ರೈಲ್ವೇ ಮೇಲ್ಸೇತುವೆ, ರಸ್ತೆ ವಿಸ್ತರಣೆ; ಇಲ್ಲಿನ ಬಹುಕಾಲದ ಬೇಡಿಕೆ


Team Udayavani, Aug 7, 2021, 6:10 AM IST

HALE

ಜನ, ವಾಹನ ಸಂಚಾರಕ್ಕೆ ರಸ್ತೆ, ಮೇಲ್ಸೇತುವೆ ಸೌಲಭ್ಯ ಅತೀ ಅಗತ್ಯ. ಆದರೆ ಹಳೆಯಂಗಡಿ ಗ್ರಾಮದಲ್ಲಿ ಇದೇ ಪ್ರಮುಖ ಸಮಸ್ಯೆಯಾಗಿ ಬಹುಕಾಲದಿಂದ ಕಾಡುತ್ತಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಲಿ ಎಂದು “ಉದಯವಾಣಿ ಸುದಿನ’ದ ಇಂದಿನ “ಒಂದು ಊರು – ಹಲವು ದೂರು’ ಸರಣಿಯಲ್ಲಿ ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ.

ಹಳೆಯಂಗಡಿ: ಬೆಳೆಯುತ್ತಿರುವ ಪಟ್ಟಣದ ಸಾಲಿನಲ್ಲಿರುವ ಹಳೆಯಂಗಡಿ ಗ್ರಾ.ಪಂ.ನ ಹಳೆಯಂಗಡಿ ಗ್ರಾಮದಲ್ಲಿ ಪ್ರಮುಖ ಸಮಸ್ಯೆ ಎಂದರೆ ಇಲ್ಲಿನ ಇಂದಿರಾನಗರದ ರೈಲ್ವೇ ಗೇಟ್‌ನಲ್ಲಿ ಅಗತ್ಯವಾಗಿರುವ ಮೇಲ್ಸೇತುವೆ ಹಾಗೂ ಆದೇ ರಸ್ತೆಯ ವಿಸ್ತರಣೆ ಆಗಬೇಕಿರುವುದಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರಿಂದ ಪಕ್ಷಿಕೆರೆಯಾಗಿ ಕಿನ್ನಿ ಗೋಳಿ, ಕಟೀಲು, ಮೂಡುಬಿದಿರೆಯನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಹೆದ್ದಾರಿಯಿಂದ ಇಂದಿರಾನಗರದ ತಿರುವಿನ ವರೆಗೆ ಸುಮಾರು 500 ಮೀ. ಅಂತರದಲ್ಲಿ ಇರುವ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾತ್ರ ಸಾಗಿದ್ದು, ಈ ವರೆಗೆ ಸೂಕ್ತ ವ್ಯವಸ್ಥೆ ನಡೆದಿಲ್ಲ. ಈ ರಸ್ತೆಯು ರೈಲ್ವೇ ಗೇಟ್‌ನ ವರೆಗೆ ವಿಸ್ತರಣೆಯಲ್ಲಿದ್ದರೂ ಅನಂತರ ಖಾಸಗಿ ಜಮೀನು ಸಮಸ್ಯೆಯಿಂದ ಹೆದ್ದಾರಿಯ ಸಂಪರ್ಕದವರೆಗೆ ಕಿರಿದಾಗಿದೆ. ಈ ರಸ್ತೆಯಲ್ಲಿ ಅತೀ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಇಕ್ಕೆಲಗಳಲ್ಲಿ ಚರಂಡಿ ಸಮಸ್ಯೆಯೂ ಕಂಡು ಬಂದಿದೆ.

ಮೇಲ್ಸೇತುವೆ ನಿರ್ಮಾಣಕ್ಕೆ ಕೊಂಕಣ ರೈಲ್ವೇ ಇಲಾಖೆಯು ಸಜ್ಜಾಗಿದ್ದರೂ ಶೇ. 50 ಪಾಲುದಾರಿಕೆಯ ಯೋಜನೆ ಯನ್ನು ಹೊಂದಿರುವ ರಾಜ್ಯ ಸರಕಾರವು ಜಮೀನು ಸಹಿತ ಅನುದಾನ ನೀಡುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈಗಾ ಗಲೇ ಐದು ಬಾರಿ ಯೋಜನೆಯನ್ನು ರೂಪಿಸಿದ್ದರೂ ಅದು ಕಾರ್ಯ ರೂಪಕ್ಕೆ ಬಂದಿಲ್ಲ. ಅದರೂ ಇನ್ನೂ ಆಶಾದಾಯಕವಾಗಿ ಜನಪ್ರತಿನಿಧಿಗಳ ಮೇಲೆ ಜನರು ವಿಶ್ವಾಸವಿರಿಸಿದ್ದಾರೆ.

ಇದನ್ನೂ ಓದಿ:ಅಗ್ನಿಪರೀಕ್ಷೆ ಎದುರಿಸಿ ಬಂದಿದ್ದೇನೆ: ಭಾವುಕರಾಗಿ ನುಡಿದ ಸಚಿವೆ ಶಶಿಕಲಾ ಜೊಲ್ಲೆ

ಈ ರೈಲ್ವೇ ಗೇಟ್‌ನಲ್ಲಿ ಗೇಟ್‌ ಬಿದ್ದರೆ ಸುಮಾರು 10ರಿಂದ 15 ನಿಮಿಷಗಳಿರುತ್ತವೆ. ಖಾಸಗಿ ಬಸ್‌ಗಳ ಸಮಯ ಪರಿಪಾಲನೆ ಸಹಿತ ಹತ್ತಿರದಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳು ಸಹ ತೀವ್ರ ತೊಂದರೆ ಅನುಭವಿಸಿದ್ದಾರೆ. ತುರ್ತಾಗಿ ತೆರಳಬೇಕಾದಾಗ ಗೇಟ್‌ ಬಿದ್ದಲ್ಲಿ ರಸ್ತೆಯಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಇದೆ.

ಇತರ ಸಮಸ್ಯೆಗಳೇನು?
– ಹಳೆಯಂಗಡಿಯ ಹೆದ್ದಾರಿ, ಸಾಗ್‌, ಇಂದಿರಾನಗರದಲ್ಲಿ ತ್ಯಾಜ್ಯ ಸಂಗ್ರಹ ಸಮಸ್ಯೆ ಎದ್ದುಕಾಣುತ್ತಿದೆ.
– ಸಾಗ್‌, ಇಂದಿರಾನಗರದ ಜನವಸತಿ ಪ್ರದೇಶದಲ್ಲಿ ಚರಂಡಿ ಸಮಸ್ಯೆಯಿಂದಾಗಿ ಮಳೆ ಬಂದಾಗ ರಸ್ತೆಯಲ್ಲೇ ನೀರು ಹರಿಯುತ್ತದೆ.
– ಹಳೆಯಂಗಡಿಯ ಮುಖ್ಯ ಜಂಕ್ಷನ್‌ನಲ್ಲಿ ಸರ್ವಿಸ್‌ ರಸ್ತೆಯ ನಿರ್ಮಾಣಕ್ಕೆ ಭೂಸ್ವಾಧೀನವಾಗಿದ್ದರೂ ಕಾಮಗಾರಿ ಆರಂಭವಾಗದೆ ಯೋಜನೆ ನನೆಗುದಿಗೆ ಬಿದ್ದಿದೆ.
– ಹಳೆಯಂಗಡಿ ಪೇಟೆಯಿಂದ ಸಸಿಹಿತ್ಲು, ಪಾವಂಜೆ, ಕೊಳುವೈಲು ಸಂಪರ್ಕಿಸುವ ಒಳ ಮಾರ್ಗವಾಗಿರುವ ಹರಿ ಭಟ್‌ ರಸ್ತೆಯ ವಿಸ್ತರಣೆಯಾಗಬೇಕಾಗಿದೆ.
– ಕರಿತೋಟ ಪ್ರದೇಶದಲ್ಲಿ ಕೃಷಿ ಭೂಮಿಗೆ ನೆರೆ ಹಾವಳಿ ಹಾಗೂ ಉಪ್ಪು ನೀರಿನಿಂದ ತೊಂದರೆಯಾಗುತ್ತಿದೆ. ಇದಕ್ಕೆ ತಡೆಗೋಡೆ ನಿರ್ಮಾಣವಾಗಬೇಕಾಗಿದೆ.

ಸೇತುವೆ ಮರೀಚಿಕೆ
ಆರು ವರ್ಷಗಳ ಹಿಂದೆ ಸ್ಥಳೀಯ ಸಂಘಟನೆ ಯೊಂದು ಕಾರ್ಡ್‌ ಚಳವಳಿ, ಸಹಿ ಸಂಗ್ರಹ ಅಭಿಯಾನ ನಡೆಸಿತ್ತು. ಹಳೆಯಂಗಡಿ ಪಂ. ನಲ್ಲಿ ಹಕ್ಕೊತ್ತಾಯದ ನಿರ್ಣಯ ಕೈಗೊಂಡು 10 ವರ್ಷಗಳಾಗಿವೆ. ನಾಲ್ಕು ವರ್ಷಗಳ ಹಿಂದೆ ಕಿನ್ನಿಗೋಳಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯೋರ್ವಳು ನೇರವಾಗಿ ಪ್ರಧಾನಿಗೆ ಪತ್ರ ಬರೆದು ಬೆಳಕಿಗೆ ಬಂದಿದ್ದರೂ ಅಧಿಕಾರಿಗಳು ಬಂದರೇ ವಿನಃ ಸೇತುವೆ ಮರೀಚಿಕೆಯಾಗಿದೆ. ಕಿನ್ನಿಗೋಳಿ ಸರ್ವಿಸ್‌ ಬಸ್‌ ಸಂಘಟನೆಯು ಪ್ರತಿಭಟನೆಯನ್ನು ನಡೆಸಿತ್ತು. ರೈಲ್ವೇ ಗೇಟ್‌ನಲ್ಲಿ ರಸ್ತೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಂತಾ ರಾಷ್ಟ್ರೀಯ ಸಂಸ್ಥೆಯೊಂದು ರಸ್ತೆ ಸುರಕ್ಷೆಗಾಗಿ ನಿರ್ಮಿಸಿದ ತಡೆಗೋಡೆಗೆ ಹಾನಿ ಮಾಡ ಲಾಗಿದೆ. ಹತ್ತಾರು ವರ್ಷಗಳಿಂದ ಮೇಲ್ಸೇ ತುವೆ ರಚಿಸಲು ಸಂಸದರು, ಶಾಸಕರು, ಅಧಿಕಾರಿಗಳು, ಎಂಜಿನಿಯರ್‌ಗಳು ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸುವ ಕೆಲಸ ನಡೆಯುತ್ತಲೇ ಇದೆ.

-ನರೇಂದ್ರ ಕೆರೆಕಾಡು

ಟಾಪ್ ನ್ಯೂಸ್

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್‌; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

6

Mangaluru: ಅಪಾರ್ಟ್‌ಮೆಂಟ್‌, ಮಾಲ್‌ಗ‌ಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ

5

Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು

4

Kulur: ಗೈಲ್‌ ಪೈಪ್‌ಲೈನ್‌ ಕಾಮಗಾರಿ; ಹೆದ್ದಾರಿ ಕುಸಿತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.