Puttur: ಗೃಹಲಕ್ಷ್ಮಿ ಹಣದಿಂದ ಪತಿಗಾಗಿ ಸ್ಕೂಟರ್‌ ಖರೀದಿಸಿದ ಪತ್ನಿ !

ಪೈಂಟಿಂಗ್‌ ಕೆಲಸಕ್ಕೆ ತೆರಳುವ ಪತಿಗೆ ಅನುಕೂಲ

Team Udayavani, Nov 11, 2024, 6:35 AM IST

Puttur: ಗೃಹಲಕ್ಷ್ಮಿ ಹಣದಿಂದ ಪತಿಗಾಗಿ ಸ್ಕೂಟರ್‌ ಖರೀದಿಸಿದ ಪತ್ನಿ !

ಪುತ್ತೂರು: ತನ್ನ ಪತಿ ಕೆಲಸಕ್ಕೆ ತೆರಳಲು ಅನುಕೂಲವಾಗಲೆಂದು ಪತ್ನಿಯು ಗೃಹಲಕ್ಷ್ಮಿ ಯೋಜನೆಯ ಮೂಲಕ ತಿಂಗಳು ತಿಂಗಳು ದೊರೆಯುವ ಹಣದಿಂದ ಸ್ಕೂಟರ್‌ ಖರೀದಿಸಿ ನೆರವಾಗಿದ್ದಾರೆ.

ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಮಿಸ್ರಿಯಾ ತನ್ನ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮಿ ಹಣದಿಂದ ಪೈಂಟರ್‌ ಕೆಲಸಕ್ಕೆ ತೆರಳುತ್ತಿರುವ ತನ್ನ ಪತಿ ಸಲೀಂಗೆ ಅನುಕೂಲವಾಗಲೆಂದು ಸ್ಕೂಟರ್‌ ಅನ್ನು ಖರೀದಿ ಮಾಡಿದ್ದಾರೆ.

ಸಲೀಂ ಅವರು ನಿತ್ಯ ದೂರದ ಊರುಗಳಿಗೆ ಪೈಂಟಿಂಗ್‌ ಕೆಲಸಕ್ಕೆ ಹೋಗುತ್ತಾರೆ. ಅವರಿಗೆ ವಾಹನ ಆವಶ್ಯವಿರುವ ಕಾರಣ ಮಿಸ್ರಿಯಾ ಅವರು ಸರಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಬಂದಿದ್ದ ಹಣದಲ್ಲಿ ಕೂಡಿಟ್ಟು 20 ಸಾವಿರ ರೂ. ನಗದನ್ನು ಪತಿಗೆ ನೀಡಿದ್ದಾರೆ.

ಈ ಹಣವನ್ನು ಮುಂಗಡವಾಗಿ ಪಾವತಿಸಿ ಉಳಿದ ಹಣಕ್ಕೆ ಲೋನ್‌ ಮಾಡಿ ಸ್ಕೂಟರ್‌ ಖರೀದಿಸಿದ್ದಾರೆ. ಇನ್ನೂ ಪ್ರತಿ ತಿಂಗಳ ಕಂತು ಪಾವತಿಗೂ ಪತ್ನಿ ತನ್ನ ಗೃಹಲಕ್ಷ್ಮಿ ಯೋಜನೆಯಿಂದ ಬರುವ ಹಣ ಬಳಸಲು ನಿರ್ಧರಿಸಿದ್ದಾರೆ.

ಶಾಸಕರಿಂದ ಗೌರವಾರ್ಪಣೆ
ಸಲೀಂ ಅವರು ತನ್ನ ಪತ್ನಿ ನೀಡಿದ ಸ್ಕೂಟರ್‌ನೊಂದಿಗೆ ಶಾಸಕ ಅಶೋಕ್‌ ಕುಮಾರ್‌ ರೈ ಅವರನ್ನು ಭೇಟಿಯಾಗಿ ಸರಕಾರದ ಗೃಹಲಕ್ಷ್ಮಿ ಹಣದಿಂದ ತನ್ನ ಬಾಳು ಬೆಳಗಿದೆ ಎಂದು ಹೇಳಿದ್ದಾರೆ. ತನಗೆ ಕೆಲಸಕ್ಕೆ ತೆರಳಲು ಈ ವಾಹನ ನೆರವಾಗಲಿದೆ ಎಂದಿದ್ದಾರೆ. ಶಾಸಕರು ಸಲೀಂ ಅವರನ್ನು ಗೌರವಿಸಿದರು.

ಆರ್ಥಿಕ ನೆರವು ಗೃಹಲಕ್ಷ್ಮಿ
ತನ್ನ ಸ್ಕೂಟರಲ್ಲಿ ಸಲೀಂ ಅವರು ಆರ್ಥಿಕ ನೆರವು ಗೃಹಲಕ್ಷ್ಮಿ ಎಂಬ ಫಲಕ ಹಾಕಿದ್ದು ಇದರಲ್ಲಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್‌, ಲಕ್ಷ್ಮೀ ಹೆಬ್ಟಾಳ್ಕರ್‌ ಹಾಗೂ ಶಾಸಕ ಅಶೋಕ್‌ ರೈ ಅವರ ಭಾವಚಿತ್ರವನ್ನು ಬಳಸಿದ್ದಾರೆ.

ಟಾಪ್ ನ್ಯೂಸ್

111

Thalapathy69: ಕಾಲಿವುಡ್‌ ಸ್ಟಾರ್‌ ದಳಪತಿ ವಿಜಯ್‌ ಸಿನಿಮಾದಲ್ಲಿ ಶಿವರಾಜ್‌ ಕುಮಾರ್ ನಟನೆ

doctor 2

Chennai; ಆಸ್ಪತ್ರೆಯಲ್ಲಿ ವೈದ್ಯರಿಗೆ ಮನಬಂದಂತೆ ಇರಿದ ರೋಗಿಯ ಪುತ್ರ!!

15 ದಿನ ಮೊದಲು ನೋಟಿಸ್…ಕಟ್ಟಡ ಧ್ವಂಸಕ್ಕೆ ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂಕೋರ್ಟ್

15 ದಿನ ಮೊದಲು ನೋಟಿಸ್…ಕಟ್ಟಡ ಧ್ವಂಸಕ್ಕೆ ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂಕೋರ್ಟ್

1-qrewrew

Maharashtra; ಉದ್ಧವ್ ಮಾತ್ರವಲ್ಲ ಫಡ್ನವಿಸ್ ಬ್ಯಾಗ್ ಕೂಡ ಚೆಕ್: ಬಿಜೆಪಿಯಿಂದ ವಿಡಿಯೋ

Actress: ಸಲ್ಮಾನ್‌,ಶಾರುಖ್‌ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50‌ ಲಕ್ಷ ರೂ. ಡಿಮ್ಯಾಂಡ್

Actress: ಸಲ್ಮಾನ್‌,ಶಾರುಖ್‌ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50‌ ಲಕ್ಷ ರೂ. ಡಿಮ್ಯಾಂಡ್

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

army-1

Manipur; ಹಿಂಸಾಚಾರದ ಬಳಿಕ ಕೇಂದ್ರದಿಂದ 20 CAPF ತುಕಡಿಗಳ ರವಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1(1

Vitla: ಉದ್ಘಾಟನೆಯಾದ ನಾಡಕಚೇರಿ ತೆರೆದಿಲ್ಲ !

1-vitla

Vitla: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಬ್ರೇಕ್ ಫೇಲ್ ಆಗಿ ಪಲ್ಟಿ

Dhrmasthala-Heggade

Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

7(1

Padil ಹೆದ್ದಾರಿಗೆ ಡಾಮರು, ಜಂಕ್ಷನ್‌ಗೆ ಇಲ್ಲ !

6

Mangaluru: ಬಾವುಟಗುಡ್ಡೆ ತಂಗುದಾಣ ಬಸ್‌ ಬೇ ಬಳಕೆಗೆ ಅನುವು

5-raichur

Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು

111

Thalapathy69: ಕಾಲಿವುಡ್‌ ಸ್ಟಾರ್‌ ದಳಪತಿ ವಿಜಯ್‌ ಸಿನಿಮಾದಲ್ಲಿ ಶಿವರಾಜ್‌ ಕುಮಾರ್ ನಟನೆ

doctor 2

Chennai; ಆಸ್ಪತ್ರೆಯಲ್ಲಿ ವೈದ್ಯರಿಗೆ ಮನಬಂದಂತೆ ಇರಿದ ರೋಗಿಯ ಪುತ್ರ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.