ಕಜ್ಜಾಯ ಕೊಟ್ಟರು ರಾಜಪ್ಪ ಮಾಸ್ಟರ್‌!


Team Udayavani, May 19, 2020, 5:54 AM IST

imgp1

“ನೋಡಿ ಸ್ವಾಮಿ, ನಿಮ್ಮ ಹುಡುಗರು ನನ್ನ ಹೊಲ ಹಾಳು ಮಾಡವ್ರೆ. ಇದನ್ನೇ ಏನು ನೀವು ಇಸ್ಕೂಲ್ನಾಗೆ ಹೇಳ್ಕೊಡೋದು?’ ಎಂದು ಅಣ್ಣಪ್ಪ ಅಬ್ಬರಿಸಿದರು. 

ಬಾಲ್ಯದ ನೆನಪುಗಳಲ್ಲಿ ಮೀಯೋದೇ ಒಂದು ಖುಷಿಯ ಅನುಭವ. ಪದೇಪದೆ ನೆನಪಾಗುವ ನನ್ನ ಬದುಕಿನ ಘಟನೆ ಹೀಗಿದೆ. ನಮ್ಮ ಊರು ಚೌಡಗೊಂಡನಹಳ್ಳಿ ಅಂತ. ನಾಲ್ಕನೇ ತರಗತಿ ತನಕ, ಅಲ್ಲಿ ಶಾಲೆ ಇತ್ತು. ನಂತರ, ಎರಡು ಕಿಲೋಮೀಟರ್‌ ದೂರದ, ಉಪ್ಪರಿಗೇನಹಳ್ಳಿಯಲ್ಲಿದ್ದ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ್ದಾಯಿತು. ಇದನ್ನೇ, ಉನ್ನತ ವ್ಯಾಸಂಗಕ್ಕೆ ಬೇರೆ ನಗರಕ್ಕೆ ಹೋದಂತೆ ಕೊಚ್ಚಿಕೊಳ್ಳುತ್ತಿದ್ದೆವು.

ಕಾರಣ, ನಾಲ್ಕನೇ ತರಗತಿ ಪಾಸಾಗುವವರೇ ಅಂದು  ವಿರಳ. ನಮ್ಮ ತಂದೆ- ತಾಯಿ, ನಾಲ್ಕನೇ ಕ್ಲಾಸ್‌ ಪಾಸು. ಮಗ ಐದನೇ ಕ್ಲಾಸ್‌ಗೆ ಹೋದ ಎಂಬ ಅಭಿಮಾನ ಅವರಿಗೆ. ಉಪ್ಪರಿಗೇನಹಳ್ಳಿಗೆ ಹೋಗಲು ಯಾವುದೇ ಬಸ್‌ ಇರಲಿಲ್ಲ. ಪ್ರತಿದಿನ ನಡೆದೇ ಹೋಗುತ್ತಿದ್ದೆವು. ಹೇಳ್ಳೋರು, ಕೇಳ್ಳೋರು  ಯಾರೂ ಇಲ್ಲದ ಕಾರಣ, ದಾರಿಯುದ್ದಕ್ಕೂ ನಮ್ಮ ಆಟಗಳಿಗೆ ಕೊನೆ ಇರಲಿಲ್ಲ. ದಾರಿಯಲ್ಲಿದ್ದ ಹೊಲ- ಗದ್ದೆಗೆ ನುಗ್ಗಿ, ದಿನವೂ ಜೋಳದ ತೆನೆ, ಸಜ್ಜೆಯ ತೆನೆ, ಹೀಗೆ… ಒಂದೊಂದು ದಿನ ಒಂದು ತರಹದ ಬೆಳೆ ಕಿತ್ತು, ತಿಂದು, ಆನಂದ ಪಡುತ್ತಿದ್ದೆವು. ಜೊತೆಗೆ, ನಮ್ಮನ್ನು ಯಾರೂ ನೋಡಿಲ್ಲ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದೆವು.

ಇದೊಂಥರ ಆತಿಯಾದ ಆತ್ಮವಿಶ್ವಾಸಕ್ಕೆ ತಿರುಗಿ, ಒಂದಷ್ಟು ಸಜ್ಜೆಯನ್ನು ಬ್ಯಾಗಿಗೂ ಇಳಿಸಿಕೊಂಡು ಬಿಡುತ್ತಿದ್ದೆವು. ಹೀಗಿರುವಾಗ ಒಂದು  ದಿನ, ಹೊಲದ ಮಾಲೀಕ ಅಣ್ಣಪ್ಪ, ನಾವು ಶಾಲೆಗೆ ಹೋಗುವ ಮೊದಲೇ ಮುಖ್ಯಶಿಕ್ಷಕರ ಮುಂದೆ ಹಾಜರಾಗಿದ್ದರು. ನಾವು, ಅವರಿದ್ದರೆ ನಮಗೇನು ಅನ್ನೋ ರೀತಿ ಹೋದೆವು. ಆದರೆ, ಆ ಹೊತ್ತಿಗೆ, ನಮ್ಮ ಹುಡುಗಾಟಿಕೆ, ಚೇಷ್ಟೆ, ಕುಚೇಷ್ಟೆಗಳ ಜೊತೆಗೆ, ಸಜ್ಜೆ- ಜೋಳದ ತೆನೆಯನ್ನು ಬ್ಯಾಗಿಗೆ ಇಳಿಸಿಕೊಂಡ ಘಟನೆಯನ್ನು, ಮಾಸ್ತರರ ಕಿವಿಗೆ ಹಾಕಿದ್ದರು ಅಣ್ಣಪ್ಪ. ಈ ದೂರು ಕೇಳಿ ಸಿಟ್ಟಾಗಿದ್ದ ನಮ್ಮರಾಜಪ್ಪ  ಮಾಸ್ತರರು, ನಮ್ಮ ಕೈಚೀಲ ತಪಾಸಣೆ ಮಾಡಿಸಿದರು.

ಪ್ರತಿ  ಬ್ಯಾಗ್‌ನಲ್ಲಿ ಎರಡು- ಮೂರು ಸಜ್ಜೆ ತೆನೆಗಳು ಸಿಕ್ಕವು. “ನೋಡಿ ಸ್ವಾಮಿ, ನಿಮ್ಮ ಹುಡುಗರು ನನ್ನ ಹೊಲ ಹಾಳು ಮಾಡವ್ರೆ. ಇದನ್ನೇ ಏನು ನೀವು ಇಸ್ಕೂಲ್ನಾಗೆ ಹೇಳ್ಕೊಡೋದು?’ ಎಂದು ಅಣ್ಣಪ್ಪ ಅಬ್ಬರಿಸಿದರು. ಅದನ್ನು ಕೇಳಿದ ರಾಜಪ್ಪ  ಮಾಸ್ತರು, ಹಸಿ ಹುಣಸೇ ಬರಲಿನಿಂದ ನಮಗೆ ಚೆನ್ನಾಗಿ ಬಾರಿಸಿ- “ರೈತನು ಕಷ್ಟಪಟ್ಟು ಬೆಳೆದ ಬೆಳೆಯನ್ನ ಹಾಳು ಮಾಡಿದರೆ, ಇದೇ ಥರಾ ಕಜ್ಜಾಯ ಸಿಗುತ್ತೆ’ ಎಂದರು. ಅಂದಿನಿಂದ, ಸಜ್ಜೆ ಹೊಲ ಮತ್ತು ಹುಣಸೇ ಬರಲು  ನೋಡಿದಾಕ್ಷಣ, ರಾಜಪ್ಪ ಮಾಸ್ತರ್‌ ಏಟು ನೆನಪಾಗಿ, ಮೈ ಸವರಿಕೊಳ್ಳುವಂತಾಗುತ್ತದೆ.

* ಸಿ.ಜಿ. ವೆಂಕಟೇಶ್ವರ

ಟಾಪ್ ನ್ಯೂಸ್

Road Mishap: ತೆಕ್ಕಟ್ಟೆ: ಇನ್ನೋವಾ, ಮೀನಿನ ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಗಂಭೀರ

Road Mishap: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ… ಇಬ್ಬರು ಗಂಭೀರ

police crime

UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ

Terror 2

Pakistan;ಬಲೂಚಿಸ್ಥಾನದಲ್ಲಿ ಉಗ್ರರ ವಿರುದ್ಧ ಸಮಗ್ರ ಕಾರ್ಯಾಚರಣೆಗೆ ಮುಂದಾದ ಪಾಕ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

1-eeqweqweqwe

India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ

court

Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

Road Mishap: ತೆಕ್ಕಟ್ಟೆ: ಇನ್ನೋವಾ, ಮೀನಿನ ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಗಂಭೀರ

Road Mishap: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ… ಇಬ್ಬರು ಗಂಭೀರ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

police crime

UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.