ಶೀಘ್ರ ಲೆಕ್ಕಪರಿಶೋಧನ ಮಾರ್ಗಸೂಚಿ: ಸಚಿವ ಎಸ್.ಟಿ. ಸೋಮಶೇಖರ್
Team Udayavani, Feb 15, 2022, 10:15 PM IST
ಬೆಂಗಳೂರು: ಸಹಕಾರ ಸಂಘಗಳ ಕ್ರಮಬದ್ಧ ಹಾಗೂ ಗುಣಮಟ್ಟದ ಲೆಕ್ಕಪರಿಶೋಧನೆಗೆ ಶೀಘ್ರದಲ್ಲೇ ಲೆಕ್ಕ ಪರಿಶೋಧನ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ತರಲಾಗುವುದು. ಎ. 1ರಿಂದ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುವುದು ಎಂದರು.
ಇಲಾಖೆಯ ಲೆಕ್ಕಪರಿಶೋಧಕರಿಂದಲೇ ಲೆಕ್ಕ ಪರಿಶೋಧನೆ ಮಾಡಿಸಲಾಗುತ್ತಿತ್ತು. ಖಾಸಗಿಯವರಿಗೆ ಅನುಮತಿ ಕೊಟ್ಟಿರಲಿಲ್ಲ. ಆದರೆ, ಇಲಾಖೆಯಲ್ಲಿ ಸಾಕಷ್ಟು ಲೆಕ್ಕಪರಿಶೋಧಕರ ಹುದ್ದೆಗಳು ಖಾಲಿ ಇರುವುದರಿಂದ ಕಾಲಮಿತಿಯಲ್ಲಿ ಲೆಕ್ಕಪರಿಶೋಧನೆಗಳು ನಡೆಯತ್ತಿರಲಿಲ್ಲ. ಹಾಗಾಗಿ, ಖಾಸಗಿಯವರಿಗೆ ಅನುಮತಿ ನೀಡಲಾಯಿತು. ಅದರಂತೆ 1,700 ಲೆಕ್ಕಪರಿಶೋಧಕರು ನೋಂದಾಯಿಸಿಕೊಂಡಿದ್ದಾರೆ.
ಖಾಸಗಿ ಲೆಕ್ಕಪರಿಶೋಧಕರು ಮಾಡುವ ಆಡಿಟ್‌ಗಳನ್ನು ಮರು ಲೆಕ್ಕಪರಿಶೋಧನೆಗೆ ಒಳಪಡಿಸಲಾಗುತ್ತದೆ. ಒಂದೊಮ್ಮೆ ತಪ್ಪು ಅಥವಾ ಅವ್ಯವಹಾರ ಕಂಡು ಬಂದರೆ ಅಂತಹ ಲೆಕ್ಕಪರಿಶೋಧಕರನ್ನು ನಿಷೇಧಿಸಲಾಗುತ್ತದೆ. ಈವರೆಗೆ 60 ಖಾಸಗಿ ಲೆಕ್ಕಪರಿಶೋಧಕರನ್ನು ಇಲಾಖೆಯಿಂದ ನಿಷೇಧಿಸಲಾಗಿದೆ. 11 ಸಹಕಾರ ಸಂಘಗಳ ಮರು ಲೆಕ್ಕಪರಿಶೋಧನೆ ನಡೆಯುತ್ತಿದೆ. ಖಾಲಿ ಇರುವ 402 ಲೆಕ್ಕಪರಿಶೋಧಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದ ಎಂದು ಸಚಿವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.