ಮಕ್ಕಳ ಸಂಗಮದ ಕಾರ್ಯಕ್ರಮದಲ್ಲಿ ಸಾಧಕರ ಭಾವಚಿತ್ರಗಳ ಅನಾವರಣ
Team Udayavani, Jan 18, 2022, 6:46 PM IST
ರಬಕವಿ-ಬನಹಟ್ಟಿ : ವಿಶ್ವವಿಖ್ಯಾತ ವೈದ್ಯ ಸಾಹಿತಿ ಡಾ. ಸ. ಜ. ನಾಗಲೋಟಿಮಠ ಸಾಹಿತ್ಯಭವನದ ಸಾಧಕರ ಗೋಡೆಗೆ ಕನ್ನಡ ಏಳಿಗೆಗಾಗಿ ದುಡಿದ ಚನಮಲ್ಲಪ್ಪ ಅಬಕಾರ ಮತ್ತು ಡಾ. ಸಿದ್ದಮಲ್ಲಪ್ಪ ಬಾವಲತ್ತಿ ಅವರ ಭಾವಚಿತ್ರಗಳನ್ನು ಮಂಗಳವಾರ ಬನಹಟ್ಟಿಯ ಡಾ. ಸ. ಜ. ನಾಗಲೋಟಿಮಠ ಸಾಂಸ್ಕೃತಿಕ ಸಭಾ ಭವನದಲ್ಲಿ ಶಾಸಕ ಸಿದ್ದು ಸವದಿ ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಡು ನುಡಿಗಾಗಿ ಸಮಾಜ ಕಾರ್ಯಗಳಿಗಾಗಿ ಶ್ರಮಿಸಿದವರನ್ನು ಯುವ ಪೀಳಿಗೆಗೆ ಪರಿಚಯಿಸುವಂತಹ ಕೆಲಸದಲ್ಲಿ ತೊಡಗಿಕೊಂಡಿರುವ ಮಕ್ಕಳ ಸಂಗಮದ ಕಾರ್ಯ ಅಭಿನಂದನಾರ್ಹವಾದುದು ಎಂದರು.
ಮಕ್ಕಳ ಸಂಗಮದ ಅಧ್ಯಕ್ಷ ಜಯವಂತ ಕಾಡದೇವರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತ ಕೋರಿದರು. ಸಾಹಿತಿ ಎಂ. ಎಂ. ಜವಳಗಿ ಕಾರ್ಯಕ್ರಮ ನಿರೂಪಿಸಿದರು. ತಮ್ಮಣ್ಣಪ್ಪ ಚ. ಅಬಕಾರ ವಂದಿಸಿದರು.
ಕಾಯಕ್ರಮದಲ್ಲಿ ಮಲಕಪ್ಪ ಹಳಿಂಗಳಿ, ಶ್ರೀಶೈಲ ಧಬಾಡಿ, ಪ್ರಕಾಶ ಬೆಲ್ಲಂ, ಕಿರಣ ಆಳಗಿ, ರಾಜು ಬಾಣಕಾರ, ಹೂಮಾಯೂನ ಮುಲ್ಲಾ, ಸುರೇಶ ಚಿಂಡಕ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.