Putturu: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: ಆರೋಪಿಗಳ ಜಾಮೀನು ಅರ್ಜಿ ವಜಾ
Team Udayavani, Dec 14, 2024, 1:42 AM IST
ಪುತ್ತೂರು: ಹುಲಿ ವೇಷಧಾರಿ ತಂಡ ಕಲ್ಲೇಗ ಟೈಗರ್ಸ್ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪೈಕಿ ಇಬ್ಬರು ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣದ ಆರೋಪಿಗಳಾಗಿರುವ ಚೇತನ್ ಮತ್ತು ಮನೀಶ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಮಂಜುನಾಥ್ ಯಾನೆ ಹರಿ ಮತ್ತು ಕೇಶವ ಪಡೀಲ್ನ ಜಾಮೀನು ಅರ್ಜಿಯನ್ನು ಕೆಲವು ದಿನಗಳ ಹಿಂದೆ ಜಿಲ್ಲಾ ನ್ಯಾಯಾಲಯ, ಅನಂತರ ಹೈಕೋರ್ಟ್ ವಜಾ ಮಾಡಿತ್ತು.
2023ರ ನ.6ರ ರಾತ್ರಿ 11.35ರ ಸುಮಾರಿಗೆ ನೆಹರು ನಗರ ಜಂಕ್ಷನ್ನಲ್ಲಿ ಅಕ್ಷಯ್ ಕಲ್ಲೇಗನನ್ನು ಅವರ ಪರಿಚತರೇ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು. ಘಟನೆಗೆ ಸಂಬಂಧಿಸಿ ಒಟ್ಟು ನಾಲ್ವರನ್ನು ಬಂಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Alvas: ವಿರಾಸತ್ನಲ್ಲಿ ನೀಲಾದ್ರಿ ಕುಮಾರ್ ಬೆರಳ ಮಾಂತ್ರಿಕತೆಗೆ ಜನಸ್ತೋಮ ನಿಬ್ಬೆರಗು
Navy: ಪಶ್ಚಿಮ ಕಮಾಂಡ್ನ ಮೆಡಿಕಲ್ ಮುಖಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ
Udupi: ಸಿಎಸ್ಆರ್ ನಿಧಿಗಳ ಸದುಪಯೋಗವಾಗಲಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ
Manipal Kasturba Hospital: ಶಿಶುವಿನ ಯಕೃತ್ ಗೆಡ್ಡೆ ಶಸ್ತ್ರಚಿಕಿತ್ಸೆ: ಕೆಎಂಸಿ ಸಾಧನೆ
Mangaluru: ಗ್ರಾಮೀಣ ಭಾಗದ ದಬ್ಬಾಳಿಕೆ ಕಥೆ ಹೇಳುವ ಸಿನೆಮಾಕ್ಕೆ ಉತ್ತಮ ಸ್ಪಂದನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.