ರಬಕವಿ-ಬನಹಟ್ಟಿ: ಜಗದಾಳ ರೈತ ಬೆಳೆದ ಬಾಳೆಹಣ್ಣುಇರಾನ್‌ ದೇಶಕ್ಕೆ ರಫ್ತು!

ಜೈನ ಕಂಪನಿಯ ಜಿ-9 ತಳಿಯ 7200 ಬಾಳೆ ಗಿಡ ನಾಟಿ

Team Udayavani, Oct 30, 2024, 3:49 PM IST

ರಬಕವಿ-ಬನಹಟ್ಟಿ: ಜಗದಾಳ ರೈತನ ಬಾಳೆಹಣ್ಣು ಇರಾನ್‌ ದೇಶಕ್ಕೆ ರಫ್ತು

ರಬಕವಿ-ಬನಹಟ್ಟಿ: ತಾಲೂಕಿನ ಜಗದಾಳ ಗ್ರಾಮದ ರೈತ ಶ್ರೀನಾಥ ದೇವರಾಜ ರಾಠಿ ನಾಲ್ಕು ಎಕರೆ ತೋಟದಲ್ಲಿ ಬೆಳೆದ ಬಾಳೆ
ಹಣ್ಣುಗಳು ಇರಾನ್‌ ದೇಶಕ್ಕೆ ರಫ್ತಾಗುತ್ತಿವೆ. ಹೌದು. ರೈತ ದೇವರಾಜ ರಾಠಿಯವರ ಮಗ, ಕೃಷಿಯಲ್ಲಿ ಬಿಎಸ್‌ಸಿ
ಪದವೀಧರರಾಗಿರುವ ಶ್ರೀನಾಥ ತಂದೆಯ ಮಾರ್ಗದರ್ಶನದಲ್ಲಿ ನಾಲ್ಕು ಎಕರೆಯಲ್ಲಿ ಜೈನ ಕಂಪನಿಯ ಜಿ-9 ತಳಿಯ 7200 ಬಾಳೆ ಗಿಡ ಹಚ್ಚಿದ್ದು, ಒಂದು ಗಿಡಕ್ಕೆ ಅಂದಾಜು 28 ರಿಂದ 30 ಕೆ.ಜಿಯಷ್ಟು ಬಾಳೆ ಹಣ್ಣು ಬರುತ್ತದೆ. ಸದ್ಯ ಒಂದು ಕೆ.ಜಿಗೆ 23ರೂ.ಗಳಂತೆ ಖರೀದಿಸುತ್ತಿದ್ದಾರೆ. ಒಂದು ಸಸಿಗೆ ಇಲ್ಲಿಯವರೆಗೆ 150 ರಿಂದ 200 ಖರ್ಚು ಮಾಡಿದ್ದಾರೆ.

ಮಧ್ಯಸ್ಥಗಾರರೇ ಬಾಳೆ ಹಣ್ಣಿನ ಗೊನೆಗಳನ್ನು ಕಡಿದು ತಂದು ಅವುಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿರುವುದರಿಂದ ನಮಗೆ ಮಾರುಕಟ್ಟೆಯ ಯಾವುದೆ ತೊಂದರೆ ಇಲ್ಲ ಎನ್ನುತ್ತಾರೆ ಶ್ರೀನಾಥ ರಾಠಿ.

ನೂತನ ಪಟ್ಟಾ ಪದ್ಧತಿಯಲ್ಲಿ ಬಾಳೆ ಹಣ್ಣು ಬೆಳೆಯಲಾಗಿದೆ. ಸಾಮಾನ್ಯವಾಗಿ ಒಂದು ಎಕರೆಯಲ್ಲಿ 1450 ಗಿಡ ಬೆಳೆಯುತ್ತಾರೆ. ಅದರೆ ನಾವು ಪಟ್ಟಾ ಪದ್ಧತಿಯಲ್ಲಿ 1800 ಸಸಿ ನಾಟಿ ಮಾಡಿದ್ದೇವೆ. ಇದರಿಂದ ಬಾಳೆ ಗಿಡಗಳು ದಟ್ಟವಾಗಿ ಬೆಳೆಯುತ್ತದೆ. ಇಲ್ಲಿ ಹಣ್ಣಿನ ಗೊನೆಗಳಿಗೆ ಬಿಸಿಲು ದೊರೆಯದೆ ಇರುವುದರಿಂದ ಬಾಳೆ ಹಣ್ಣುಗಳಿಗೆ ಸಾಕಷ್ಟು ಹೊಳಪು ಬರುತ್ತದೆ. ನೂತನ ಪದ್ಧತಿಯಲ್ಲಿ ಬೆಳೆದಿದ್ದು, ನಮ್ಮ ಪ್ರಯತ್ನ ಯಶಸ್ವಿಯಾಗಿದೆ. ನಾನು ಬೆಳೆದ ಬೆಳೆ ಇಂದು ಇರಾನ್‌ ದೇಶಕ್ಕೆ ರಫ್ತು ಆಗುತ್ತಿರುವುದು ಬಹಳಷ್ಟು ಖುಷಿ ತಂದಿದೆ ಎನ್ನುತ್ತಾರೆ ಶ್ರೀನಾಥ.

ಸುತ್ತಮುತ್ತಲಿನ ರೈತರಿಗೆ ಮಾರ್ಗದರ್ಶನ
ದೇವರಾಜ ರಾಠಿಯವರು ಕೃಷಿಯಲ್ಲಿ ತಾವೊಬ್ಬರೇ ಬೆಳೆಯದೆ ಸುತ್ತಮುತ್ತಲಿನ ರೈತರಿಗೂ ಸಹಾಯ-ಸಹಕಾರ ನೀಡುತ್ತ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಹತ್ತಾರು ರೈತರು ಬೇರೆ ಬೇರೆ ಬೆಳೆ ಬೆಳೆದು ಲಾಭ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.

ಶ್ರೀನಾಥ ಅವರು ಬೆಳೆದ ಬಾಳೆ ಹಣ್ಣಿನ ಗೊನೆಗಳನ್ನು ಮುಂಬೈನಿಂದ ಬಂದ ಕಾರ್ಮಿಕರು ಕಡಿದು ತಂದು ಅವುಗಳನ್ನು
ಶುಚಿಗೊಳಿಸಿ, ನಂತರ ಪ್ಲಾಸ್ಟಿಕ್‌ ಪೇಪರ್‌ನಲ್ಲಿ ಪ್ಯಾಕ್‌ ಮಾಡಿ ಇರಾನ್‌ ದೇಶಕ್ಕೆ ಕಳುಹಿಸುತ್ತಾರೆ.

■ ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.