ರಾಗಿ ಬೆಳೆಕಟಾವಿಗೆ ಮಳೆ ಅಡ್ಡಿ: ಬೆಳೆಗಾರರ ಸಂತಸಕಸಿದ ಸೋನೆ ಮಳೆ
Team Udayavani, Dec 10, 2020, 3:14 PM IST
ತಿಪಟೂರು: ತಾಲೂಕಿನಾದ್ಯಂತ ಬೀಳುತ್ತಿರುವ ಮಳೆಯಿಂದಾಗಿ ಈ ಬಾರಿ ರಾಗಿ ಬೆಳೆದ ರೈತರ ಬದುಕು ಅತಂತ್ರವಾಗಿದೆ. ಬೆಳೆ
ಬಿತ್ತಿದಂದಿನಿಂದಲೂ ಹಚ್ಚ ಹಸಿರಾಗಿ ಉತ್ಕೃಷ್ಟವಾಗಿ ಬೆಳೆದು ಉತ್ತಮ ತೆನೆಗಟ್ಟಿನೊಂದಿಗೆ ರೈತರ ಮೊಗದಲ್ಲಿ ಸಂತಸ
ಮೂಡಿಸಿತ್ತು. ಬಂಪರ್ ಬೆಳೆಯಾಗಿ ಬೆಳೆದು ಬಂದಿದ್ದ ರಾಗಿ ಪೈರಿನ ಕಟಾವಿನ ಈ ವೇಳೆ ಕಳೆದ 10-15ದಿನಗಳಿಂದ ಬರುತ್ತಿರುವ ಮಳೆಗೆ ರಾಗಿ ಬೆಳೆ ನೆಲಕ್ಕಚ್ಚಿದ್ದು ಕಟಾವು ಮಾಡಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ.
ಮೇಲ್ನೋಟಕ್ಕೆ ರೈತನ ಕಣಜ ತುಂಬ ಬೇಕಾಗಿದ್ದ ರಾಗಿ, ಬಣವೆಗೆ ಸೇರಬೇಕಾಗಿದ್ದ ರಾಗಿ ಹುಲ್ಲು ನೋಡ ನೋಡುತ್ತಲೇ ಕೊಯ್ಲಿಗೆ ಬಂದ ಈ ಸಂದರ್ಭದಲ್ಲೇ ಮಳೆಗೆ ನೆನೆದು ನೆಲಕ್ಕುರುಳಿದೆ. ಕಟಾವು ಮಾಡಬೇಕಾಗಿರುವ ರಾಗಿ ಬೆಳೆ ಅಡ್ಡಾದಿಡ್ಡಿಯಾಗಿ ಬಿದ್ದಿರುವುದರಿಂದ ಕಟಾವು ಮಾಡುವುದು ಬಹಳ ಕಷ್ಟವಾಗಿದೆ. ಅಲ್ಲದೇ, ತೆನೆಗಳೆಲ್ಲಾ ಮಳೆ ನೀರಿಗೆ ಕರಗಿ ದಂತಾಗಿ ಕಳಚಿ ಬೀಳುತ್ತಿದ್ದು ರಾಗಿ ಕಾಳುಗಳು ಮತ್ತೆ ಭೂಮಿಗೇ ಉದುರಿ ಮೊಳಕೆಯೊಡೆಯುತ್ತಿರುವುದು ಆತಂಕ ತಂದಿದೆ.
ಇದನ್ನೂ ಓದಿ:ಗೋ ಹತ್ಯೆ ನಿಷೇಧ ಸರಿ, ಆದರೆ ಈ ಸಮಸ್ಯೆಗಳಿಗೆ ಪರಿಹಾರವೇನು? ಕುಮಾರಸ್ವಾಮಿ
ಕೃಷಿ ಯಾವತ್ತೂ ಲಾಭದಾಯಕವಾಗಲಾರದು ಎಂಬುದನ್ನು ರಾಗಿ ಬೆಳೆ ಮತ್ತೆ ಮತ್ತೆ ಸಾಬೀತುಪಡಿಸುವಂತಿದ್ದು ಕೃಷಿ ಕಾಯಕಕ್ಕೆ ಮತ್ತಷ್ಟು ಹೊಡೆತ ಬೀಳಬಹುದೇನೋ. ಸಾವಿರಾರು ರೂಪಾಯಿ ಸಾಲ ಮಾಡಿಕೊಂಡು ಉಳುಮೆ, ಬೀಜ-ಗೊಬ್ಬರ,
ಕಳೆ ತೆಗೆಯುವುದು ಸೇರಿದಂತೆ ಬೆಳೆಯನ್ನು ಹಗಲಿರುಳು ಜೋಪಾನ ಮಾಡಿದ್ದ ರೈತನ ಕಣ್ಣಲ್ಲಿ ನೀರು ತುಂಬಿಕೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.