Rajastan: ರಾಜೇಗೆ ಸಿಗಲಿದೆಯೇ ಮತ್ತೆ “ರಾಣಿ” ಭಾಗ್ಯ?
Team Udayavani, Nov 24, 2023, 12:21 AM IST
ರಾಜಸ್ಥಾನ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆಬಿದ್ದಿದೆ. ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸದೇ ಬಿಜೆಪಿ ಈ ಚುನಾವಣೆ ಎದುರಿಸುತ್ತಿದೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ರಾಜ್ಯಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ, ಪ್ರಧಾನಿ ಮೋದಿ ಜತೆಯೂ ವೇದಿಕೆ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ, ಈ ಚುನಾವಣಾ ಪರ್ವದಲ್ಲಿ ರಾಜೇ ಒಂದೇ ಒಂದು ಮಾಧ್ಯಮ ಸಂದರ್ಶನವನ್ನೂ ನೀಡಿಲ್ಲ.
ಈ ಎಲ್ಲದರ ಮಧ್ಯೆ, ಬಿಜೆಪಿ ಕಾರ್ಯಕರ್ತರಲ್ಲಿ ಮೂಡಿರುವ ಏಕೈಕ ಪ್ರಶ್ನೆಯೆಂದರೆ- ಬಿಜೆಪಿ ಹೈಕಮಾಂಡ್ ವಸುಂಧರಾ ರಾಜೇ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಏಕೆ ಘೋಷಿಸಿಲ್ಲ ಎನ್ನುವುದು. ವಸುಂಧರಾ ಅವರು ಈ ಹಿಂದೆ ಸಿಎಂ ಆಗಿದ್ದಾಗ ಎಷ್ಟು ಪ್ರಭಾವ ಹೊಂದಿದ್ದರೋ, ಅದೇ ಪ್ರಭಾವ, ಅದೇ ವರ್ಚಸ್ಸು, ಅದೇ ಜನಪ್ರಿಯತೆ ಈಗಲೂ ಇದೆ. ಅವರ ಭಾಷಣ ಕೇಳಲು ಮೂಲೆ ಮೂಲೆಗಳಿಂದಲೂ ಜನ ಬರುತ್ತಾರೆ. ರಾಜೇ ಅವರ 60 ಮಂದಿ ಆಪ್ತರಿಗೆ ಬಿಜೆಪಿ ಟಿಕೆಟ್ ಕೂಡ ನೀಡಿದೆ. ಹೀಗಾಗಿ ಬಿಜೆಪಿಗೆ ಬಹುಮತ ಬಂದರೂ, ಹೆಚ್ಚಿನ ಶಾಸಕರ ಬೆಂಬಲವೂ ರಾಜೇಗೆ ಸಿಗಲಿದೆ ಎನ್ನುವುದು ಅವರ ಬೆಂಬಲಿಗರ ನಂಬಿಕೆ.
ಇನ್ನು, ಪ್ರಧಾನಿ ಮೋದಿಯವರ ಮುಖ ನೋಡಿ ಮತ ಹಾಕಬೇಕೇ ವಿನಾ ಸಿಎಂ ಅಭ್ಯರ್ಥಿಯನ್ನು ನೋಡಿ ಅಲ್ಲ ಎನ್ನುವುದು ಕೆಲವು ಮುಖಂಡರ ಮಾತು. ಇದು ರಾಜೇ ಬೆಂಬಲಿಗರನ್ನು ಮಾತ್ರವಲ್ಲದೇ ಮತದಾರರನ್ನೂ ಗೊಂದಲಕ್ಕೀಡು ಮಾಡಿದೆ. ಈ ಎಲ್ಲದರ ನಡುವೆ, ಮಾಧ್ಯಮದವರು ಮೈಕ್ ತಂದು ಮುಂದಿಟ್ಟರೂ ರಾಜೇ ಮಾತ್ರ ಕೇವಲ ನಸುನಕ್ಕು ಸುಮ್ಮನಾಗುತ್ತಾರೆ. ಡಿ.3ರ ಬಳಿಕವೇ ಮಾತನಾಡುತ್ತೇನೆ ಎನ್ನುವುದು ಅವರ ದೃಢ ನಿರ್ಧಾರವೇ? ರಾಜಸ್ಥಾನದ ಅಧಿಕಾರದ ಚುಕ್ಕಾಣಿ ಮತ್ತೆ “ರಾಣಿ’ಯ ಕೈಗೆ ಬರಲಿದೆಯೇ? ಕಾದು ನೋಡುವುದಷ್ಟೇ ಉಳಿದಿರುವ ದಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.