ ಹೊಟೇಲೊಂದರಲ್ಲಿ ಸಪ್ಲೆಯರ್ ಆಗಿದ್ದ ವ್ಯಕ್ತಿಯೋರ್ವರು ಹತ್ತು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲ್ಲಿಕಟ್ಟೆಯಲ್ಲಿ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದ, ಬೊಳು ವಾರಿನ ಶಿವಪ್ಪ ಯಾನೆ ಶಿವಣ್ಣ (45) ನಾಪತ್ತೆಯಾದವರು.ಅವರು ಮೂರು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದರು.
ಜೂ.10ರಂದು ಬೆಳಗ್ಗೆ ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಹಿಂದಿರುಗಿಲ್ಲ ಎಂದು ಪತ್ನಿ ಗೀತಾ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ: ವ್ಯಕ್ತಿ ನಾಪತ್ತೆ
ಉಪ್ಪಿನಂಗಡಿ: ಇಲ್ಲಿನ ಕೊಣಾಜೆ ಗ್ರಾಮದ ಕಡ್ಯ ಮುಚ್ಚಿರೋಡಿ ಮನೆ ನಿವಾಸಿ ಗಿರೀಶ್ ಗೌಡ (46) ಅವರು ಬುಧವಾರದಿಂದ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ಶಂಕರಿ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಿರೀಶ್ ಗೌಡ ವಿಪರೀತ ಸಾಲ ಮಾಡಿದ್ದು, ಅದನ್ನು ಮರು ಪಾವತಿ ಮಾಡಲಾಗದೇ ಬೇಸರದಲ್ಲಿದ್ದರು ಎಂದು ದೂರಿ ನಲ್ಲಿ ತಿಳಿಸಲಾಗಿದೆ.ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ನಾವುಂದ: ಮಹಿಳೆ ನಾಪತ್ತೆ
ಉಪ್ಪುಂದ: ನಾವುಂದದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಪದ್ಮಾವತಿ (37) ಅವರು ಮೇ 25ರಿಂದ ನಾಪತ್ತೆಯಾಗಿರುತ್ತಾರೆ.
5 ಅಡಿ 4 ಇಂಚು ಎತ್ತರ, ಕಪ್ಪು ಮೈ ಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆಗೆ (08254-251033, 9480805459) ತಿಳಿಸಲು ಕೋರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.