ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ ಸೆಮಿಫೈನಲ್‌ಗೆ ಸಿಂಧು ಪದಕ ಖಚಿತ
Team Udayavani, Apr 29, 2022, 11:22 PM IST
ಮನಿಲಾ: ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ಗೆದ್ದಿರುವ ಭಾರತದ ಪಿ.ವಿ. ಸಿಂಧು ಅವರು ಚೀನದ ಹಿ ಬಿಂಗ್ ಜಿಯಾವೊ ಅವರನ್ನು ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಉರುಳಿಸಿ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ವನಿತೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಹಂತಕ್ಕೇರಿದ್ದಾರೆ.
ಈ ಗೆಲುವಿನಿಂದ ಸಿಂಧು ಪದಕವೊಂದನ್ನು ಖಚಿತಪಡಿಸಿದ್ದಾರೆ. ಏಷ್ಯಾ ಬ್ಯಾಡ್ಮಿಂಟನ್ ಕೂಟವು ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಎರಡು ವರ್ಷಗಳ ಬಳಿಕ ಮರಳಿ ನಡೆಯುತ್ತಿದೆ.
2014ರ ಜಿಮ್‌ಚಿಯೋನ್‌ನಲ್ಲಿ ನಡೆದ ಕೂಟದಲ್ಲಿ ಕಂಚು ಜಯಿಸಿದ್ದ 4ನೇ ಶ್ರೇಯಾಂಕದ ಸಿಂಧು 5ನೇ ಶ್ರೇಯಾಂಕದ ಚೀನದ ಜಿಯಾವೊ ಅವರನ್ನು 21-9, 13-21, 21-19 ಗೇಮ್‌ಗಳಿಂದ ಕೆಡಹಿದರು. ಈ ಹೋರಾಟ ಒಂದು ಗಂಟೆ, 16 ನಿಮಿಷಗಳವರೆಗೆ ಸಾಗಿತ್ತು.
ಯಮಾಗುಚಿ ಸೆಮಿ ಎದುರಾಳಿ
ಈ ವರ್ಷದ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸ್ವಿಸ್ ಓಪನ್ ಕೂಟದ ಪ್ರಶಸ್ತಿ ಗೆದ್ದಿರುವ 26ರ ಹರೆಯದ ಹೈದರಾಬಾದ್‌ನ ಸಿಂಧು ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಜಪಾನಿನ ಅಕಾನೆ ಯಮಾಗುಚಿ ಅವರನ್ನು ಎದುರಿಸಲಿದ್ದಾರೆ.
ವಿಶ್ವದ 7ನೇ ರ್‍ಯಾಂಕಿನ ಸಿಂಧು ಅವರು ಬಿಂಗ್ ಜಿಯಾವೊ ಅವರೆದುರು 7 ಜಯ-9 ಸೋಲಿನ ದಾಖಲೆ ಹೊಂದಿದ್ದಾರೆ. ಆದರೆ ಈ ಹಿಂದಿನ ಎರಡು ಮುಖಾಮುಖೀಗಳಲ್ಲಿ ಸಿಂಧು ಗೆದ್ದ ಸಾಧನೆ ಮಾಡಿದ್ದರು. ಟೋಕಿಯೊ ಗೇಮ್ಸ್‌ನಲ್ಲಿ ಸಿಂಧು ಈ ಹಿಂದೆ ಕೊನೆಯದಾಗಿ ಜಿಯಾವೊ ಅವರನ್ನು ಎದುರಿಸಿದ್ದರು. ಇಲ್ಲಿ ಸಿಂಧು ಕಂಚು ಸಾಧಿಸಿದ ಸಾಧನೆ ಮಾಡಿದ್ದರು.
ಆರಂಭದಲ್ಲಿ ಸಿಂಧು ಭರ್ಜರಿಯಾಗಿ ಆಡಿದರು. 11-2 ಮುನ್ನಡೆ ಸಾಧಿಸುವ ಮೂಲಕ ಅವರು ತನ್ನ ಉದ್ದೇಶ ಖಚಿತಪಡಿಸಿದರು. ಮೊದಲ ಗೇಮ್ ಕಳೆದುಕೊಂಡಿದ್ದ ಜಿಯಾವೊ ದ್ವಿತೀಯ ಗೇಮ್‌ನಲ್ಲಿ ತೀವ್ರ ಹೋರಾಡಿ ಮುನ್ನಡೆ ಸಾಧಿಸಿದರು. ಸಿಂಧು ಹಲವು ತಪ್ಪುಗಳನ್ನು ಮಾಡಿ ಹಿನ್ನೆಡೆ ಅನುಭವಿಸಿದರು. ಇದರ ಲಾಭ ಪಡೆದ ಜಿಯಾವೊ 19-12 ಮುನ್ನಡೆ ಸಾಧಿಸಿ ಗೇಮ್ ಗೆದ್ದರು.
ನಿರ್ಣಾಯಕ ಗೇಮ್‌ನಲ್ಲಿ ಇಬ್ಬರೂ ಸಮಬಲದ ಹೋರಾಟ ನೀಡಿದರು. ಒಂದು ಹಂತದಲ್ಲಿ 15-9ರಿಂದ ಮುನ್ನಡೆ ಸಾಧಿಸಿದ್ದ ಸಿಂಧು ಆಬಳಿಕ 18-16ಕ್ಕೆ ಕುಸಿದರು. ಅಂತಿಮವಾಗಿ 21-19 ಗೇಮ್‌ನಿಂದ ಗೆಲ್ಲಲು ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.