Rain ಕರಾವಳಿಯ ವಿವಿಧೆಡೆ ಗುಡುಗು ಸಹಿತ ಮಳೆ
Team Udayavani, Oct 31, 2023, 12:25 AM IST
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ನಂತರ ಗುಡುಗು ಸಹಿತ ಮಳೆಯಾಗಿದೆ.
ಕಡಬ, ನಿಂತಿಕಲ್ಲು, ಕೊಂಬಾರು, ಉಬರಡ್ಕ, ಸುಳ್ಯ, ಕುಂಬ್ರ, ಕೆಯ್ಯೂರು, ಮಾಡಾವು, ಬಡಕ್ಕೋಡಿ, ಕಡಿರುದ್ಯಾವರ ಸೇರಿದಂತೆ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕುಗಳ ವಿವಿಧೆಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಉಳ್ಳಾಲ, ಬಂಟ್ವಾಳ, ಸುರತ್ಕಲ್, ಕಾರ್ಕಳ, ಉಡುಪಿ, ಕುಂದಾಪುರ ಭಾಗದಲ್ಲೂ ಮಳೆಯಾಗಿದ್ದು, ಮಂಗಳೂರು ನಗರ, ಆಸುಪಾಸಿನಲ್ಲೂ ರಾತ್ರಿ ವೇಳೆ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ.
ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕರಾವಳಿಯ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೂಡುಬಿದಿರೆ: ಸಿಡಿಲಬ್ಬರದ ಮಳೆ
ಮೂಡುಬಿದಿರೆ: ಸೋಮವಾರ ರಾತ್ರಿ ಮೂಡುಬಿದಿರೆ ಪರಿಸರದಲ್ಲಿ ಗುಡುಗು ಸಿಡಿಲಬ್ಬರ ಸಹಿತ ಜಡಿಮಳೆ ಸುರಿಯಿತು. ಪೇಟೆಯಲ್ಲಿ, ಆಳ್ವಾಸ್, ಸ್ವರಾಜ್ಯ ಮೈದಾನ,ಬೋವಿಕೇರಿಗೆ ಸಾಗುವ ರಸ್ತೆ ಮೊದಲಾದೆಡೆ ಚರಂಡಿಗಳ ಒಳಗೆ ಮಳೆ ನೀರು ಹೋಗ ಲಾಗದಂತೆ ಕಾಮಗಾರಿ ನಡೆಸಿರುವ ಶಂಕೆ ಹುಟ್ಟುವಂತೆ ಮಳೆನೀರೆಲ್ಲ ಪ್ರವಾಹದೋಪಾಡಿ ರಸ್ತೆಯಲ್ಲಿಯೇ ಹರಿಯುವಂತಾಗಿದೆ. ರಸ್ತೆ ಬದಿಗಳೆಲ್ಲ ಕೊರೆದು ಹೋಗುವ ಸ್ಥಿತಿ ಇದೆ. ವಿದ್ಯುತ್ ಪೂರೈಕೆ ಆತಂಕಿತವಾಗಿದೆ.
ಶಾಲೆಗೆ ಸಿಡಿಲು ಬಡಿದು ಹಾನಿ
ಸಿದ್ದಾಪುರ: ನಂಚಾರು ಗ್ರಾಮದ ಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಸಂಜೆ ವೇಳೆ ಸಿಡಿದ ಗುಡುಗು ಮಿಂಚಿನ ಪರಿಣಾಮ ಶಾಲೆಯ ವಿದ್ಯುತ್ ಸಂಪರ್ಕ, ಉಪಕರಣಗಳು, ಗೋಡೆ, ಶೌಚಾಲಯದ ಕಟ್ಟಡಕ್ಕೆ ಹಾನಿ ಸಂಭವಿಸಿದೆ.
ಬೆಳ್ಳಾರೆ ಪರಿಸರದಲ್ಲಿ ಹಾನಿ
ಸುಳ್ಯ: ಬೆಳ್ಳಾರೆ ಪರಿಸರದಲ್ಲಿ ಸೋಮವಾರ ಸಂಜೆ ಗುಡುಗು, ಗಾಳಿ ಸಹಿತ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಹಾನಿ ಸಂಭವಿಸಿದೆ. ಬೆಳ್ಳಾರೆ ಭಾಗದಲ್ಲಿ ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಯಾ ಗಿದೆ. ಕೆಲವು ಮನೆಗಳ ವಿದ್ಯುತ್ ಮೀಟರ್‌ಗಳಿಗೂ ಹಾನಿಯಾಗಿದೆ. ಬೆಳ್ಳಾರೆ ಪರಿಸರದಲ್ಲಿ ರಾತ್ರಿ ವಿದ್ಯುತ್ ವ್ಯತ್ಯಯವಾಗಿತ್ತು. ರವಿವಾರ ಸಂಜೆ ಗಾಳಿ ಮಳೆಗೆ ಪೆರುವಾಜೆ ಭಾಗದಲ್ಲಿ ಹಲವೆಡೆ ಅಡಿಕೆ ಮರಗಳು, ವಿದ್ಯುತ್ ಕಂಬ ಗಳಿಗೆ ಹಾನಿಯಾಗಿದೆ. ಬೆಳ್ಳಾರೆಯ ಹಲವೆಡೆ ಚರಂಡಿ ಸಮಸ್ಯೆಯಿಂದ ಮಳೆ ನೀರು ಭಾರೀ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.