![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Apr 17, 2023, 10:13 PM IST
ಪಿರಿಯಾಪಟ್ಟಣ: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಅಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ರಾಜಶೇಖರ ದೊಡ್ಡಣ್ಣ ಸೋಮವಾರ ಚುನಾವಣಾಧಿಕಾರಿ ಕುಸುಮಾ ಕುಮಾರಿಯವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು ಆಪ್ ಶ್ರೀಸಾಮಾನ್ಯರ ಪರವಾಗಿ ಹೋರಾಟ ಮಾಡುತ್ತಿದ್ದು ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಮುಲಾಗ್ರ ಬದಲಾವಣೆಗಾಗಿ ಪಣತೊಟ್ಟಿ ನಿಂತಿದೆ, ಅತ್ಯಂತ ಕಡಿಮೆ ಅವಧಿಯಲ್ಲಿ ದೇಶದ ಜನತೆಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಈಗಾಗಲೇ ರಾಷ್ಟ್ರೀಯ ಪಕ್ಷ ಎಂಬ ಹಣೆಪಟ್ಟಿ ಪಡೆದುಕೊಂಡಿರುವುದು ಪಕ್ಷದ ಮೇಲಿನ ವಿಶ್ವಾಸಕ್ಕಿಡಿದ ಕನ್ನಡಿಯಾಗಿದೆ ಎಂದರು.
ಆಪ್ ನಿಂದ ಪಿರಿಯಾಪಟ್ಟಣಕ್ಕೆ ವಿಶೇಷ ಪ್ರಣಾಳಿಕೆ:
ಈ ಬಾರಿ ನಮ್ಮ ಪಕ್ಷ ರಾಜ್ಯಕ್ಕೆ ವಿಶೇಷವಾದ ಪ್ರಣಾಳಿಕೆ ನೀಡಿದೆ, ಅದರಂತೆ ನಾವು ಅತ್ಯಂತ ಹಿಂದುಳಿದ ಪಿರಿಯಾಪಟ್ಟಣದ ಅಮುಲಾಗ್ರ ಬದಲಾವಣೆಗಾಗಿ ವಿಶೇಷ ಪ್ರಣಾಳಿಕೆಯನ್ನು ಹೊರತಂದಿದ್ದೇವೆ ಹಾಗಾಗಿ ಮೂರು ಪಕ್ಷಗಳನ್ನು ನೋಡಿ ಬೇಸತ್ತಿರುವ ತಾಲ್ಲೂಕಿನ ಜನತೆ ಈ ಬಾರಿ ನಮಗೆ ಆಶೀರ್ವಾದ ಮಾಡಬೇಕು. ಅದಕ್ಕಾಗಿ ನಮ್ಮ ಪ್ರಣಾಳಿಕೆಯಲ್ಲಿ ಅರೆಮಲೆನಾಡು ಎಂಬ ಖ್ಯಾತಿ ಪಡೆದಿರುವ ಪಿರಿಯಾಪಟ್ಟನದಲ್ಲಿ ತಂಬಾಕನ್ನು ಬದುಕಿನ ಹಾಸುಕೊಕ್ಕಾಗಿಸಿಕೊಂಡಿರುವ ರೈತರಿಗೆ ಕನಿಷ್ಠ ರೂ.300 ಬೆಂಬಲ ನೀಡುವುದು ಹಾಗೂ ದೂರದೂರಿಂದ ಮಾರುಕಟ್ಟೆಗೆ ಬರುವ ರೈತರ ಖರ್ಚು ತಗ್ಗಿಸುವ ಸಲುವಾಗಿ ತಾಲ್ಲೂಕಿನ ಪ್ರಮುಖ ವಾಣೀಜ್ಯ ಕೇಂದ್ರ ಹಾಗೂ ಹೋಬಳಿ ಕೇಂದ್ರವಾದ ಬೆಟ್ಟದಪುರದಲ್ಲಿ ನೂತನ ತಂಬಾಕು ಹರಾಜು ಮಾರುಕಟ್ಟೆಯನ್ನು ಸ್ಥಾಪಿಸುವುದು, ಇಲ್ಲಿನ ರೈತರು ರಾಗಿ ಬೆಳೆಗಿಂತ ಹೆಚ್ಚಾಗಿ ಮುಸುಕಿನ ಜೋಳ, ತೆಂಗು, ಅಡಿಕೆ, ಶುಂಠಿ ಸೇರಿದಂತೆ ಅನೇಕ ದ್ವಿದಳ ದಾನ್ಯಗಳು ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದರೂ ಇವುಗಳಿಗೆ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯಗಳಿಲ್ಲದೆ ರೈತರು ನರಳುತ್ತಿದ್ದಾರೆ ಇಂತವರಿಗೆ ಸರ್ಕಾರದ ವತಿಯಿಂದ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದು, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ತಾಲ್ಲೂಕಿಲ್ಲಿರುವ ಸರ್ಕಾರಿ ಶಾಲೆಗಳ ಬಲವರ್ಧನೆ, ಹಳೆ ಕಟ್ಟಡಗಳ ದುರಸ್ಥಿ, ಹಾಗೂ ನೂತನ ಕಟ್ಟಡಗಳಿಗೆ ಆಧ್ಯತೆ ನೀಡಉವ ಮೂಲಕ ಮೂಲಭೂತ ಶಿಕ್ಷಣಕ್ಕೆ ಒತ್ತು ನೀಡುವುದು ಹಾಗೂ ಉನ್ನತ ಶಿಕ್ಷಣಕ್ಕಾಗಿ ದೂರದೂರಿಗೆ ವಲಸೆ ಹೋಗುವ ವಿದ್ಯಾರ್ಥಿಗಳಿಗಾಗಿ ಇಂಜಿನೀಯರಿಂಗ್ ಕಾಲೇಜುಗಳ ಸ್ಥಾಪನೆಗೆ ಒತ್ತು ನೀಡುವುದು. ತಾಲ್ಲೂಕಿನಲ್ಲಿಯೇ ಉದ್ಯೋಗ ಸೃಷ್ಠಿಸುವ ಹಾಗೂ ನಿರುದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಸಣ್ಣ, ಮಧ್ಯಮ ಹಾಗೂ ಗುಡಿ ಕೈಕಾರಿಗೆಗಳ ಸ್ಥಾಪನೆಗೆ ಒತ್ತು ನೀಡುವುದು. ತಾಲ್ಲೂಕಿನ ಕೇಂದ್ರ ಸ್ಥಾನದಿಂದ ಕೇವಲ 20 ಕೀ.ಮಿ.ದೂರದಲ್ಲಿರುವ ಕಾವೇರಿ ನೀರನ್ನು ಪ್ರತಿ ಮನೆಮನೆಗೂ ತಲುಪಿಸುವ ಹಾಗೂ ಅದನ್ನು ಸದ್ಬಳಕೆಗೆ ಯೋಜನೆ ರೂಪಿಸುವುದು, ಪ್ರತಿ ತಿಂಗಳು 5 ಗ್ರಾಮಗಳಿಗೆ ಭೇಟಿ ನೀಡಿ ಅವುಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವುದು, ಸಣ್ಣ ರೈತರಿಗೆ ಟ್ರಾಕ್ಟರ್ ಹಾಗೂ ಡಿಸೇಲ್ ಸೌಲಭ್ಯ ಕಲ್ಪಿಸುವುದು, ಕೆರೆಗಳ ಒತ್ತುವರಿ ತೆರವುಗೊಳಿಸುವುದು, ನೀರಿನ ಮೂಲಗಳನ್ನು ರಕ್ಷಿಸಿ ಅಂತರ್ಜಲ ಹೆಚ್ಚಿಸುವುದು ಹಾಗೂ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಕೆರೆಗಳನ್ನು ಅಭಿವೃದ್ದಿ ಪಡಿಸಿ ಪ್ರವಾಸಿ ತಾಣವನ್ನಾಗಿಸುವುದು, ಹಾಗೂ ತಾಲ್ಲೂಕಿನಲ್ಲಿರುವ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಭೂವಿವಾದವನ್ನು ಮೆಟ್ಟಿ ನಿಲ್ಲುವ ಮೂಲಕ ತಾಲ್ಲೂಕನ್ನು ಭ್ರಷ್ಟಚಾರ ಮುಕ್ತ ತಾಲ್ಲೂಕನ್ನಾಗಿಸುವ ಮೂಲಕ ಸರ್ವಧರ್ಮದ ಶಾಂತಿಯ ತೋಟವಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದ್ದೇವೆ ಜನತೆ ಇದಕ್ಕೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪತ್ನಿ ನಾಗವೇಣಿ, ಪಕ್ಷದ ಅಧ್ಯಕ್ಷ ರೇಣುಕುಮಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗುಲಾಂ ಗೌಸ್, ಮುಖಂಡರಾದ ರವಿಕುಮಾರ್, ಸುಜನ್ ಕುಮಾರ್, ಅಕ್ಷತಾ ಮೌರ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.