ತಮಿಳುನಾಡು, ಕೇರಳದಲ್ಲಿ ಮತ್ತೆ ಮಳೆ : ಕರ್ನಾಟಕದಲ್ಲೂ ಪರಿಣಾಮ!
ದ. ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ; ರಾಜ್ಯದ ಅಲ್ಲಲ್ಲಿ ಮಳೆ
Team Udayavani, Nov 23, 2021, 6:40 AM IST
ಚೆನ್ನೈ/ಹೈದರಾಬಾದ್: ತಮಿಳುನಾಡು ಮತ್ತು ಕೇರಳ ಸದ್ಯಕ್ಕಂತೂ ಮಳೆಯ ಕಾಟದಿಂದ ಪಾರಾಗುವ ಲಕ್ಷಣ ಗೋಚರಿಸುತ್ತಿಲ್ಲ. ಈಗಾಗಲೇ ಸತತ ವರ್ಷಧಾರೆ, ಪ್ರವಾಹ, ಮಳೆ ಸಂಬಂಧಿ ದುರಂತಗಳಿಂದ ಕಂಗೆಟ್ಟಿರುವ ಈ ರಾಜ್ಯಗಳಿಗೆ ಮತ್ತೊಂದು ಆಘಾತ ಎದುರಾಗಿದೆ.
ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇನ್ನು ನಾಲ್ಕೈದು ದಿನಗಳಲ್ಲಿ ತಮಿಳುನಾಡು ಕರಾವಳಿಯತ್ತ ಚಲಿಸಲಿದೆ. ಇದರ ಪರಿಣಾಮವಾಗಿ ಬುಧವಾರದಿಂದ ತಮಿಳುನಾಡು, ಪುದುಚೇರಿ, ಕಾರೈಕಲ್ ಗಳಲ್ಲಿ ಭಾರೀ ಮಳೆಯಾಗಲಿದೆ. ಕೊಯ ಮತ್ತೂರು, ಈರೋಡ್, ಕೃಷ್ಣಗಿರಿ, ಪುದುಕೋಟ್ಟೈ, ಅರಿಯಲೂರು, ಕಡಲೂರು, ಕರೂರು, ಪೆರಂಬಲೂರು, ತಿರುಚ್ಚಿ ಸಹಿತ ಹಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ. ಕೇರಳ, ಮಹಾರಾಷ್ಟ್ರ ಮತ್ತು ಗೋವಾದಲ್ಲೂ ಧಾರಾಕಾರ ಮಳೆಯಾಗಲಿದೆ. ಕರ್ನಾಟಕದ ಮಲೆನಾಡು, ಕರಾವಳಿಯಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಕಿರುತೆರೆ ನಟಿ ಮಾಧವಿ ಗೋಗಟೆ ನಿಧನ
ಇನ್ನೂ ಸರಿಯಾಗದ ತಿರುಪತಿ ಸಂಪರ್ಕ
ತಿರುಮಲ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ತಿರುಪತಿ ಯನ್ನು ಬೆಂಗಳೂರು, ಚೆನ್ನೈ, ಹೈದರಾಬಾದ್, ವಿಜಯವಾಡಕ್ಕೆ ಸಂಪರ್ಕಿಸುವ ತಾತ್ಕಾಲಿಕ ರಸ್ತೆಗಳ ಸಂಚಾರ ಸ್ಥಗಿತಗೊಂಡಿದೆ. ದೇಗುಲ ನಗರಿಯನ್ನು ಸಂಪರ್ಕಿಸುವ ಪ್ರಮುಖ ರೈಲ್ವೇ ಮಾರ್ಗ ಹಾನಿಗೀಡಾಗಿದೆ. ನ. 18ರಿಂದ 30ರ ಅವಧಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆಂದು ಟಿಕೆಟ್ ಬುಕ್ ಮಾಡಿದ್ದ ಭಕ್ತರಿಗೆ ಬೇರೆ ದಿನ ಅವಕಾಶ ಕಲ್ಪಿಸಲಾಗುತ್ತದೆ ಎಂದು ಟಿಟಿಡಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Highway: ಅಂಬಲಪಾಡಿ ಅಂಡರ್‌ಪಾಸ್: ಗೊಂದಲ ನಿವಾರಣೆಗೆ ರಮೇಶ್ ಕಾಂಚನ್ ಆಗ್ರಹ
Kasaragodu: ಉಪ್ಪಳ: ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
Malpe: ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಿಂದ ಕಾರ್ಗೋ ಶಿಪ್ ನಾರ್ವೆಗೆ ಹಸ್ತಾಂತರ
Inflation; 3 ತಿಂಗಳ ಕನಿಷ್ಠಕ್ಕೆ: ನವೆಂಬರ್‌ನಲ್ಲಿ ಶೇ.1.89ಕ್ಕಿಳಿಕೆ
Maharashtra; ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ: ಭುಜಬಲ್ ಅಸಮಾಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.