Rain: ಒಂದು ವಾರದಲ್ಲಿ ಸುರಿದದ್ದು ಕೇವಲ 85 ಮಿ.ಮೀ. ಮಳೆ !
Team Udayavani, Aug 10, 2023, 11:32 PM IST
ಮಂಗಳೂರು: ಕರಾವಳಿಯಲ್ಲಿ ಮುಂಗಾರು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ವಾರದಲ್ಲಿ ಸುರಿದದ್ದು ಕೇವಲ 85 ಮಿ.ಮೀ. ಮಳೆ. ಸುರಿಯಬೇಕಾಗಿರುವುದು 217.9 ಮಿ.ಮೀ. ಮಳೆ. ಸದ್ಯ ಶೇ. 61ರಷ್ಟು ಮಳೆ ಕೊರತೆ ಇದೆ.
ಈ ಬಾರಿ ರಾಜ್ಯ ಕರಾವಳಿ ತೀರಕ್ಕೆ ಮುಂಗಾರು ವಿಳಂಬವಾಗಿ ಜೂ. 8ರಂದು ಆಗಮಿಸಿದ್ದು, ಆರಂಭದ ಒಂದೆರಡು ದಿನ ಭಾರೀ ಮಳೆಯಾಗಿ ಬಳಿಕ ಕ್ಷೀಣಿಸತೊಡಗಿತ್ತು. ಮತ್ತೆ ಕಳೆದ ತಿಂಗಳಾಂತ್ಯಕ್ಕೆ ಬಿರುಸಿನ ಮಳೆಯಾಗಿ ಕಳೆದ ಒಂದು ವಾರದಿಂದ ಸೆಕೆಯ ವಾತಾವರಣ ಇದೆ.
ದ.ಕ. ಜಿಲ್ಲೆಯಲ್ಲಿ ಆ. 4ರಿಂದ ಆ. 10ರ ವರೆಗೆ 220.6 ಮಿ.ಮೀ. ವಾಡಿಕೆ ಮಳೆಯಲ್ಲಿ 96.5 ಮಿ.ಮೀ. ಸುರಿದು ಶೇ. 56ರಷ್ಟು ಮಳೆ ಕೊರತೆ ಇದೆ. ಉಡುಪಿ ಜಿಲ್ಲೆಯಲ್ಲಿ 273.6 ಮಿ.ಮೀ. ವಾಡಿಕೆ ಮಳೆಯಲ್ಲಿ 108.4 ಮಿ.ಮೀ. ಮಳೆಯಾಗಿ ಶೇ. 60ರಷ್ಟು ಕೊರತೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 197.3 ಮಿ.ಮೀ. ವಾಡಿಕೆ ಮಳೆಯಲ್ಲಿ 71.1 ಮಿ.ಮೀ. ಸುರಿದು ಶೇ. 64ರಷ್ಟು ಕೊರತೆ ಇದೆ.
ಗರಿಷ್ಠ ಉಷ್ಣಾಂಶ ಏರಿಕೆ
ಕರಾವಳಿ ಭಾಗದಲ್ಲಿ ಮಳೆ ದುರ್ಬಲಗೊಂಡಿದ್ದು, ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಾಣುತ್ತಿದೆ. ದಿನವಿಡೀ ಸೆಕೆಯ ವಾತಾವರಣ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ದಿನವಿಡೀ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವಾರಣ ಇತ್ತು. ಕೆಲವು ಕಡೆ ಬೆಳಗ್ಗೆ ಮಂಜಿನಿಂದ ಕೂಡಿತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಆ. 15ರ ಬಳಿಕ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ 30.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ, ವಾಡಿಕೆಗಿಂತ 2 ಡಿ.ಸೆ. ಹೆಚ್ಚು ಇತ್ತು. 24.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ 1 ಡಿ.ಸೆ. ವಾಡಿಕೆಗಿಂತ ಹೆಚ್ಚು ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.