Rain; ಶಂಕರನಾರಾಯಣ: ಮಳೆಗೆ ಅಪಾರ ಹಾನಿ: ಮರ ಬಿದ್ದು ಕಾರು ಜಖಂ
ಸಿಡಿಲು ಬಡಿದು ಯುವಕನಿಗೆ ಗಾಯ
Team Udayavani, Oct 9, 2024, 1:29 AM IST
ಕುಂದಾಪುರ: ಸೋಮವಾರ ರಾತ್ರಿಯ ಭಾರೀ ಗಾಳಿ – ಮಳೆಗೆ ಶಂಕರನಾರಾಯಣ ಗ್ರಾಮದ ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮಾವಿನಕೊಡ್ಲುವಿನ ಯುವಕನೊಬ್ಬನಿಗೆ ಸಿಡಿಲು ಬಡಿದು ಗಾಯಗೊಂಡ ಘಟನೆ ನಡೆದಿದೆ.
ಶಂಕನರಾಯಣ ಗ್ರಾಮದ ಅರಣ್ಯ ಇಲಾಖೆಯ ಅಧಿಕಾರಿಗಳ ಕಚೇರಿ ಬಳಿ ನಿಲ್ಲಿಸಿದ್ದ ಸ್ಥಳೀಯ ಹೊಟೇಲ್ ಮಾಲಕ ಮನೀಶ್ ಶೆಟ್ಟಿಯವರ ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ.
ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇರದಿದ್ದ ಕಾರಣ, ಯಾವುದೇ ಅಪಾಯ ಸಂಭವಿಸಿಲ್ಲ. ಹೊಟೇಲ್‌ನ ನಾಮಫಲಕಕ್ಕೆ ಹಾನಿಯಾಗಿದೆ. ಮರ ರಸ್ತೆ ಬದಿಯ ವಿದ್ಯುತ್ ತಂತಿಗಳ ಮೇಲೂ ಬಿದ್ದ ಪರಿಣಾಮ ಕಂಬಗಳು ಧರೆಗುರುಳಿವೆ.
ಸಿಡಿಲು ಬಡಿದು ಹಾನಿ
ಮಾವಿನಕೊಡ್ಲುವಿನ ಜ್ಯೋತಿ ಅವರ ಮನೆಗೆ ಸಿಡಿಲು ಬಡಿದಿದ್ದು ಅವರ 17 ವರ್ಷದ ಪುತ್ರ ಗಾಯಗೊಂಡಿದ್ದು, ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚೇತರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಕುಂದಾಪುರದಾದ್ಯಂತ
ಭಾರೀ ಮಳೆ
ಸೋಮವಾರ ರಾತ್ರಿಯಿಡೀ ಕುಂದಾಪುರ-ಬೈಂದೂರು ತಾಲೂಕಿ ನಾದ್ಯಂತ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ. ಗಾಳಿಯ ಅಬ್ಬರವೂ ಜೋರಿತ್ತು. ಗಾಳಿ – ಮಳೆಯಿಂದಾಗಿ ಹಲವೆಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೆಲವು ಕಡೆ ರಾತ್ರಿ ಸ್ಥಗಿತಗೊಂಡಿದ್ದ ವಿದ್ಯುತ್ ಮಂಗಳವಾರ ಬೆಳಗ್ಗೆಯಷ್ಟೇ ಬಂದಿತ್ತು.
ಹಾಲಾಡಿ ಪರಿಸರದಲ್ಲಿ ಭಾರೀ ಮಳೆ
ಮಂಗಳವಾರ ಸಂಜೆ ಬಳಿಕ ಹಾಲಾಡಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಭಾರೀ ಮಳೆ ಸುರಿದಿದೆ. ರಾತ್ರಿ 9 ಗಂಟೆಯಿಂದ 10.30ರ ವರೆಗೆ ನಿರಂತರ ಮಳೆ ಸುರಿದ ಪರಿಣಾಮ ಕೆಲವೆಡೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಗಾಳಿಯೂ ಇದ್ದುದರಿಂದ ಕೆಲವೆಡೆ ಮರ ಬಿದ್ದು ಸಣ್ಣ ಪುಟ್ಟ ಹಾನಿಗಳಾಗಿವೆ.
ಉಡುಪಿ, ಕಾರ್ಕಳ ಮಳೆ ಇಳಿಮುಖ
ಉಡುಪಿ ಮತ್ತು ಕಾರ್ಕಳ ತಾಲೂಕಿನಲ್ಲಿ ಸೋಮವಾರಕ್ಕೆ ಹೋಲಿಸಿದರೆ ಮಳೆ ಪ್ರಮಾಣ ಸಾಕಷುc ಇಳಿಕೆಯಾಗಿತ್ತು. ಹಗಲಿನಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣ ಇತ್ತು. ಉಡುಪಿಯಲ್ಲಿ ಸೋಮವಾರ ರಾತ್ರಿ ಗುಡುಗು ಮಿಂಚಿನೊಂದಿಗೆ ಭಾರೀ ಮಳೆ ಸುರಿದಿತ್ತು. ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಕಾರ್ಕಳ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಮಂಗಳವಾರ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿದಿದೆ. ಹಗಲಿನಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣವಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.