ಲಿಲ್ಲಿ ಆಗ್ತಾರಂತೆ ರಚಿತಾ
Team Udayavani, May 28, 2020, 4:28 AM IST
ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಲಿಲ್ಲಿ ಆಗಲು ಹೊರಟಿದ್ದಾರೆ. ನಿರ್ದೇಶಕ ವಿಜಯ್ ಎಸ್ ಗೌಡ ಈ ವಿಚಾರ ಸ್ಪಷ್ಟಪಡಿಸಿದ್ದು ಅವರು ಸೈಕಲಾಜಿಕಲ್ ಮಿಸ್ಟ್ರಿ ಥ್ರಿಲ್ಲರ್ ಮೂಲಕ ನಿರ್ದೇಶಕ ಪಟ್ಟವನ್ನಲಂಕರಿಸಲು ಸಿದ್ಧವಾಗುತ್ತಿದ್ದಾರೆ. ಲಿಲ್ಲಿ ಚಿತ್ರದ ಅಭಿನಯಿಸಲು ರಚಿತಾ ರಾಮ್ ಒಪ್ಪಿದ್ದಾರೆ ಎಂದು ಹೇಳಿರುವ ನಿರ್ದೇಶಕ ರಾಜ್ ಫಿಲ್ಮ್ಸ್ ಮತ್ತು ಬೌನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಲಿಲ್ಲಿಯನ್ನು ನಾಗರಾಜ್ ಮತ್ತು ಸುಬ್ರಮಣಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಕಥೆ, ಚಿತ್ರಕಥೆ ವಿಜಯ್ ಅವರದಾಗಿದ್ದು ಯುವ ಪೀಳಿಗೆಗೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳು ಮತ್ತು ಮಕ್ಕಳ ನಿರ್ಲಕ್ಷ್ಯ ಮತ್ತು ಮಕ್ಕಳ ಮೇಲೆ ತಂತ್ರಜ್ಞಾನದ ಪರಿಣಾಮದ ಬಗ್ಗೆ ಬೆಳಕು ಚೆಲ್ಲುವ ಈ ವಿಷಯ ಸ್ಯಾಂಡಲ್ ವುಡ್ ನಲ್ಲಿ ಹಿಂದೆಂದೂ ಬಂದಿರಲಿಲ್ಲ ಎಂದಿದ್ದಾರೆ. ಎನ್‌ಆರ್‌ಐ ಮನಶಾಸ್ತ್ರಜ್ಞ ಡಾ.ಮಹಿ ಪಾತ್ರದಲ್ಲಿ ರಚಿತಾ ನಟಿಸಲಿದ್ದಾರೆ.ಇದು ಒಂದು ಆಸಕ್ತಿದಾಯಕ ಪಾತ್ರವಾಗಿದೆ.
ಅಷ್ಟೇ ಅಲ್ಲದೆ ಮಹಿಳಾ ಕೇಂದ್ರಿತ ಚಿತ್ರವೊಂದರಲ್ಲಿ ರಚಿತಾ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರದ ಶೂಟಿಂಗ್ ನಡೆವ ಸ್ಥಳದ ಕುರಿತಂತೆ ಸಹ ನಿರ್ದೇಶಕರು ಇದಾಗಲೇ ತೀರ್ಮಾನ ತೆಗೆದುಕೊಂಡಿದ್ದಾರೆ. ಕಲಾ ನಿರ್ದೇಶಕ ಸತೀಶ್ ರಚಿಸಿದ ಸೆಟ್ ನಲ್ಲಿ ಮೊದಲು ಶೂಟಿಂಗ್ ನಡೆಯಲಿದೆ. ಏತನ್ಮಧ್ಯೆ ನಟಿ ರಚಿತಾ ರಾಮ್ “100′ ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಪ್ರೇಮ್ ಅವರ “ಏಕ್ ಲವ್ ಯಾ’ ಚಿತ್ರದ ಎರಡು ಹಾಡಿನ ಚಿತ್ರೀಕರಣವನ್ನೂ ಮುಗಿಸಬೇಕಿದೆ.
ನಾವು ಶೆಡ್ನೂಲ್ ಪ್ರಕಾರ ಕೆಲಸ ಮಾಡುತ್ತಿದ್ದೇವೆ ಮತ್ತು ಅದನ್ನು ಒಂದೇ ಟೇಕ್ ನಲ್ಲಿ ಚಿತ್ರೀಕರಿಸಲು ಯೋಜಿಸಿದ್ದೇವೆ. ದಿನಾಂಕಗಳನ್ನು ಅಂತಿಮಗೊಳಿಸಲಾಗುತ್ತಿದೆವಿಜಯ್ ಹೇಳುತ್ತಾರೆ. ಲಿಲ್ಲಿ ತಂಡದಲ್ಲಿ ರಂಗಿತರಂಗ ಖ್ಯಾತಿಯ ಛಾಯಾಗ್ರಾಹಕ ವಿಲಿಯಂ ಡೇವಿಡ್ ಮತ್ತು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಬೀರ್‌ಬಲ್ ಚಿತ್ರಗಳಲ್ಲಿ ಕೆಲಸ ಮಾಡಿದ ಎಡಿಟರ್ ಶ್ರೀಕಾಂತ್ ಶ್ರಾಫ್ ಸೇರಿದ್ದಾರೆ. ಚಿತ್ರಕ್ಕೆ ವೀರೇಶ್ ಎಸ್ ಗೌಡ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.