ಗಲಗಿನಗಟ್ಟಿ ರೈತ ಕುಲ ಈಗಲೂ ವಿಲ ವಿಲ; ಪಹಣಿಯಲ್ಲಿಲ್ಲ ಸ್ವಂತ ಹಕ್ಕು

ಕಾಲಾಂತರದಲ್ಲಿ ಊಳುವವನೆ ಹೊಲದೊಡೆಯ ಕಾನೂನು ಬಂದು ಹೋಯಿತು

Team Udayavani, Feb 10, 2022, 5:44 PM IST

ಗಲಗಿನಗಟ್ಟಿ ರೈತ ಕುಲ ಈಗಲೂ ವಿಲ ವಿಲ; ಪಹಣಿಯಲ್ಲಿಲ್ಲ ಸ್ವಂತ ಹಕ್ಕು

ಧಾರವಾಡ: ಈ ಊರಿನ ರೈತರು ಹೊಲದಲ್ಲಿ ಕೆಲಸ ಮಾಡುತ್ತಾರೆ, ಆದರೆ ಹೊಲ ಅವರ ಹೆಸರಿನಲ್ಲಿಲ್ಲ. ಪಹಣಿ ಪತ್ರಗಳ ತುಂಬಾ ಬರೀ ಸರ್ಕಾರಿ ಸ್ವಾಮ್ಯದ ದರ್ಬಾರು, ಇವರಿಗೆ ಬೆಳೆಹಾನಿ, ಬೆಳೆವಿಮೆ, ಪ್ರಧಾನ ಮಂತ್ರಿಗಳ ಆರ್ಥಿಕ ನೆರವು, ರಾಜ್ಯ ಸರ್ಕಾರದ ಕೃಷಿ ಸೌಲಭ್ಯಗಳು ಒಂದೂ ಸಿಕ್ಕುತ್ತಿಲ್ಲ. ಒಟ್ಟಿನಲ್ಲಿ ಇವರು ರೈತರಾದರೂ ಸರ್ಕಾರಿ ಜಮೀನಿನ ಸಹಕಾರಿ ಕೂಲಿ ಕಾರ್ಮಿಕರಷ್ಟೇ. ಹೌದು. ಇದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಲಗಿನಗಟ್ಟಿ ಗ್ರಾಮದ ರೈತರ ದುಸ್ಥಿತಿ.

1960ರ ದಶಕಕ್ಕಿಂತಲೂ ಮುಂಚೆಯೇ ಇಲ್ಲಿನ ಸರ್ಕಾರಿ ಭೂಮಿಯನ್ನು ರೈತರು ಸಹಕಾರಿ ಇಲಾಖೆ ಮೂಲಕ ನೋಂದಾಯಿಸಿಕೊಂಡು ಅದರಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ. 560 ಎಕರೆ ಜಮೀನಿನಲ್ಲಿ ಬಡ ರೈತರು ಉಳುಮೆ ಮಾಡುತ್ತಿದ್ದು, ಇಂದಿಗೂ ಆ ಜಮೀನುಗಳು ಅವರ ಹೆಸರಿಗೆ ವರ್ಗಾವಣೆ ಆಗುತ್ತಿಲ್ಲ.

ಕೊಡಗಿನ ಜುಮ್ಮಾಬಾನೆ, ಶಿವಮೊಗ್ಗದ ಅರಣ್ಯ ಭೂಮಿ ಸಕ್ರಮ, ಉತ್ತರ ಕರ್ನಾಟಕದ ಇನಾಂದಾರಿ ಭೂಮಿ ರೈತರಿಗೆ ವರ್ಗಾಯಿಸಲು ಆಗಾಗ ಸರ್ಕಾರ ಭೂ ಕಾಯಿದೆಗಳಿಗೆ ತಿದ್ದುಪಡಿ ತಂದು ಬಡ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದು, ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಗಲಗಿನಗಟ್ಟಿಯ ಈ ರೈತರ ಕಷ್ಟ ಇಂದಿಗೂ ಕೊನೆಯಾಗುತ್ತಲೇ ಇಲ.

ಸರ್ಕಾರಗಳು ರೈತರ ಅಭಿವೃದ್ಧಿಗೆ ಮತ್ತು ಕೃಷಿ ಉತ್ಪಾದನೆ ಹೆಚ್ಚಿಸಲು ಅನುಕೂಲವಾಗುವ ನೂರಾರು ಯೋಜನೆಗಳನ್ನು ಈವರೆಗೂ ಮಾಡಿಕೊಂಡು ಬಂದಿದೆಯಾದರೂ ಸರ್ಕಾರದ ಯಾವುದೇ ಸೌಲಭ್ಯ, ಕೃಷಿ ಯೋಜನೆಗಳು ಸಹಕಾರಿ ಭೂಮಿ ಹೊಂದಿದ ಈ ರೈತರಿಗೆ ಲಭ್ಯವಾಗುತ್ತಲೇ ಇಲ್ಲ. ಭತ್ತ ಹಾನಿಯಾದಾಗ ಇವರಿಗೆ ಸರ್ಕಾರ ಹಾನಿಯ ಹಣ ಕೊಡುವುದೇ ಇಲ್ಲ. ಹೊಲದಲ್ಲಿನ ಬೆಳೆ ಸುಟ್ಟರೆ ಇವರಿಗೆ ತಕ್ಷಣಕ್ಕೆ ಪರಿಹಾರವೇ ಸಿಕ್ಕಲ್ಲ. ಇನ್ನು
ಬೆಳೆವಿಮೆಯಂತೂ ಇವರಿಗೆ ಕನಸಿನ ಮಾತು. ಪ್ರಧಾನಿ ನರೇಂದ್ರ ಮೋದಿ ಅವರ ಬಹು ಮಹತ್ವಾಕಾಂಕ್ಷಿ ಯೋಜನೆ ವರ್ಷಕ್ಕೆ 6 ಸಾವಿರ ರೂ. ನೀಡುವ ಹಣ ಈ ರೈತರಿಗೆ ಲಭಿಸುತ್ತಲೇ ಇಲ್ಲ. ಅದರಂತೆ ರಾಜ್ಯ ಸರ್ಕಾರದ 4 ಸಾವಿರ ರೂ. ಕೂಡ ಇಲ್ಲ.ಇದು ಹೋಗಲಿ ಗ್ರಾಪಂಗಳಲ್ಲಿನ ನರೇಗಾ ಯೋಜನೆ ಅಡಿಯ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಕಿರು ಸೇತುವೆಗಳ ನಿರ್ಮಾಣ ಯಾವ ಸೌಲಭ್ಯವೂ ಇವರಿಗೇ ಇಲ್ಲವಾಗಿದೆ.

ಶೆಟ್ಟರ ಪ್ರಯತ್ನ
ಈ ವಿಚಾರವನ್ನು ಗಲಗಿನಗಟ್ಟಿ ಗ್ರಾಮಸ್ಥರು 2012ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಧಾರವಾಡ ಜಿಲ್ಲೆಯವರೇ ಆದ ಜಗದೀಶ ಶೆಟ್ಟರ ಅವರ ಗಮನಕ್ಕೆ ತಂದಿದ್ದರು. ಸಿಎಂ ಶೆಟ್ಟರ ಅವರು ಕೂಡ ಆಗ ಈ ವಿಚಾರವನ್ನು ಕ್ಯಾಬಿನೆಟ್‌ ಮುಂದಿಟ್ಟು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಕೂಡ ಮಾಡಿದ್ದರು. ಆದರೆ ಸಹಕಾರ ಕಾಯಿದೆ ಮತ್ತು ಕೃಷಿ ಕಾಯಿದೆಗಳಲ್ಲಿನ ತಿದ್ದುಪಡಿ ಇದಕ್ಕೆ ಅನಿವಾರ್ಯವಾಗಿತ್ತು. ಅಷ್ಟರಲ್ಲಿ ಶೆಟ್ಟರ ಸಿಎಂ ಸ್ಥಾನದಿಂದ ಕೆಳಗಿಳಿದರು.

ಮಾಜಿ ಸಚಿವ ಸಂತೋಷ್‌ ಲಾಡ್‌ ಕೂಡ ಕಲಘಟಗಿ ಶಾಸಕರಾಗಿದ್ದಾಗ ಅವರ ವ್ಯಾಪ್ತಿಯ ಗಲಿಗಿನಗಟ್ಟಿಯ ಗ್ರಾಮಸ್ಥರು ಈ ಬಗ್ಗೆ ಮನವಿ ಮಾಡಿದ್ದರು. ಅವರು ತಮ್ಮ ಕೈಲಾದ ಪ್ರಯತ್ನ ಮಾಡಿ ಕಾನೂನು ತೊಡಕು ಬಿಡಿಸಲು ಯತ್ನಿಸಿದರು. ಈಗಿನ ಶಾಸಕರಾಗಿರುವ ಸಿಎಂ ನಿಂಬಣ್ಣವರ ಕೂಡ ಇದಕ್ಕೆ ಪ್ರಯತ್ನ ನಡೆಸಿದ್ದಾರೆ.

ಇದೀಗ ಹುಬ್ಬಳ್ಳಿಯವರೇ ಆದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ವಿಧಾನ ಪರಿಷತ್ತಿಗೆ ಧಾರವಾಡ ಜಿಲ್ಲಾ ಕ್ಷೇತ್ರದಿಂದಲೇ ಆಯ್ಕೆಯಾಗಿದ್ದ ಅವರಿಗೆ ಗಲಗಿನಗಟ್ಟಿ ಗ್ರಾಮ ಕೂಡ ಪರಿಚಯವೇ. ಅದರಂತೆ ಈ ಗ್ರಾಮದ ಪಹಣಿ ಸಮಸ್ಯೆ ಕೂಡ ಪರಿಚಯ. ಹೀಗಾಗಿ ಸಿಎಂ ಬೊಮ್ಮಾಯಿ ಅವರು ಇತ್ತ ಗಮನಹರಿಸಿ ತಮ್ಮ ಸಮಸ್ಯೆಗೆ ಪರಿಹಾರ ನೀಡಲಿ ಎನ್ನುವ ಮನವಿ ಗ್ರಾಮಸ್ಥರದ್ದಾಗಿದೆ. ಸಕಾರಕ್ಕೆ ನೂರಾರು ಬಾರಿ ಗ್ರಾಮಸ್ಥರು
ಮನವಿ ಕೊಟ್ಟು ಕೊಟ್ಟು ಸುಸ್ತಾಗಿ ಹೋಗಿದ್ದಾರೆ.

ಏನಿದು ಸೊಸೈಟಿ ಚೇರ್ಮನ್‌?
ಗಲಗಿನಗಟ್ಟಿ ಸಾವಿರ ಜನಸಂಖ್ಯೆಗೂ ಕಡಿಮೆ ಇರುವ ಹಳ್ಳಿ. ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಬಿಟ್ಟರೆ ಈ ಊರಿಗೆ ಸರ್ಕಾರಿ ಸೌಲಭ್ಯಗಳು ಅಷ್ಟಕ್ಕಷ್ಟೇ. ಇಂತಿಪ್ಪ ಕಾಡಿಗೆ ಅಂಟಿಕೊಂಡಿರುವ ಹಳ್ಳಿಯ ಭೂಮಿಯನ್ನು 1964ಕ್ಕೂ ಮುಂಚೆಯೇ ಕೃಷಿ ಸಹಕಾರ ಸಂಘ ಸ್ಥಾಪಿಸಿ ಸಂಘಕ್ಕೆ ಪಡೆದು ಉಳುಮೆ ಮಾಡಿ ರೈತರು ಬದುಕು ಕಟ್ಟಿಕೊಂಡಿದ್ದರು.ಕಾಲಾಂತರದಲ್ಲಿ ಊಳುವವನೆ ಹೊಲದೊಡೆಯ ಕಾನೂನು ಬಂದು ಹೋಯಿತು. ಸೊಸೈಟಿ ಭೂಮಿ ಸತತ ದಶಕಗಳ ಕಾಲ ಉಳುಮೆ ಮಾಡಿದರೂ ರೈತರ ಪರ ಆಗಲೇ ಇಲ್ಲ. ಇಂದಿಗೂ ಅವರ ಪಹಣಿ ಪತ್ರಗಳಲ್ಲಿ ಸರ್ಕಾರಿ ಜಮೀನು ಎಂದೇ ಉಲ್ಲೇಖವಾಗುತ್ತಿದ್ದು, ಈ ಭೂಮಿಯ ಮೇಲೆ ದಶಕಗಳ ಕಾಲ ಉಳುಮೆ ಮಾಡಿದ ರೈತರ ಹೆಸರು ಸ್ವಂತ ಹಕ್ಕು ಉಲ್ಲೇಖವಾಗುತ್ತಲೇ ಇಲ್ಲ.

ಇಚ್ಛಾಶಕ್ತಿ ಕೊರತೆ
ಸರ್ಕಾರ ರಾಜ್ಯದ ಪ್ರತಿಯೊಬ್ಬ ಪಹಣಿದಾರನಿಗೂ ಮನೆ ಮನೆಗೆ ಹೋಗಿ ಕಂದಾಯ ಇಲಾಖೆಯ ಪಹಣಿ ಪತ್ರ, ಜಾತಿ, ಆದಾಯ ಪ್ರಮಾಣ ಪತ್ರ ಅಷ್ಟೇ ಅಲ್ಲ ನಕ್ಷೆಗಳನ್ನು ಸಹ ನೀಡುತ್ತಿದೆ. ಆದರೆ 50 ವರ್ಷಗಳ ಕಾಲ ಭೂಮಿಯನ್ನು ಉಳುಮೆ ಮಾಡಿದ್ದರೂ ಇವರ ಪಹಣಿ ಪತ್ರಗಳಲ್ಲಿ ಇಂದಿಗೂ ಮಾಲೀಕರು ಚೇರ್ಮನ್‌ ಗಲಗಿನಗಟ್ಟಿ ಫಾರ್ಮಿಂಗ್‌ ಕೋ ಸೊಸೈಟಿ ಎಂದೇ ಇದೆ. ರಾಜಕೀಯ ಇಚ್ಛಾಶಕ್ತಿ ಇದ್ದರೆ ಸರ್ಕಾರಕ್ಕೆ ಇದೇನು ದೊಡ್ಡ ಕೆಲಸವಲ್ಲ. ತಾಂಡಾಗಳನ್ನೇ ಗ್ರಾಮಗಳನ್ನಾಗಿ ಮಾಡುವ, ಜುಮ್ಮಾಬಾನೆ,ಅರಣ್ಯ ಭೂಮಿ ಸಕ್ರಮ, ಇನಾಂ ಭೂಮಿ ಮರು ವಿತರಣೆಯಂತಹ ಕಾರ್ಯ ಸರ್ಕಾರದಿಂದ ನಡೆದಿರುವಾಗ ಈ ಸಮಸ್ಯೆಗೂ ಪರಿಹಾರ ಸಿಕ್ಕಬಹುದು ಎನ್ನುವ ಆಶಾಭಾವದಲ್ಲಿದ್ದಾರೆ ಈ ರೈತರು.

ನಮ್ಮ ಅಜ್ಜ, ಮುತ್ತಜ್ಜ ಮುಗಿದು ತಂದೆಯವರ ಕಾಲವೂ ಮುಗಿಯಿತು. ಇದೀಗ ನಾವು ಕೃಷಿ ಮಾಡಿ ಜೀವನ ಮಾಡುತ್ತಿದ್ದೇವೆ. ನಮಗೂ ಇದು ಸ್ವಂತ ಜಮೀನು ಎನ್ನಿಸುತ್ತಲೇ ಇಲ್ಲ. ಯಾವಾಗ ಸರ್ಕಾರ ಇದನ್ನು ಕಿತ್ತುಕೊಳ್ಳುತ್ತದೆ ಎನ್ನುವ ಆತಂಕ ಕಾಡುತ್ತಿದೆ.
ಶಿವಾನಂದ ಗೌಳಿ, ಗಲಗಿನಗಟ್ಟಿ ಯುವ ರೈತ.

ಡಾ|ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.