ವಾರದಲ್ಲೇ ಸುರಿದ ಮಳೆಗಾಲದ ಮಳೆ
Team Udayavani, Aug 13, 2019, 6:00 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಂಗಾರು ಹಂಗಾಮಿನಲ್ಲಿ ಈವರೆಗೆ ಇಡೀ ರಾಜ್ಯದಲ್ಲಿ ಸುರಿಯಬೇಕಾದ ಮಳೆ, ಏಳು ಜಿಲ್ಲೆಗಳಲ್ಲಿ ಕೇವಲ ಏಳು ದಿನಗಳಲ್ಲೇ ಸುರಿದಿದೆ! ಮಲೆನಾಡಿನ ನಾಲ್ಕು ಮತ್ತು ಉತ್ತರ ಕರ್ನಾಟಕದ
ಮೂರು ಜಿಲ್ಲೆಗಳಲ್ಲಿ ಕಳೆದ ಏಳು ದಿನಗಳಲ್ಲಿ ಸರಾಸರಿ 516 ಮಿ.ಮೀ. ಮಳೆ ಸುರಿದಿದೆ. ಇದು ಇಡೀ ರಾಜ್ಯದಲ್ಲಿ ಈವರೆಗಿನ ಮುಂಗಾರು ಹಂಗಾಮಿನಲ್ಲಿ (ಜೂನ್‌ನಿಂದ ಆಗಸ್ಟ್ 12ರವರೆಗೆ) ಸುರಿಯುವ
ವಾಡಿಕೆ ಮಳೆಗೆ ಸರಿಸಮ.
ಬೆಳಗಾವಿ, ಧಾರವಾಡ, ಹಾವೇರಿ ಸುತ್ತಲಿನ ಪ್ರದೇಶ ಹಾಗೂ ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಸುತ್ತಲಿನ ಭಾಗಗಳಿಗೆ ಸರಾಸರಿ ವಾಡಿಕೆ ಲೆಕ್ಕಹಾಕಿದರೆ, ಪ್ರಸಕ್ತ ಮುಂಗಾರಿನಲ್ಲಿ ಇದುವರೆಗೆ 107 ಮಿ.ಮೀ. ಮಳೆ ಬೀಳಬೇಕಾಗಿತ್ತು.
ಆದರೆ, ಐದುಪಟ್ಟು ಸುರಿದಿದೆ. ಇದೇ ಅವಧಿಯಲ್ಲಿ ಒಟ್ಟಾರೆ ರಾಜ್ಯದಲ್ಲಿ ಸುರಿಯಬೇಕಾದ ಮಳೆಗೆ (560 ಮಿ.ಮೀ.) ಹೆಚ್ಚು-ಕಡಿಮೆ ಸರಿಸಮವಾಗಿದೆ ಎಂದು ಹವಾಮಾನ ಇಲಾಖೆ ಅಂಕಿ-ಸಂಖ್ಯೆಗಳು
ಸ್ಪಷ್ಟಪಡಿಸುತ್ತವೆ.
ಹತ್ತು ದಿನಗಳಲ್ಲಿ!: ವಿಚಿತ್ರವೆಂದರೆ ರಾಜ್ಯದ ಮುಂಗಾರು ಹಂಗಾಮು ಜೂನ್ 1ರಿಂದ ಸೆಪ್ಟೆಂಬರ್ ಅಂತ್ಯದವರೆಗೆ ಸುರಿಯುವ ವಾಡಿಕೆ ಮಳೆ 832.3 ಮಿ.ಮೀ. ಈ ಪೈಕಿ ಶೇ. 62ರಷ್ಟು ಮಳೆ ಬರೀ ಈ 7 ಜಿಲ್ಲೆಗಳಲ್ಲಿ 7ದಿನಗಳಲ್ಲಿ ಸುರಿದಿದೆ. ಆ. 1ರಿಂದ 11- 578 ಮಿ.ಮೀ. ಅಂದರೆ
ಶೇ. 70ರಷ್ಟು ಮಳೆ ಬಿದ್ದಿದೆ! ಇದರರ್ಥ 30 ಜಿಲ್ಲೆಗಳ ಭೌಗೋಳಿಕ ಪ್ರದೇಶದಲ್ಲಿ ಸುರಿಯುವ ವಾಡಿಕೆ ಮಳೆ ಕೇವಲ ಏಳು ಜಿಲ್ಲೆಗಳ
ಭೌಗೋಳಿಕ ವ್ಯಾಪ್ತಿಯಲ್ಲಿ ಬಿದ್ದಿದೆ.
ರಾಜ್ಯದ ಮಳೆ ಜಿಲ್ಲೆಗೆ ಸೀಮಿತ: ರಾಜ್ಯಾದ್ಯಂತ ಹಂಚಿಕೆ ಆಗಬೇಕಾದ ಮಳೆ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದೆ. ಅದರ ಪ್ರಮಾಣ ರಾಜ್ಯದ ಪ್ರಸಕ್ತ ಮುಂಗಾರಿನ ವಾಡಿಕೆ ಮಳೆಗೆ ಹತ್ತಿರದಲ್ಲಿದ್ದರೂ ಅಚ್ಚರಿ ಇಲ್ಲ. ಇನ್ನು ಹೆಚ್ಚು ಮಳೆ ಬಿದ್ದ ಕಡೆಗಳಲ್ಲೆಲ್ಲಾ ಬೆಟ್ಟ ಗುಡ್ಡಗಳು ಇರುವುದನ್ನು
ಕಾಣಬಹುದು. ಅವು ಮಾರುತ ಗಳನ್ನು ತಡೆದು, ಅಧಿಕ ಮಳೆ ಸುರಿಸುತ್ತವೆ. ಇದರ ಜತೆಗೆ ಮಹಾರಾಷ್ಟ್ರದ ಜಲಾಶಯದಿಂದಲೂ ನೀರನ್ನು ಬಿಡುಗಡೆ ಮಾಡಲಾಯಿತು. ಇವೆರಡೂ ಕಾರಣದಿಂದ ಕರ್ನಾಟ
ಕವು ಮತ್ತೂಮ್ಮೆ ನೆರೆಗೆ ತುತ್ತಾಗಬೇಕಾಯಿತು ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಪ್ರಭಾರ ನಿರ್ದೇಶಕ ಸಿ.ಎಸ್. ಪಾಟೀಲ “ಉದಯವಾಣಿ’ಗೆ ತಿಳಿಸಿದರು.
ಎಲ್ಲೆಲ್ಲಿ ಎಷ್ಟು ಮಳೆ?
ಆ. 5ರಿಂದ 11ರವರೆಗೆ ಆಯ್ದ 7 ಜಿಲ್ಲೆಗಳಲ್ಲಿ ಸುರಿದ
ಮಳೆ ಪ್ರಮಾಣ ಹೀಗಿದೆ (ಮಿ.ಮೀ.ಗಳಲ್ಲಿ).
ಜಿಲ್ಲೆ ಮಳೆ
ಬೆಳಗಾವಿ 382.1
ಹಾವೇರಿ 313.3
ಧಾರವಾಡ 266
ಕೊಡಗು 893.8
ಚಿಕ್ಕಮಗಳೂರು 718
ಶಿವಮೊಗ್ಗ 729.4
ಹಾಸನ 312.4
ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.